ನವದೆಹಲಿ : ಲಡಾಕ್ ನ ಗಡಿ ಭಾಗದಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದ್ದು, ತೈವಾನ್ ಸುದ್ದಿ ವೆಬ್ ಸೈಟ್ ಪ್ರಕಟಿಸಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ವೈರಲ್ ಆಗುತ್ತಿದೆ. ಜೂ.15 ರಂದು ರಾತ್ರಿ ಲಡಾಕ್ ನ ಗಾಲ್ವಾನ್ ಪ್ರಾಂತ್ಯದಲ್ಲಿ ಭಾರತ-ಚೀನಾ ಯೋಧರ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದರಿಂದ ದೇಶದಾದ್ಯಂತ ಚೀನಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ತೈವಾನ್ ನ್ಯೂಸ್. ಕಾಮ್ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಠಿಸುತ್ತಿದೆ.
ಚಿತ್ರದಲ್ಲಿ ಏನಿದೆ?
ಸದ್ಯ ವೈರಲ್ ಆಗುತ್ತಿರುವ ಚಿತ್ರದಲ್ಲಿ ಶ್ರೀರಾಮ ಡ್ರ್ಯಾಗನ್ ವಿರುದ್ಧ ಬಿಲ್ಲು ಬಾಣ ಹಿಡಿದು ನಿಂತಿರುವುದನ್ನು ಚಿತ್ರಿಸಲಾಗಿದೆ. ಅಷ್ಟೇ ಅಲ್ಲದೇ We Conquer. We killಎಂಬ ಸಂದೇಶವನ್ನೂ ಬರಹದಲ್ಲಿ ಪ್ರಕಟಿಸಿದೆ.
ಈ ಚಿತ್ರವನ್ನು ಹಾಂಕ್ ಕಾಂಗ್ ನ ಸಾಮಾಜಿಕ ಜಾಲತಾಣ ಎಲ್ ಹೆಚ್ ಕೆ ಜಿಯಲ್ಲಿಯೂ ಪ್ರಕಟಿಸಲಾಗಿದ್ದು, ಹಾಂಕ್ ಕಾಂಗ್ ನ ಟ್ವಿಟ್ಟರ್ ಬಳಕೆದಾರ ಹೊಸೈಲೈ ಎಂಬ ವ್ಯಕ್ತಿ ಹಂಚಿಕೊಂಡಿದ್ದರು.
ಈ ಚಿತ್ರಕ್ಕೆ 24 ಗಂಟೆಗಳಲ್ಲಿ 861 ಲೈಕ್ ಗಳು 300 ರಿಟ್ವೀಟ್ ಗಳು ಬಂದಿವೆ. ಭಾರತದ ಸಾಮಾಜಿಕ ಜಾಲತಾಣಗಳಲ್ಲೂ ಈ ಚಿತ್ರ ವೈರಲ್ ಆಗಿದ್ದು, ನೆಟ್ಟಿಗರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.








