Priyank Kharge | ಬೆಂಗಳೂರು ಇವತ್ತು ಗಾಂಜಾ ಸಿಟಿಯಾಗಿದೆ
ಬೆಂಗಳೂರು : ಬೆಂಗಳೂರು ಸಿಲಿಕಾನ್ ಸಿಟಿ ಯಾಗಿತ್ತು. ಗಾರ್ಬೇಜ್ ಜೊತೆಗೆ ಇವತ್ತು ಗಾಂಜಾ ಸಿಟಿಯಾಗಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.
ಜೀವನ, ವಾಸಯೋಗ್ಯ ಸೂಚ್ಯಂಕದಲ್ಲಿ ಬೆಂಗಳೂರಿಗೆ ಕಳಪೆ ಅಂಕ ಬಂದಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಎಕನಾಮಿಕ್ಸ್ ಸರ್ವೆ ವರದಿಯನ್ನ ಮಾಡುತ್ತೆ. ವಿಶ್ವದ ೧೭೩ ನಗರಗಳನ್ನ ಅಧ್ಯಯನ ಮಾಡಿದೆ. ನಮ್ಮ ದೇಶದಿಂದ 5 ನಗರ ಮಾತ್ರ ಆಯ್ಕೆಯಾಗಿವೆ. ಇದನ್ನ ನೋಡಿದರೆ ಅಭಿವೃದ್ಧಿ ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.

ಇನ್ನು ನಮ್ಮ ದೇಶದ ಐದರಲ್ಲಿ ಬೆಂಗಳೂರು ಕೊನೆಯಲ್ಲಿದೆ. ಬೆಂಗಳೂರು ಸಿಲಿಕಾನ್ ಸಿಟಿ ಯಾಗಿತ್ತು, ಗಾರ್ಬೇಜ್ ಜೊತೆಗೆ ಇವತ್ತು ಗಾಂಜಾ ಸಿಟಿಯಾಗಿದೆ. ಕಲ್ಚರಲ್ ಸಿಟಿ ಇವತ್ತು ಕ್ರೈಂ ಸಿಟಿಯಾಗಿದೆ. ಕಮ್ಯೂನಲ್ ಸಿಟಿಯಾಗಿ ಮಾರ್ಪಾಡಾಗಿದೆ. ಇದು ಬೆಂಗಳೂರಿಗೆ ಸರ್ಕಾರದ ಕೊಡುಗೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ವಾಕ್ ಸ್ವಾತಂತ್ರ್ಯ ಅನ್ ಕಂಫರ್ಟಬಲ್. ಶಿಕ್ಷಣ,ವಸತಿ ವ್ಯವಸ್ಥೆ ಸರಿಯಿಲ್ಲ. ಇಂಧನ,ವಾಟರ್ ವ್ಯವಸ್ಥೆ ಸರಿಯಿಲ್ಲ. ಆದರೆ ಕಮ್ಯೂನಿಕೇಶನ್ ಮಾತ್ರ ಸರಿಯಿದೆ ಎಂದಿದೆ. ಇದನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಪ್ರಧಾನಿ ಬಂದಾಗ ರಸ್ತೆಯೇ ಕುಸಿದುಹೋಯ್ತು. ಡಾಂಬರ್ ಒಂದೇ ದಿನಕ್ಕೆ ಕಿತ್ತು ಹೋಯ್ತು. ಈಗ ೪೦% ಅಲ್ಲ ೪೦% ಕೇಂದ್ರಕ್ಕೆಹೋಗಲಿದೆ. ೪೦% ಇಲ್ಲಿಗೆ ಬರಲಿದೆ, ೨೦% ಮಾತ್ರ ಕೆಲಸ ಆಗಲಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.