ಮೈಸೂರು: ಕಾಂಗ್ರೆಸ್ ಯುವ ಮುಖಂಡನೊಬ್ಬನ ಪುಂಡಾಟದ ವಿಡಿಯೋ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.
ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನೆವಲ್ ಅಶೋಕ್ ಮೊಬೈಲ್ ಅಂಗಡಿ ಯುವಕನ ಮೇಲೆ ಹಲ್ಲೆ ನಡೆಸಿ ಪುಂಡಾಟ ಮೆರೆದಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಜನರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಜಗನ್ಮೋಹನ್ ಪ್ಯಾಲೆಸ್ ಪಕ್ಕದಲ್ಲಿದ ಮೊಬೈಲ್ ಅಂಗಡಿಗೆ ಹೋಗಿ ಅಂಗಡಿಯಲ್ಲಿನ ಯುವಕನೊಂದಿಗೆ ಕಿರಿಕ್ ಮಾಡಿದ್ದಾನೆ.
ನಂತರ ಏಕಾಏಕಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಕೂಡಲೇ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಆತನನ್ನು ಮರಳಿ ಕಲುಹಿಸಿದ್ದಾರೆ. ಆತನ ಪುಂಡಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೊಲೀಸರ ಈ ನಡೆಗೆ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.