ADVERTISEMENT
Thursday, August 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಚಿನ್ ತೆಂಡುಲ್ಕರ್ ಉತ್ತಮ ನಾಯಕನಲ್ಲ… ಹಾಗಂತ ಮದನ್ ಲಾಲ್ ಹೇಳ್ತಾ ಇಲ್ಲ..!

admin by admin
June 18, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

Related posts

ashoka-demands-drought-declaration-farmer-loan-waiver-nagendra-resignation

175 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಿ, ರೈತರ ಸಾಲ ಮನ್ನಾ ಮಾಡಿ, ಹಣ ಬಿಡುಗಡೆ ಬಗ್ಗೆ ನಿಖರವಾಗಿ ತಿಳಿಸಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

August 27, 2026
allu-arjun-forbes-india-showstoppers-2026-cover

ಫೋರ್ಬ್ಸ್ ಇಂಡಿಯಾ ಮುಖಪುಟದಲ್ಲಿ ʻಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್‌ʼ ಅಲ್ಲು ಅರ್ಜುನ್ ಮಿಂಚಿಂಗ್

August 27, 2026

ಸಚಿನ್ ತೆಂಡುಲ್ಕರ್ ಉತ್ತಮ ನಾಯಕನಲ್ಲ… ಹಾಗಂತ ಮದನ್ ಲಾಲ್ ಹೇಳ್ತಾ ಇಲ್ಲ..!

ಸಚಿನ್ ತೆಂಡುಲ್ಕರ್, ವಿಶ್ವ ಕ್ರಿಕೆಟ್‍ನಲ್ಲಿ ಗಾಡ್ ಆಫ್ ಕ್ರಿಕೆಟ್ ಅಂತ ಕರೆಯುತ್ತಾರೆ. ಯಾಕಂದ್ರೆ ತೆಂಡುಲ್ಕರ್ ತನ್ನ 24 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಾಡಿರುವ ಸಾಧನೆ ಆ ಮಟ್ಟದಲ್ಲಿದೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ದಾಖಲಿಸಿದ್ದಾರೆ. ಹಾಗೇ ನೂರು ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ.

ಅಷ್ಟೇ ಅಲ್ಲ, ಸಚಿನ್ ಕ್ರಿಕೆಟ್ ಆಡುತ್ತಿರುವಷ್ಟು ದಿನವೂ ಪ್ರತಿಯೊಬ್ಬರ ನಾಲಗೆಯ ಮೇಲೆ ಸಚಿನ್ ಹೆಸರು ನಲಿದಾಡುತ್ತಿತ್ತು. ಇನ್ನು ಕೈಯಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದಾಗಂತೂ ಸಚಿನ್ ಸಚಿನ್ ಸಚಿನ್ ಅನ್ನೋ ಮೂರು ಅಕ್ಷರದ ಪದಗಳು ಮೈದಾನದಲ್ಲಿ ಪ್ರತಿಧ್ವನಿಸುತ್ತಿತ್ತು. ಅಷ್ಟರ ಮಟ್ಟಿಗೆ ಸಚಿನ್ ಕ್ರಿಕೆಟ್ ಅಭಿಮಾನಿಗಳನ್ನು ಸಮ್ಮೋಹನಗೊಳಿಸಿದ್ದರು.

ಆದ್ರೆ ಸಚಿನ್ ತೆಂಡುಲ್ಕರ್ ನಾಯಕನಾಗಿ ಮಾತ್ರ ವೈಫಲ್ಯ ಅನುಭವಿಸಿದ್ದಾರೆ. ಯಾಕೋ ಏನು ಸಚಿನ್ ನಾಯಕತ್ವದ ಕಲೆಯನ್ನು ಅರಿತುಕೊಳ್ಳಲು ಸಾಧ್ಯವಾಗಲಿಲ್ಲ. ಒಬ್ಬ ವಿಶ್ವದ ಶ್ರೇಷ್ಠ ಆಟಗಾರನಾಗಿದ್ದ ಸಚಿನ್, ತಂಡವನ್ನು ಯಶಸ್ವಿಯಾಗಿ ಯಾಕೆ ಮುನ್ನೆಡೆಸಲು ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಹಾಗೂ ಆಟಗಾರ ಮದನ್ ಲಾಲ್ ಉತ್ತರ ನೀಡುತ್ತಾರೆ.

ನಾನು ಸಚಿನ್ ಉತ್ತಮ ನಾಯಕನಲ್ಲ ಎಂದು ಹೇಳುತ್ತಿಲ್ಲ. ಆದ್ರೆ ಸಮಸ್ಯೆ ಮಾತ್ರ ಅವರಲ್ಲೇ ಇತ್ತು. ಸಚಿನ್ ತಾನು ಚೆನ್ನಾಗಿ ಪ್ರದರ್ಶನ ನೀಡಬೇಕು. ಉತ್ತಮ ಮಟ್ಟದ ಆಟವನ್ನಾಡಬೇಕು ಎಂಬುದರ ಬಗ್ಗೆ ಜಾಸ್ತಿ ಯೋಚನೆ ಮಾಡುತ್ತಿದ್ದರು. ತನ್ನ ಆಟದ ಬಗ್ಗೆನೇ ತುಂಬಾ ಕಾಳಜಿ ಕೂಡ ವಹಿಸುತ್ತಿದ್ದರು. ಹೀಗಾಗಿ ಅವರಿಗೆ ತಂಡವನ್ನು ಮುನ್ನಡೆಸಲು ಅವರಿಗೆ ಕಷ್ಟಕರವಾಗುತ್ತಿತ್ತು ಎಂದು ಮದನ್ ಲಾಲ್ ಅಭಿಪ್ರಾಯಪಟ್ಟಿದ್ದಾರೆ.
ಒಬ್ಬ ನಾಯಕ ತನ್ನ ಆಟದ ಕಡೆಗೂ ಗಮನ ಹರಿಸಬೇಕು. ಹಾಗೇ ತಂಡದ ಇತರೇ ಆಟಗಾರರ ಬಗ್ಗೆಯೂ ಕಾಳಜಿಯನ್ನು ಹೊಂದಿರಬೇಕು. ಅವರ ಸಾಮಥ್ರ್ಯವನ್ನು ಅರಿತುಕೊಂಡು ಅವರಿಗೂ ಮಾರ್ಗದರ್ಶನಗಳನ್ನು ನೀಡಬೇಕು. ಆಗ ತಂಡಕ್ಕೆ ಒಳ್ಳೆಯದಾಗುತ್ತೆ. ನಾಯಕನಿಗೂ ಒಳ್ಳೆಯದಾಗುತ್ತೆ ಅಂತ ಹೇಳ್ತಾರೆ ಮದನ್ ಲಾಲ್.
ನಾಯಕ ತಂಡದ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಅವರಿಗೆ ಉತ್ತಮ ಅವಕಾಶಗಳನ್ನು ನೀಡಬೇಕು. ಆಗ ಆಟಗಾರರ ಜೊತೆಗೆ ಹೆಚ್ಚಾಗಿ ಬೆರೆಯಬೇಕು. ಆಗ ಆಟಗಾರರು ಯಾವುದೇ ಅಂಜಿಕೆಗಳು ಇಲ್ಲದೆ ನಾಯಕನಿಗೆ ಸಾಥ್ ಕೊಡ್ತಾರೆ. ಪಂದ್ಯದ ಗೇಮ್ ಪ್ಲಾನ್‍ಗಳ ಬಗ್ಗೆ ಚರ್ಚೆಯನ್ನು ಮಾಡ್ತಾ ಇರಬೇಕು. ಆಗ ಮಾತ್ರ ಯಶ ಸಾಧಿಸಲು ಸಾಧ್ಯ ಎಂಬುದು ಮದನ್ ಲಾಲ್ ಅವರ ಅಭಿಮತ.
ಇನ್ನು ಸಚಿನ್ ತೆಂಡುಲ್ಕರ್ ಪಂದ್ಯದ ಗತಿಯನ್ನು ಬಲುಬೇಗನೇ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಪಂದ್ಯದ ಗತಿಯನ್ನು ಅರಿತುಕೊಳ್ಳುವಂತಹ ಸಾಮಥ್ರ್ಯ ಅವರಲ್ಲಿತ್ತು. ಅಲ್ಲದೆ ಆಟಗಾರರು ಎಲ್ಲಿ ತಪ್ಪು ಮಾಡುತ್ತಿದ್ದಾರೆ. ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದನ್ನೇಲ್ಲಾ ಹೇಳುತ್ತಿದ್ದರು. ಆದ್ರೆ ಕೆಲವೊಂದು ಬಾರಿ ಹಿನ್ನಡೆಯಾಗುತ್ತದೆ. ಅವರು ಅವರ ಆಟದ ಕಡೆಗೆ ಹಚ್ಚಿನ ಗಮನ ಹರಿಸುತ್ತಿದ್ದರು. ಹಾಗಂತ ಅವರು ಉತ್ತಮ ನಾಯಕನಲ್ಲ ಎಂದು ಹೇಳಲು ಸಾಧ್ಯವಿಲ್ಲ ಅಂತ ಮದನ್ ಲಾಲ್ ಅಡ್ಡಗೋಡೆಯ ಮೇಲೆ ದೀಪವಿಟ್ಟವರಂತೆ ಹೇಳಿದ್ದಾರೆ.
ಸಚಿನ್ ತೆಂಡುಲ್ಕರ್ 73 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.ಇದ್ರಲ್ಲಿ ಗೆದ್ದಿರೋದು ಬರೀ 23 ಪಂದ್ಯಗಳು. 43 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಹಾಗೇ 25 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಕೇವಲ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. 9 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. 9 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

Tags: bccciICCIndian cricketindian teammadan lalsachiSachin Tendulkarteam indiatendulkar
ShareTweetSendShare
Join us on:

Related Posts

ashoka-demands-drought-declaration-farmer-loan-waiver-nagendra-resignation

175 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಿ, ರೈತರ ಸಾಲ ಮನ್ನಾ ಮಾಡಿ, ಹಣ ಬಿಡುಗಡೆ ಬಗ್ಗೆ ನಿಖರವಾಗಿ ತಿಳಿಸಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

by admin
August 27, 2026
0

ಸಚಿವ ನಾಗೇಂದ್ರ ರಾಜೀನಾಮೆ ನೀಡುವುದು ಖಚಿತ, ನಮ್ಮ ಹೋರಾಟಕ್ಕೆ ಬೆಲೆ ಸಿಗಲಿದೆ ಬೆಂಗಳೂರು,  ರಾಜ್ಯ ಸರ್ಕಾರ ಕಾಟಾಚಾರಕ್ಕೆ ಬರಗಾಲ ಘೋಷಣೆ ಮಾಡಿದೆ. ಆದರೆ 175 ತಾಲೂಕುಗಳಲ್ಲಿ ಬರ...

allu-arjun-forbes-india-showstoppers-2026-cover

ಫೋರ್ಬ್ಸ್ ಇಂಡಿಯಾ ಮುಖಪುಟದಲ್ಲಿ ʻಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್‌ʼ ಅಲ್ಲು ಅರ್ಜುನ್ ಮಿಂಚಿಂಗ್

by admin
August 27, 2026
0

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ, 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಅವರು ಫೋರ್ಬ್ಸ್ ಇಂಡಿಯಾದ ಪ್ರತಿಷ್ಠಿತ 'ಶೋಸ್ಟಾಪರ್ಸ್ 2026' ಆವೃತ್ತಿಯ ಕವರ್ ಸ್ಟಾರ್ ಆಗಿ ಸ್ಥಾನ ಪಡೆದಿದ್ದಾರೆ....

chikkanna-lakshmiputra-movie-release-date-november-27

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಬಿಡುಗಡೆ ದಿನಾಂಕ ಪ್ರಕಟ: ನವೆಂಬರ್ 27ಕ್ಕೆ ತೆರೆಗೆ

by admin
August 27, 2026
0

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಉಪಾಧ್ಯಕ್ಷ’ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ, ಇದೀಗ ಅವರು ನಾಯಕನಾಗಿ ನಟಿಸಿರುವ ಎರಡನೇ ಚಿತ್ರ...

andavapura-atma-scheme-krishi-sakhi-workshop-darshan-puttannaiah

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾರ್ಗದರ್ಶನ: ಪಾಂಡವಪುರದಲ್ಲಿ ಕೃಷಿ ಪರಿಣತರಿಂದ ತರಬೇತಿ

by admin
August 27, 2026
0

ಮಂಡ್ಯ: ಪಾಂಡವಪುರ ತಾಲ್ಲೂಕಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ (ಕೃಷಿ ಸಖಿಯರು) ಒಟ್ಟು 120 ಮಂದಿಗೆ ‘ಆತ್ಮ’ ಯೋಜನೆಯಡಿ ವಿಶೇಷ ಕಾರ್ಯಾಗಾರ...

dudda-mega-free-health-camp-darshan-puttannaiah

ದುದ್ದದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

by admin
August 27, 2026
0

ಮಂಡ್ಯ: ಜಿಲ್ಲಾಡಳಿತ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಕುಟುಂಬ ಕಲ್ಯಾಣ ಇಲಾಖೆ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್), ಕಿದ್ವಾಯಿ ಸಂಸ್ಥೆ (ಬೆಂಗಳೂರು), ಭಾರತೀಯ ರೆಡ್ ಕ್ರಾಸ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram