ಹೊರಗಡೆ ಓಡಾಡೋಕೆ ಬಿಡಲ್ಲ.. ಬಸ್ ಕ್ಯಾಬ್ ಇರುತ್ತೆ Kamal Pant saaksha tv
ಬೆಂಗಳೂರು : ರಾತ್ರಿ ಹತ್ತು ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಇರುತ್ತೆ. ಯಾರು ಹೊರಗಡೆ ಓಡಾಡೋಕೆ ಬಿಡಲ್ಲ ಎಂದು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ತಿಳಿಸಿದ್ದಾರೆ.
ನಗರದಲ್ಲಿ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನೈಟ್ ಕರ್ಪ್ಯೂ ಸರ್ಕಾರದ ಆದೇಶದ ಪ್ರಕಾರ ಇರುತ್ತೆ.
ನಗರದ ಏರಿಯಾಗಳಲ್ಲಿ ನಾಕಾಬಂಧಿ ಮಾಡಿ ಎಲ್ಲ ಕಡೆ ಬಂದ್ ಮಾಡ್ತೀವಿ. ನಮ್ಮ ಪ್ಯಾಟ್ರೋಲಿಂಗ್ ಇರುತ್ತೆ. ಉಲ್ಲಂಘನೆ ಮಾಡಿದ್ರೆ ಎನ್ಡಿಎಂಎ ಕೇಸ್ ಹಾಕಲಾಗುತ್ತೆ ಎಂದು ತಿಳಿಸಿದರು.
ಇನ್ನು ಆಸ್ಪತ್ರೆ ಹೋಗುವವರು ದಾಖಲೆ ತೋರಿಸಿ ಹೋಗಬಹುದು. ಟಿಕೆಟ್ ತೋರಿಸಿ ಪ್ರಯಾಣಿಕರು ಟ್ರಾವೆಲ್ ಮಾಡಬಹುದು.
ಇಂದಿರಾನಗರ, ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಜನ ಸೇರೊಕೆ ಬಿಡಲ್ಲ. ಸಿಸಿಟಿವಿ ಅಗತ್ಯ ಬಂದೊಬಸ್ತ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.