ಜಮೀನುಗಾಗಿ 2 ಗುಂಪುಗಳು ನಡುವೆ ಘರ್ಷಣೆ| ಮೂವರಿಗೆ ಗಾಯ Saaksha Tv
ರಾಯಚೂರು: ಜಮೀನುಗಾಗಿ 2 ಗುಂಪುಗಳು ನಡುವೆ ಘರ್ಷಣೆ ನಡೆದರಿವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ವಿರುಪಾಪೂರ ಗ್ರಾಮದಲ್ಲಿ ನಡೆದಿದೆ.
30 ಗುಂಟೆ ಜಮೀನು ಮಾರಾಟದ ವಿಚಾರವಾಗಿ 2 ಗುಂಪುಗಳ ನಡುವೆ ಘರ್ಷಣೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿರುಪಾಪೂರ ಗ್ರಾಮದ ಶರಣಪ್ಪ ಮತ್ತು ನಿರುಪಾದಿ ಕುಟುಂಬದ ನಡುವೆ ಈ ಘರ್ಷಣೆ ನಡೆದಿದೆ. ಶರಣಪ್ಪ ಎಂಬಾತ ನಿರುಪಾದಿಗೆ 30 ಗುಂಟೆ ಜಮೀನು ಮಾರಾಟದ ಬಗ್ಗೆ ಒಪ್ಪಂದ ಆಗಿತ್ತು. ಈ ಹಿನ್ನೆಲೆ ನಿರುಪಾದಿ ಒಪ್ಪಂದದಂತೆ ಮುಂಗಡವಾಗಿ ಶರಣಪ್ಪಗೆ 3 ಲಕ್ಷ ರೂ. ನೀಡಿದ್ದಾನೆ. ಹಣ ಪಡೆದ ಶರಣಪ್ಪಗೆ ಜಮೀನು ಮಾರಾಟ ಮಾಡದಂತೆ ಮನೆಯಲ್ಲಿ ತಕರಾರು ಮಾಡಿದ್ದರು.
ಶರಣಪ್ಪ ಮನೆಯಲ್ಲಿ ತಕರಾರು ಮಾಡಿದ್ದರಿಂದ ನಿರುಪಾದಿಗೆ ಹಣ ವಾಪಸ್ ನೀಡಿದ್ದಾರೆ. ಈ ವೇಳೆ ಹಣ ವಾಪಸ್ ಪಡೆದ ನಿರುಪಾದಿ ಏಕಾಏಕಿ ಗುಂಪು ಕಟ್ಟಿಕೊಂಡು ಬಂದು ಜಗಳ ತೆಗೆದಿದ್ದಾನೆ. ಜಗಳವು ತಾರಕಕ್ಕೇರಿದ್ದು 2 ಗುಂಪುಗಳು ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ.
ಶರಣಪ್ಪ ಕಡೆಯವರ ಮೇಲೆ ನಿರುಪಾದಿ ಕಡೆಯವರು ಹಲ್ಲೆ ಮಾಡಿರುವ ಆರೋಪ ವ್ಯಕ್ತವಾಗಿದೆ. ಗಾಯಾಳುಗಳಾದ ಗೋವಿಂದಪ್ಪ, ಶಿವರಾಜ್, ಅಂಬರೀಶ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.