ADVERTISEMENT
Saturday, March 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೊರೊನಾ ಲಸಿಕೆ ಹೇಗೆ,ಯಾರಿಗೆ,ಎಲ್ಲಿ ವಿತರಣೆ ಆಗುತ್ತೆ : ಸಂಪೂರ್ಣ ಮಾಹಿತಿ ಇಲ್ಲಿದೆ

Mahesh M Dhandu by Mahesh M Dhandu
January 4, 2021
in Newsbeat, Saaksha Special, ಎಸ್ ಸ್ಪೆಷಲ್
vaccine
Share on FacebookShare on TwitterShare on WhatsappShare on Telegram

ಕೊರೊನಾ ಲಸಿಕೆ ಹೇಗೆ,ಯಾರಿಗೆ,ಎಲ್ಲಿ ವಿತರಣೆ ಆಗುತ್ತೆ : ಸಂಪೂರ್ಣ ಮಾಹಿತಿ ಇಲ್ಲಿದೆ

 135 ಕೋಟಿ ಭಾರತೀಯರ ನಿದ್ದೆಗೆಡಿಸಿರುವ ಕೊರೊನಾವನ್ನ ದೇಶದಿಂದ ಓಡಿಸಲು ವಿಜ್ಞಾನಿಗಳು ನಡೆಸಿದ ಸಂಶೋಧನೆಗೆ ಫಲಸಿಕ್ಕಿದೆ. ಕೊರೊನಾ ವಿರುದ್ಧ ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿದೇಶನಾಲಯ ಅಧಿಕೃತ ಅನುಮೋದನೆ ನೀಡಿದೆ.

Related posts

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

March 13, 2026
ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

March 13, 2026

ಆದ್ರೆ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಲಸಿಕೆ ಹೇಗೆ ವಿತರಿಸಲ್ಪಡುತ್ತಿದೆ ಎಂಬ ಆಸಕ್ತಿ ಎಲ್ಲರಲ್ಲೂ ಮೂಡಿದೆ. ಈಗಾಗಲೇ ಎರಡು ಬಾರಿ ವ್ಯಾಕ್ಸಿನೇಷನ್ ಡ್ರೈ ರನ್ ನಡೆಸಿರುವ ಕೇಂದ್ರ ಸರ್ಕಾರ ವ್ಯಾಕ್ಸಿನೇಷನ್‍ಗೆ ಸಂಪೂರ್ಣ ಸಿದ್ಧವಾಗಿದೆ.

ಲಸಿಕೆ ಮೊದಲು ಯಾರಿಗೆ ನೀಡಲಾಗುತ್ತದೆ?

ಮೊದಲ ಹಂತದಲ್ಲಿ, ಕೋವಿಡ್ -19 ಲಸಿಕೆ ಅಡ್ಮಿನಿಸ್ಟ್ರೇಷನ್ ಮೇಲೆ ಸ್ಥಾಪಿಸಲಾಗಿರುವ ಎನ್‍ಇಜಿವಿಎಸಿ ರಾಷ್ಟ್ರೀಯ ತಜ್ಞರ ಸಮಿತಿಯ ಶಿಫಾರಸುಗಳ ಪ್ರಕಾರ, ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಒಂದು ಕೋಟಿ ವೈದ್ಯಕೀಯ ಸಿಬ್ಬಂದಿಗೆ ಮೊದಲು ಲಸಿಕೆ ನೀಡಲಾಗುವುದು. ಈ ಆರೋಗ್ಯ ಸಿಬ್ಬಂದಿಯನ್ನು ಮತ್ತೆ ಉಪ-ವರ್ಗಗಳಾಗಿ ವಿಂಗಡಿಸಲಾಗಿದೆ. ಫ್ರಂಟ್ಲೈನ್ ಆರೋಗ್ಯ ಮತ್ತು ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ (ಐಸಿಡಿಎಸ್) ಕಾರ್ಮಿಕರು, ದಾದಿಯರು, ಮೇಲ್ವಿಚಾರಕರು, ವೈದ್ಯಕೀಯ ಅಧಿಕಾರಿಗಳು, ಅರೆವೈದ್ಯಕೀಯ ಸಿಬ್ಬಂದಿ, ಸಹಾಯಕ ಸಿಬ್ಬಂದಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

corona vaccine
ಕೊರೊನಾ ವಿರುದ್ಧ ಹಗಲು ರಾತ್ರಿ ಹೋರಾಡುತ್ತಿರುವ, ಕೇಂದ್ರ ಮತ್ತು ರಾಜ್ಯ ಸಶಸ್ತ್ರ ಪಡೆ, ಹೋಮ್ ಗಾರ್ಡ್, ವಿಪತ್ತು ನಿರ್ವಹಣೆ, ನಾಗರಿಕ ರಕ್ಷಣಾ ಸಂಸ್ಥೆಗಳು, ಜೈಲು ಸಿಬ್ಬಂದಿ, ಪುರಸಭೆ ಮತ್ತು ಕಂದಾಯ ಅಧಿಕಾರಿಗಳು ಸೇರಿದಂತೆ 2 ಕೋಟಿ ಮಂದಿಗೆ ಲಸಿಕೆ ಕೊಡಲಾಗುತ್ತದೆ. ಈ ಪಟ್ಟಿಯಲ್ಲಿ ರಾಜ್ಯ ಸರ್ಕಾರಗಳ ಗೃಹ, ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಗಳಲ್ಲಿ ಕೆಲಸ ಮಾಡುವವರೂ ಸೇರಿದ್ದಾರೆ.

50 ವರ್ಷಕ್ಕಿಂತ ಮೇಲ್ಪಟ್ಟವರಿಗೆ

50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರಂಭಿಕ ಹಂತದಲ್ಲಿ ಲಸಿಕೆ ಹಾಕಲಾಗುತ್ತದೆ. ಇವರನ್ನ ಎರಡು ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರು. 50-60 ವಯಸ್ಸಿನವರು. ಮೊದಲು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ. ಇತ್ತೀಚಿನ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯ ಆಧಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಕೋವಿಡ್ -19 ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿರುವವರಿಗೆ ಲಸಿಕೆಗಳನ್ನು ಮೊದಲ ಕಂತಿನಲ್ಲಿ ನೀಡಲಾಗುತ್ತದೆ.

ಈ ವರ್ಷದ ಆಗಸ್ಟ್ ವೇಳೆಗೆ ಮೊದಲ ಕಂತಿನ ವಿತರಣೆ ಪೂರ್ಣಗೊಂಡರೆ, ಲಸಿಕೆಯ ಲಭ್ಯತೆಗೆ ಅನುಗುಣವಾಗಿ ಉಳಿದ ವರಿಗೆ ಲಸಿಕೆ ನೀಡಲಾಗುತ್ತಿದೆ.

ಲಸಿಕೆಗಾಗಿ ನೋಂದಾಯಿಸುವುದು ಹೇಗೆ?

ಲಸಿಕೆ ಪಡೆಯಲು ಸಾಮಾನ್ಯ ಜನರು ಆನ್‍ಲೈನ್‍ನಲ್ಲಿ ಮೊದಲೇ ನೋಂದಾಯಿಸಿಕೊಳ್ಳಬೇಕು. ಆಗಿಂದಾಗೆ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಲು ಸಾಧ್ಯವಿಲ್ಲ.

corona vaccine

ಕೋವಿನ್ -19 ಲಸಿಕೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕೋವಿನ್ ವೆಬ್‍ಸೈಟ್ ಅಥವಾ ಆಪ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಕೋವಿನ್ ವೆಬ್‍ಸೈಟ್ ಗೆ ಸರ್ಕಾರಿ ಫೋಟೋ ಗುರುತಿನ ಚೀಟಿ ಅಥವಾ ಆಧಾರ್ ಅನ್ನು ಅಪ್‍ಲೋಡ್ ಮಾಡಿ ಮತ್ತು ಹೆಸರು ಮತ್ತು ವಿಳಾಸದಂತಹ ವಿವರಗಳನ್ನು ಒದಗಿಸಬೇಕು. ನಂತರ ಮೊಬೈಲ್ ಗೆ ಒಟಿಪಿ ಬರುತ್ತದೆ. ಒಟಿಪಿ ನಮೂದಿಸಿದ ನಂತರ, ಲಸಿಕೆಗಾಗಿ ಯಾವ ದಿನಾಂಕ, ಸಮಯ ಮತ್ತು ಸ್ಥಳದ ವಿವರಗಳನ್ನು ಒದಗಿಸಲಾಗುತ್ತದೆ.

ಕೋವಿನ್ ಡಿಜಿಟಲ್ ವ್ಯವಸ್ಥೆಯನ್ನು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಕೋವಿನ್ ಅಪ್ಲಿಕೇಶನ್ ಈಗಾಗಲೇ ಆಂಡ್ರಾಯ್ಡ್ ಮತ್ತು ಆಪಲ್ ಫೋನ್‍ಗಳಲ್ಲಿ ಲಭ್ಯವಿದೆ.

ವ್ಯಾಕ್ಸಿನೇಷನ್ ಪ್ರಕ್ರಿಯೆ ಹೇಗೆ ನಡೆಯುತ್ತೆ..?

ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ನಡೆಸಲು ಮೂರು ಕೋಣೆಗಳ ಕೇಂದ್ರ ಇರಬೇಕು. ಒಂದು ಕೋಣೆ ವೇಟಿಂಗ್ ರೂಮ್ ಮತ್ತು ಇನ್ನೊಂದು ಕೋಣೆಯನ್ನು ಲಸಿಕೆ ನೀಡಲು ವೈದ್ಯರು ಬಳಸುತ್ತಾರೆ. ಮೂರನೇ ಕೋಣೆಯಲ್ಲಿ, ಲಸಿಕೆ ಹಾಕಿದ ವ್ಯಕ್ತಿಯನ್ನು ಅರ್ಧ ಘಂಟೆಯವರೆಗೆ ವೈದ್ಯಕೀಯ ವೀಕ್ಷಣೆಯಲ್ಲಿ ಇರಿಸಲಾಗುತ್ತದೆ. ಇದರಲ್ಲಿ ಐದು ಆರೋಗ್ಯ ಕಾರ್ಯಕರ್ತರು ಕೆಲಸದಲ್ಲಿರುತ್ತಾ.

corona vaccineಮೊದಲ ಸಿಬ್ಬಂದಿ ಫಲಾನುಭವಿಯ ಎಲ್ಲಾ ವಿವರಗಳನ್ನು ಪರಿಶೀಲಿಸುತ್ತಾರೆ. ಎರಡನೇ ಸಿಬ್ಬಂದಿ ವ್ಯಕ್ತಿಗೆ ಲಸಿಕೆ ಹಾಕಲು ಅವಕಾಶ ಮಾಡಿಕೊಡುತ್ತಾರೆ. ಮೂರನೇ ಸಿಬ್ಬಂದಿ ಲಸಿಕೆ ಪ್ರಮಾಣವನ್ನು ನೀಡುತ್ತಾರೆ. ಇತರ ಇಬ್ಬರು ಸಿಬ್ಬಂದಿಗಳು ಲಸಿಕೆ ಹಾಕಿದ ವ್ಯಕ್ತಿಯ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಾರೆ. ಈಗಾಗಲೇ 96 ಸಾವಿರ ವ್ಯಾಕ್ಸಿನೇಟರ್‍ಗಳಿಗೆ ತರಬೇತಿ ನೀಡಲಾಗಿದೆ. ಈ ಪೈಕಿ 2,360 ಜನರಿಗೆ ರಾಷ್ಟ್ರೀಯವಾಗಿ ತರಬೇತಿ ನೀಡಲಾಗಿದ್ದು, 715 ಜಿಲ್ಲೆಗಳಲ್ಲಿ 57,000 ಜನರಿಗೆ ತರಬೇತಿ ನೀಡಲಾಗಿದೆ.

ಲಸಿಕೆ ಎಲ್ಲಿ ನೀಡಲಾಗುತ್ತದೆ?
ವ್ಯಾಕ್ಸಿನೇಷನ್ ಕಾರ್ಯಕ್ರಮಗಳನ್ನು ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ವೈದ್ಯರು ಲಭ್ಯವಿರುವ ಒಂದು ನಿರ್ದಿಷ್ಟ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಶಾಲೆ ಮತ್ತು ಸಮುದಾಯ ಸಭಾಂಗಣಗಳನ್ನು ಸಹ ವ್ಯಾಕ್ಸಿನೇಷನ್ ಕೇಂದ್ರಗಳಾಗಿ ಪರಿವರ್ತಿಸಲಾಗುವುದು. ಇನ್ನು ಜನರಿಗೆ ಲಸಿಕೆ ನೀಡಲು ದೂರದ ಹಳ್ಳಿಗಳಲ್ಲಿ ಮೊಬೈಲ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಬೆಟ್ಟಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ವಾಸಿಸುವವರಿಗೆ ಆರೋಗ್ಯ ಸಿಬ್ಬಂದಿಯೇ ಲಸಿಕೆ ಹಾಕುತ್ತಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Corona VirusCovaxincovaxin vaccine
ShareTweetSendShare
Join us on:

Related Posts

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

by Shwetha
March 13, 2026
0

ಸದಾ ನಗುಮುಖದಿಂದಲೇ ಎಲ್ಲರ ಮನಸ್ಸು ಗೆದ್ದಿರುವ ರಶ್ಮಿಕಾ ಮಂದಣ್ಣ ಇದೀಗ ತೀವ್ರವಾಗಿ ಗರಂ ಆಗಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್, ನೆಗೆಟಿವ್ ಕಮೆಂಟ್...

ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

by Shwetha
March 13, 2026
0

ಬಿ. ವೈ. ವಿಜಯೇಂದ್ರ ರಾಜ್ಯ ಸರ್ಕಾರದ 2026-27ನೇ ಸಾಲಿನ ಬಜೆಟ್ ಕುರಿತು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ನೋಡಿದರೆ ಸರ್ಕಾರದ ಆರ್ಥಿಕ...

ಪ್ರೀತಿಗಾಗಿ ಗಡಿ ದಾಟಿದ ಜೋಡಿ ಮನೆಯವರ ವಿರೋಧದ ನಡುವೆ ಕೇರಳದಲ್ಲಿ ಹಸೆಮಣೆ ಏರಿದ ನಟಿ ಮೊನಾಲಿಸಾ ಭೋಸ್ಲೆ ಮತ್ತು ಮೊಹಮ್ಮದ್ ಫರ್ಮಾನ್

ಪ್ರೀತಿಗಾಗಿ ಗಡಿ ದಾಟಿದ ಜೋಡಿ ಮನೆಯವರ ವಿರೋಧದ ನಡುವೆ ಕೇರಳದಲ್ಲಿ ಹಸೆಮಣೆ ಏರಿದ ನಟಿ ಮೊನಾಲಿಸಾ ಭೋಸ್ಲೆ ಮತ್ತು ಮೊಹಮ್ಮದ್ ಫರ್ಮಾನ್

by Shwetha
March 13, 2026
0

ಕುಂಭಮೇಳದಲ್ಲಿ ಕಾಣಿಸಿಕೊಂಡು ರಾತ್ರೋರಾತ್ರಿ ಜನಪ್ರಿಯತೆ ಗಳಿಸಿ, ಬಳಿಕ ಆಲ್ಬಮ್ ಹಾಡುಗಳು ಹಾಗೂ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದ ಉದಯೋನ್ಮುಖ ನಟಿ ಮೊನಾಲಿಸಾ ಭೋಸ್ಲೆ ಇದೀಗ ತಮ್ಮ ದಿಟ್ಟ ನಿರ್ಧಾರದ...

ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿಗೆ ಅಪಮಾನ: ವಿಜಯಪುರದಲ್ಲಿ ಭುಗಿಲೆದ್ದ ಜನಾಕ್ರೋಶ, ಜಾಲತಾಣದಲ್ಲಿ ವಿಕೃತಿ ಮೆರೆದ ಸೈಬರ್ ಕಿಡಿಗೇಡಿ

ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿಗೆ ಅಪಮಾನ: ವಿಜಯಪುರದಲ್ಲಿ ಭುಗಿಲೆದ್ದ ಜನಾಕ್ರೋಶ, ಜಾಲತಾಣದಲ್ಲಿ ವಿಕೃತಿ ಮೆರೆದ ಸೈಬರ್ ಕಿಡಿಗೇಡಿ

by Shwetha
March 13, 2026
0

ಸಮಾನತೆಯ ಹರಿಕಾರ, ಕಾಯಕಯೋಗಿ ಬಸವಣ್ಣ ಹಾಗೂ ಅಪ್ರತಿಮ ಶಿವಶರಣೆ ಅಕ್ಕಮಹಾದೇವಿಯವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೀಳುಮಟ್ಟದ ಹಾಗೂ ವಿಕೃತ ಪೋಸ್ಟ್ ಹಾಕಿರುವ ಘಟನೆ ಇಡೀ ನಾಡಿನಾದ್ಯಂತ...

ಶಿಕ್ಷಕರಿಗೆ ಪಾಠ ಬಿಡಿಸಿ ಬೀದಿ ನಾಯಿ ಕಾಯುವ ಕೆಲಸ: ಸರ್ಕಾರದ ಅವೈಜ್ಞಾನಿಕ ಆದೇಶದ ವಿರುದ್ಧ ಶಶೀಲ್ ಜಿ. ನಮೋಶಿ ತೀವ್ರ ಆಕ್ರೋಶ

ಶಿಕ್ಷಕರಿಗೆ ಪಾಠ ಬಿಡಿಸಿ ಬೀದಿ ನಾಯಿ ಕಾಯುವ ಕೆಲಸ: ಸರ್ಕಾರದ ಅವೈಜ್ಞಾನಿಕ ಆದೇಶದ ವಿರುದ್ಧ ಶಶೀಲ್ ಜಿ. ನಮೋಶಿ ತೀವ್ರ ಆಕ್ರೋಶ

by Shwetha
March 13, 2026
0

ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರ ಮೇಲಿನ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ, ರಾಜ್ಯ ಸರ್ಕಾರವು ತೆಗೆದುಕೊಂಡಿರುವ ಒಂದು ಅಚ್ಚರಿಯ ನಿರ್ಧಾರ ತೀವ್ರ ವಿವಾದಕ್ಕೆ ಕಾರಣವಾಗಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram