ಇವತ್ತಿಗೂ ಖಲಿಸ್ತಾನಿಗಳು ಇಂದಿರಾ ಹೆಸರು ಹೇಳಿದರೆ ನಡುಗುತ್ತಾರೆ : ಕಂಗನಾ

1 min read
kangana saaksha tv

ಇವತ್ತಿಗೂ ಖಲಿಸ್ತಾನಿಗಳು ಇಂದಿರಾ ಹೆಸರು ಹೇಳಿದರೆ ನಡುಗುತ್ತಾರೆ : ಕಂಗನಾ kangana saaksha tv

ನವದೆಹಲಿ : ಇವತ್ತಿಗೂ ಕೂಡಾ ಖಲಿಸ್ತಾನಿಗಳು ಇಂದಿರಾ ಹೆಸರು ಹೇಳಿದರೆ ನಡುಗುತ್ತಾರೆ. ದೇಶದ ಏಕಮಾತ್ರ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ, ಖಲಿಸ್ತಾನಿ ಅವರನ್ನು ತಮ್ಮ ಚಪ್ಪಲಿಯಡಿ ಹಾಕಿ ತುಳಿದು ಸಾಯಿಸಿದ್ದರು ಎಂದು ಕಂಗನಾ ಹೇಳಿದ್ದಾರೆ. ಆದ್ರೆ ಇಲ್ಲಿ ಅವರು ಇಂಧಿರಾ ಗಾಂಧಿ ಅವರನ್ನು ಹೊಗಲಿಲ್ಲ. ಬದಲಾಗಿ ರೈತ ಹೋರಾಟಗಾರರನ್ನು ಖಲಿಸ್ತಾನಿಗಳೆಂದು ಬಣ್ಣಿಸಿದ್ದಾರೆ.

ಕೃಷಿ ಕಾಯ್ದೆಗಳನ್ನ ಕೇಂದ್ರ ವಾಪಸ್ ಪಡೆಯುತ್ತಿದ್ದಂತೆ ಕಂಗನಾ ಫುಲ್ ರಾಂಗ್ ಆಗಿದ್ದಾರೆ. ಈ ಕುರಿತು ತಮ್ಮ ಇನ್ ಸ್ಟಾದಲ್ಲಿ ಸ್ಟೋರಿ ಬರೆದುಕೊಂಡಿರುವ ಅವರು, ‘ಖಲಿಸ್ತಾನಿಗಳು ಇವತ್ತು ಸರ್ಕಾರವನ್ನು ಬಾಗುವಂತೆ ಮಾಡಿರಬಹುದು. ಆದ್ರೆ ಈ ಸಂದರ್ಭದಲ್ಲಿ ಒಬ್ಬ ಮಹಿಳೆಯನ್ನು ನಾವು ಮರೆಯಬಾರದು. ದೇಶದ ಏಕಮಾತ್ರ ಮಹಿಳಾ ಪ್ರಧಾನಿ ಖಲಿಸ್ತಾನಿಗಳನ್ನ ತಮ್ಮ ಚಪ್ಪಲಿಯಡಿ ಹಾಕಿ ತುಳಿದು ಸಾಯಿಸಿದ್ದರು.

kangana saaksha tv

ಅವರು ದೇಶಕ್ಕೆ ಕೊಟ್ಟ ಕಷ್ಟ ಕಾರ್ಪಣ್ಯಗಳ ಹೊರತಾಗಿಯೂ, ಆಕೆ ತನ್ನ ಪ್ರಾಣವನ್ನು ಪಣಕ್ಕಿಟ್ಟು ಖಲಿಸ್ತಾನಿಗಳನ್ನು ಸೊಳ್ಳೆಗಳಂತೆ ಬಡಿದು ಹಾಕಿದರು. ಆದರೆ ಈ ಸಂದರ್ಭದಲ್ಲೂ ಅವರು ದೇಶ ಒಡೆದುಹೋಗದಂತೆ, ಒಗ್ಗಟ್ಟು ಮುರಿಯದಂತೆ ನೋಡಿಕೊಂಡರು. ಇವತ್ತಿಗೂ ಕೂಡಾ ಖಲಿಸ್ತಾನಿಗಳು ಇಂದಿರಾ ಹೆಸರು ಹೇಳಿದರೆ ನಡುಗುತ್ತಾರೆ, ಅವರಿಗೀಗ ಅಂಥ ಗುರುವೊಬ್ಬ ಬೇಕಿದೆ’ ಎಂದಿದ್ದಾರೆ.

ಆದ್ರೆ ಇಲ್ಲಿ ಕಂಗನಾ ಅವರು ರೈತರನ್ನು ಖಲಿಸ್ತಾನಿಗಳಿಗೆ ಹೋಲಿಸಿರೋದು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಕಾಲಿ ದಳ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd