ಸುಳ್ಳು ಹೇಳಿದ್ದಾರೆ ಎಂಬ ಕಾರಣಕ್ಕೆ ಬಿಗ್ ಬಿ ಅಮಿತಾಬ್ ಬಚ್ಚನ್ ವಿರುದ್ಧ ದೂರು ದಾಖಲಾಗಿದೆ.
ಹೀಗಾಗಿ ಬಿಗ್ ಬಿ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ತೆರೆಯ ಮೇಲೆ ಹಾಗೂ ಹಿಂದೆಯೂ ಪರಿಶುದ್ಧತೆ ಕಾಪಾಡಿಕೊಂಡಿರುವ ಅಮಿತಾಬ್ ಬಚ್ಚನ್ ಮೇಲೆ ಸುಳ್ಳು ಹೇಳಿರುವ ಆರೋಪ ಮಾಡಲಾಗಿದೆ.
ಜಾಹೀರಾತಿನಲ್ಲಿ ನಟ ಅಮಿತಾಬ್ ಬಚ್ಚನ್ ಸುಳ್ಳು ಹೇಳಿ, ಗ್ರಾಹಕರನ್ನು ದಾರಿತಪ್ಪಿಸುವ ಪ್ರಯತ್ನ ಮಾಡಿದ್ದಾರೆ., ಸಣ್ಣ-ಮಧ್ಯಮ ಸಗಟು ವ್ಯಾಪಾರಿಗಳಿಗೆ ನಷ್ಟವಾಗುವ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ಒತ್ತಾಯಿಸಿದೆ.
ಆನ್ಲೈನ್ ಶಾಪಿಂಗ್ ಮಳಿಗೆ ಫ್ಲಿಪ್ಕಾರ್ಟ್ನ ರಾಯಭಾರಿ ಆಗಿರುವ ನಟ ಅಮಿತಾಬ್ ಬಚ್ಚನ್ ಫ್ಲಿಪ್ಕಾರ್ಟ್ನ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದರು.
ಜಾಹೀರಾತು ಫ್ಲಿಪ್ಕಾರ್ಟ್ನ ಬಿಗ್ಬಿಲಿಯನ್ ಡೇ ಕುರಿತಾದದ್ದಾಗಿತ್ತು. ಜಾಹೀರಾತಿನಲ್ಲಿ ಗುಣಮಟ್ಟದ, ದುಬಾರಿ ಸ್ಮಾರ್ಟ್ಫೋನ್ ಗಳನ್ನು ಕಡಿಮೆ ಬೆಲೆಗೆ ನೀಡುತ್ತಿರುವ ಆಫರ್ ಬಗ್ಗೆ ಹೇಳಿದ ವಿಷಯ ಇದಾಗಿತ್ತು. ಜಾಹೀರಾತಿನಲ್ಲಿ ಅಮಿತಾಬ್ ಬಚ್ಚನ್ ತಪ್ಪು ಮಾಹಿತಿ ನೀಡಿ ಗ್ರಾಹಕರ ದಾರಿ ತಪ್ಪಿಸಿದ್ದಾರೆ ಎಂದು ಸಿಎಐಟಿ ಆರೋಪಿಸಿದೆ. ಅಲ್ಲದೇ, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದಲ್ಲಿ ದೂರು ಸಲ್ಲಿಸಿದೆ.
ಜಾಹೀರಾತಿನಲ್ಲಿ ನಟಿಸಿ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿರುವ ನಟ ಅಮಿತಾಬ್ ಬಚ್ಚನ್ಗೆ 10 ಲಕ್ಷ ರೂ.ದಂಡ ವಿಧಿಸಬೇಕು ಹಾಗೂ ಈ ಕೂಡಲೇ ಜಾಹೀರಾತನ್ನು ಹಿಂಪಡೆಯುವಂತೆ ಫ್ಲಿಪ್ಕಾರ್ಟ್ಗೆ ಸೂಚಿಸಬೇಕು ಎಂದು ಮನವ ಮಾಡಲಾಗಿದೆ.