ತಜ್ಞರ ಜೊತೆ ಸಿಎಂ ಮಹತ್ವದ ಸಭೆ : ಲಾಕ್ ಡೌನ್ ವಿಸ್ತರಣೆ ಆಗುತ್ತಾ..?
ಬೆಂಗಳೂರು : ಜೂನ್ ಏಳರ ಬಳಿಕ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಣೆ ಆಗುತ್ತಾ..? ಅಥವಾ ಹಂತ ಹಂತವಾಗಿ ಲಾಕ್ ಡೌನ್ ಸಡಿಳಿಕೆ ಮಾಡ್ತಾರಾ..? ಎಂಬ ಬಗ್ಗೆ ಈಗಾಗಲೇ ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ಹಲವಾರು ಸಚಿವರು ಲಾಕ್ ಡೌನ್ ಮುಂದುವರೆಸಿ ಎಂದರೇ ಇನ್ನೂ ಕೆಲವರು ಲಾಕ್ ಡೌನ್ ಬೇಡ ಎನ್ನುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಮಹತ್ವದ ಸಭೆಯನ್ನು ಕರೆದಿದ್ದಾರೆ. ಕರ್ನಾಟಕದಲ್ಲಿ ಲಾಕ್‍ಡೌನ್ ವಿಸ್ತರಣೆ ಮಾಡುವ ಅಥವಾ ಅನ್‍ಲಾಕ್ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಇದಾದ ಬಳಿಕ ಸಂಜೆ 6ಕ್ಕೆ ಸಚಿವರು, ಹಿರಿಯ ಅಧಿಕಾರಿಗಳ ಸಭೆಯನ್ನು ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ನಡೆಸಲಿದ್ದಾರೆ.
ತಜ್ಞರ ಸಭೆಯ ಸಲಹೆಗಳ ಬಗ್ಗೆ ಸಚಿವರು, ಅಧಿಕಾರಿಗಳ ಜೊತೆ ಮರು ಚರ್ಚೆ ನಡೆಸಲಿದ್ದು ಎಲ್ಲರ ಅಭಿಪ್ರಾಯ ಆಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಈ ಹಿಂದೆ ಲಾಕ್ ಡೌನ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ, ಜೂನ್ ಐದು, ಆರು ರಂದು ಪರಿಸ್ಥಿತಿ ನೋಡಿಕೊಂಡು ಲಾಕ್ ಡೌನ್ ಮುಂದುವರೆಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದರು.