ಮೀನುಗಾರರ 2 ಗುಂಪುಗಳ ನಡುವೆ ಸಂಘರ್ಷ 6 ದೋಣಿಗಳು ಬೆಂಕಿಗಾಹುತಿ
1 min read
ಮೀನುಗಾರರ 2 ಗುಂಪುಗಳ ನಡುವೆ ಸಂಘರ್ಷ 6 ದೋಣಿಗಳು ಬೆಂಕಿಗಾಹುತಿ Saaksha tv
ಅಮರಾವತಿ: ಬಂಗಾಳಕೊಲ್ಲಿಯಲ್ಲಿ ಮೀನುಗಾರರ 2 ಗುಂಪುಗಳ ನಡುವೆ ಸಂಘರ್ಷವಾಗಿದೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದು, 6 ದೋಣಿಗಳಿಗೆ ಬೆಂಕಿ ಹಚ್ಚಿ ಸುಡಲಾಗಿದೆ. ಘಟನೆಯು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.
ಬಂಗಾಳಕೊಲ್ಲಿಯ ನಿರ್ಬಂಧಿತ ಪ್ರದೇಶದಲ್ಲಿ ರಿಂಗ್ ನೆಟ್ ಬಳಕೆಗೆ ಸಂಬಂಧಿಸಿ ವಾದ ನಡೆದಿತ್ತು. ವಾದ ಮಿತಿ ಮೀರಿ ಪರಸ್ಪರ ಗಲಾಟೆ ಗಾಯವಾಗಿದೆ. ಜೊತೆಗೆ ಒಬ್ಬರ ದೋಣಿ ಮೇಲೆ ಇನ್ನೊಬ್ಬರು ದಾಳಿ ನಡೆಸಿಕೊಂಡಿದ್ದಾರೆ. ಇದರಿಂದಾಗಿ ಹಲವರು ದೋಣಿಯಿಂದ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಗಲಾಟೆಯನ್ನು ಶಾಂತಗೊಳಿಸಿದರು.
ಈ ಹಿಂದೆಯೂ ಸಾಂಪ್ರದಾಯಿಕ ಬಲೆ ಬಳಸುವ ಮೀನುಗಾರರು ಮತ್ತು ರಿಂಗ್ ನೆಟ್‌ಗಳನ್ನು ಬಳಸುವವರ ನಡುವೆ ಗಲಾಟೆ ನಡೆದಿತ್ತು. ಕರಾವಳಿಯ 8 ಕಿಮೀ ವ್ಯಾಪ್ತಿಯಲ್ಲಿ ರಿಂಗ್ ನೆಟ್ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಆದರೂ ಇದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಈ ಬಗ್ಗೆ ಪೊಲೀಸ್ ಕಮಿಷನರ್ ಮನೀಶ್ ಕುಮಾರ್ ಸಿನ್ಹಾ ಮಾಹಿತಿ ನೀಡಿದ್ದಾರೆ.