“2 ಭಾರತದಿಂದ ಬಂದಿದ್ದೇನೆ” ಎಂದ ವೀರ್ ದಾಸ್ ವಿರುದ್ಧ ದೂರು ದಾಖಲು

1 min read
veer das saaksha tv

“2 ಭಾರತದಿಂದ ಬಂದಿದ್ದೇನೆ” ಎಂದ ವೀರ್ ದಾಸ್ ವಿರುದ್ಧ ದೂರು ದಾಖಲು veer das saaksha tv

ನವದೆಹಲಿ : ನಾನು ಎರಡು ಭಾರತದಿಂದ ಬಂದಿದ್ದೇನೆ ಎಂಬ ವಿಡಿಯೋ ವಿಚಾರವಾಗಿ ಕಾಮಿಡಿಯನ್ ವೀರ್ ದಾಸ್ ವಿರುದ್ಧ ದೂರು ದಾಖಲಾಗಿದೆ.

ವೀರ್ ದಾಸ್ ವಿರುದ್ಧ ದೆಹಲಿ ಬಿಜೆಪಿಯ ವಕ್ತಾರ ಆದಿತ್ಯ ಝಾ ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

veer das saaksha tv

ವೀರ್ ದಾಸ್ ಅವರ ನಾನು ಎರಡು ಭಾರತದಿಂದ ಬಂದಿದ್ದೇನೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಇದಕ್ಕೆ ಪರ-ವಿರೋಧ ಚರ್ಚೆಗಳು ಕೂಡ ನಡೆದಿತ್ತು.

ಇದೀಗ ವೀರ್ ದಾಸ್ ವಿದೇಶಿ ನೆಲದಲ್ಲಿ ದೇಶವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಕ್ತಾರರು ದೆಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅಲ್ಲದೆ ವೀರ್ ದಾಸ್ ಬಂಧನಕ್ಕೆ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಇದಲ್ಲದೆ ಮಂಗಳವಾರ ಮುಂಬೈನಲ್ಲೂ ವೀರ್ ದಾಸ್ ವಿರುದ್ಧ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd