ನವದೆಹಲಿ: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮೂಲಕ ಕಾಂಗ್ರೆಸ್ ಸೋಲಿಸಲು ಪಣತೊಟ್ಟರೆ, ಲೋಕಸಭೆಯಲ್ಲಿ ಕೂಡ ಗೆಲುವು ಸಾಧಿಸುವ ಇರಾದೆಯಲ್ಲಿ ಕಾಂಗ್ರೆಸ್ ಇದೆ.
ಹೀಗಾಗಿ ತಂತ್ರ- ಪ್ರತಿತಂತ್ರಗಳು ರೂಪಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕರ್ನಾಟಕದ(Karnataka) 28 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗೆ ವೀಕ್ಷಕರನ್ನು ನೇಮಕ ಮಾಡಿದೆ. ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದು, ಪ್ರತಿ ಕ್ಷೇತ್ರದಲ್ಲಿಯೂ ಎರಡರಿಂದ 3 ಹೆಸರು ಅಂತಿಮಗೊಳಿಸುವ ಜವಾಬ್ದಾರಿ ನೀಡಲಾಗಿದೆ. ಅಲ್ಲದೇ, ಅಖಿಲ ಭಾರತ ಕಾಂಗ್ರೆಸ್ ಸಮಿತಿ(AICC), ಪಕ್ಷ ಸಂಘಟನೆಗಾಗಿ ಬೆಂಗಳೂರು (Bengaluru) ನಗರವನ್ನು 5 ಜಿಲ್ಲೆಗಳಾಗಿ ವಿಂಗಡಣೆ ಮಾಡಿದ್ದು, ಈ 5 ಜಿಲ್ಲೆಗಳಿಗೆ ಹೊಸ ಅಧ್ಯಕ್ಷರನ್ನ ನೇಮಿಸಿದೆ.
ಈ ಮೂಲಕ ಬೆಂಗಳೂರು ನಗರಕ್ಕೆ- ಕೆವಿ ಗೌತಮ್, ಬೆಂಗಳೂರು ಪೂರ್ವ – ಉದಯ್ ಕುಮಾರ್, ಬೆಂಗಳೂರು ಪಶ್ಚಿಮ- ಹನುಮಂತ ರಾಯಪ್ಪ, ಬೆಂಗಳೂರು ಉತ್ತರ- ಅಬ್ದುಲ್ ವಾಜಿದ್, ಬೆಂಗಳೂರು ದಕ್ಷಿಣ – ಓ ಮಂಜುನಾಥ್ ನೇಮಕಗೊಂಡಿದ್ದಾರೆ.