ಮೈಸೂರು: ಕೊರೊನಾ ಆತಂಕದ ನಡುವೆ ಐತಿಹಾಸಿಕ ದಸರಾವನ್ನು ಸರಳವಾಗಿ ಮಾಡಲು ಅರಮನೆ ಆಡಳಿತ ಮಂಡಳಿ ನಿರ್ಧರಿಸಿದೆ.
ಸಂಭ್ರಮದ ದಸರಾಗೆ ಆಡಳಿತಮಂಡಳಿ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದೆ.
ಇನ್ನೂ ನಾಡಹಬ್ಬ ದಸರಾಗಾಗಿ ಅರಮನೆ ಅಂಗಳಕ್ಕೆ ಅ.2 ರಂದು 5 ಆನೆಗಳು ಬರಲಿವೆ.
ಈ ಹಿನ್ನೆಲೆ ಆನೆಗಳ ತಾಲೀಮಿಗೆ ಅರಮನೆ ಒಳ ಆವರಣದಲ್ಲಿಯೇ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿಸಲಾಗಿದೆ.
ಕೊರೊನಾ ಕಾರಣದಿಂದಾಗಿ ಈ ಬಾರಿಯ ದಸರಾ ಜಂಬೂ ಸವಾರಿ ಕೇವಲ ಅರಮನೆ ಒಳಗೆ ಮಾತ್ರ ನಡೆಯಲಿದೆ.
ಹೀಗಾಗಿ ಆನೆಗಳ ತಾಲೀಮು ಅರಮನೆ ಆವರಣದಲ್ಲೇ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ದಸರಾ ಗಜಪಡೆಯ ಆನೆಗಳಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಿದ್ದು, ಸ್ವಚ್ಛತೆ ಹಾಗೂ ಆನೆಗಳ ತಾಲೀಮಿಗೆ ಸಿದ್ಧತೆ ಮಾಡಿಕೊಂಡಿದೆ.
ಇನ್ನೂ ಅರಮನೆ ಅಂಗಳಕ್ಕೆ ಆನೆ ಬರುವ ಮುನ್ನವೇ ಅರಮನೆಯಲ್ಲಿ ಆನೆ ಇರಿಸುವ ಸ್ಥಳ, ಸ್ನಾನ ಮಾಡಿಸುವ ಸ್ಥಳ ಸೇರಿದಂತೆ ಸುತ್ತಮುತ್ತಲಿನ ವಾತಾವರಣ ಸ್ವಚ್ಛ ಮಾಡಲಾಗುತ್ತಿದೆ.








