ಸಿಖ್ಖರ ಕ್ಷಮೆಯಾಚಿಸಿದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು
ಚಂಡೀಗಡ: ಸಿಖ್ ಸಂಪ್ರದಾಯಕ್ಕೆ ವಿರುದ್ಧವಾಗಿ ಧಾರ್ಮಿಕ ಚಿಹ್ನೆವುಳ್ಳ ಶಾಲು ಧರಿಸುವ ಮೂಲಕ ಸಿಖ್ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಇದೀಗ ಕ್ಷಮೆಯಾಚಿಸಿದ್ದಾರೆ.
ಸಿಖ್ ರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದ ಹಿನ್ನೆಲೆ ಸಿಧು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಅಕಾಲ್ ತಖ್ತ್ ಜಾಥೆದಾರ್ ಗಿಯಾನಿ ಹರಪ್ರೀತ್ ಸಿಂಗ್ ಆಗ್ರಹಿಸಿದ್ದರು.
ಗ್ರಾ.ಪಂ.ಚುನಾವಣೆ | 5 ಮತಗಳ ಅಂತರದಲ್ಲಿ ಗೆದ್ದ ಮಂಗಳಮುಖಿ
ಇದೀಗ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಧು ‘ಶ್ರೀ ಅಕಾಲ್ ತಖ್ತ್ ಜಾಥೆದಾರ್ ಸರ್ವೋಚ್ಛ ಸ್ಥಾನದಲ್ಲಿದ್ದಾರೆ. ಗೊತ್ತಿಲ್ಲದೆಯೇ ಯಾವುದೇ ಒಬ್ಬ ಸಿಖ್ ವ್ಯಕ್ತಿಯ ಭಾವನೆಗೆ ಧಕ್ಕೆ ಮಾಡಿದ್ದರೂ ನಾನು ಕ್ಷಮೆಯಾಚಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಜಲಂಧರ್ನಲ್ಲಿ ರೈತರ ಜತೆ ನಡೆಸಿದ ಸಭೆಯ ಸಂದರ್ಭದಲ್ಲಿ ಸಿಧು ಅವರು, ಸಿಖ್ ಧಾರ್ಮಿಕ ಚಿಹ್ನೆವುಳ್ಳ ಶಾಲು ಧರಿಸಿದ್ದರು. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ಬಹಿರಂಗವಾಗಿ ಸಿಧು ಕ್ಷಮೆಯಾಚಿಸಬೇಕೆಂಬ ಒತ್ತಾಯಗಳು ಕೇಳಿಬಂದಿದ್ದವು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









