ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಕೇಂದ್ರ ಸರ್ಕಾರದ ಬೆಲೆ ನೀತಿ, ಬಡವರ ಬದುಕು ಹಾಗೂ ರೈತರ ಸಂಕಷ್ಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ನಡೆಸುತ್ತಿರುವ ‘ಜನಾಕ್ರೋಶ ಯಾತ್ರೆ’ಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಪಕ್ಷವು ಕೂಡ ‘ಜನಾಕ್ರೋಶ ಯಾತ್ರೆ’ ನಡೆಸಲಿದೆ ಎಂದು ಘೋಷಿಸಿದರು.
ಬಿಜೆಪಿಯ ಜನಾಕ್ರೋಶ ಯಾತ್ರೆ ಎನ್ನುವುದು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧವೇ ನಡೆಯುತ್ತಿರುವುದು ಹಾಸ್ಯಾಸ್ಪದವಾಗಿದೆ. ಜನರ ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆಯಿಂದ ಕಂಗಾಲಾಗುತ್ತಿದ್ದಾರೆ. ನಮ್ಮ ಸರ್ಕಾರ ಬಜೆಟ್ನಲ್ಲಿ ₹52 ಸಾವಿರ ಕೋಟಿ ರೂ. ಹೊರತುಪಡಿಸಿ ವಿವಿಧ ವರ್ಗದ ಜನರ ನೆರವಿಗೆ ಬಂದಿದೆ ಎಂದು ಅವರು ಹೇಳಿದರು.
ಲಇತ್ತೀಚೆಗೆ ಕಚ್ಚಾ ತೈಲದ ಬೆಲೆ ಇಳಿದರೂ, ಕೇಂದ್ರ ಸರ್ಕಾರ ಟ್ಯಾಕ್ಸ್ ಹಾಕಿ ಪೆಟ್ರೋಲ್ ಬೆಲೆಯನ್ನು ₹103ಕ್ಕೆ ತಲುಪಿಸಿದೆ. ಪ್ರತಿಯೊಂದು ಲೀಟರ್ಗೆ ₹43 ಲಾಭ ಪಡೆಯುತ್ತಿದ್ದಾರೆ. ಇದರಿಂದಾಗಿ ₹43 ಲಕ್ಷ ಕೋಟಿ ರೂ. ಲೂಟಿ ಸಾಧ್ಯವಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಚಿನ್ನ, ಸಿಮೆಂಟ್, ಕಬ್ಬಿಣ, ವಾಹನ, ಮೊಬೈಲ್, ಟಿವಿ, ಫ್ರಿಡ್ಜ್ ಸೇರಿದಂತೆ ಅನೇಕ ವಸ್ತುಗಳ ಬೆಲೆ ಉಲ್ಬಣಗೊಂಡಿರುವುದಾಗಿ ಅವರು ಹೇಳಿದರು . ಯುಪಿಎ ಕಾಲದಲ್ಲಿ ಚಿನ್ನ ₹28,000ದಷ್ಟು ಇತ್ತು. ಈಗ ನೋಡಿದ್ರೆ ಎಲ್ಲದರ ಬೆಲೆ ದ್ವಿಗುಣವಾಗಿದೆ. ಬಿಜೆಪಿಯವರಿಗೆ ಈ ಅತಿಯಾದ ಬೆಲೆ ಏರಿಕೆ ಕಾಣಿಸುತ್ತಿಲ್ಲವೇ? ಎಂದು ಕಿಡಿಕಾರಿದರು.
ನಾವು ಹಾಲಿನ ದರ ಹೆಚ್ಚಿಸಿದ್ದೇವೆ, ಏಕೆಂದರೆ ಅದು ರೈತರ ಬದುಕು ಉಳಿಸಲು ಅವಶ್ಯಕ. ನೀರಿನ ದರ ಏರಿಕೆ ಕಡಿಮೆ ಪ್ರಮಾಣದಲ್ಲಿದೆ. ಇನ್ನೂ ಹೆಚ್ಚಿಸಬಹುದಿತ್ತು, ಆದರೆ ಜನರ ದೃಷ್ಠಿಯಿಂದ ಹಿತಕರವಾಗಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದರು.
ಬ್ಯಾಂಕ್ಗಳಲ್ಲಿ ಚೆಕ್ ಬುಕ್ ತೆಗೆದುಕೊಂಡರೂ, ಪ್ರತಿಯೊಂದು ಟ್ರಾನ್ಸಾಕ್ಷನ್ಗೆ ದುಡ್ಡು ತೆರಬೇಕು. ಇದು ದೊಡ್ಡ ವಂಚನೆ. ಖರ್ಗೆ ಸಾಹೇಬರು ಹೇಳಿದಂತೆ ಇದು ಸ್ಕ್ಯಾಂಮ್ ಆಗಿದೆ. ಬಿಜೆಪಿ ಪೋಸ್ಟರ್ನಲ್ಲಿ ಸಿದ್ದರಾಮಯ್ಯನವರ ಫೋಟೋ ಬೇಡ. ನೀವು ಗ್ಯಾರಂಟಿ ಯೋಜನೆ ವಿರುದ್ಧ ಹೋರಾಡುತ್ತಿದ್ದರೆ, ನಿಮ್ಮ ನ್ಯಾಷನಲ್ ಲೀಡರ್ ಫೋಟೋ ಹಾಕಿ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.
ಈ ಮೂಲಕ ಡಿಕೆ ಶಿವಕುಮಾರ್ ಮಾಡಿರುವ ಆರೋಪಗಳು ಮತ್ತು ಟೀಕೆಗಳು ರಾಜ್ಯ ರಾಜಕೀಯದಲ್ಲಿ ಮತ್ತೊಂದು ತೀವ್ರ ಚರ್ಚೆಗೆ ದಾರಿ ಮಾಡಿದೆ.
![{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"435250766003211","type":"ugc"},{"id":"441845485021211","type":"ugc"},{"id":"289170894054211","type":"ugc"},{"id":"304699961364211","type":"ugc"}]}}](https://saakshatv.com/wp-content/uploads/2025/04/Picsart_25-04-10_19-36-22-967-750x500.jpg)







