Congress | ವೈಯಕ್ತಿಕ ಟೀಕೆ ಬೇಡ.. ನಮ್ಮ ಪ್ರಶ್ನೆಗೆ ಉತ್ತರಿಸಿ
ಬೆಂಗಳೂರು : ನಮಗೆ ವೈಯಕ್ತಿಕ ಟೀಕೆಯಲ್ಲಿ ಆಸಕ್ತಿ ಇಲ್ಲ, ಜನರ ಪರವಾಗಿ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಮಾಜಿ ಎಂಎಲ್ ಸಿ ರಮೇಶ್ ಬಾಬು ಆಗ್ರಹಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಬಾಬು, ಸಾಮಾಜಿಕ ಜಾಲತಾಣದಲ್ಲಿ #NimHatraIdyaUttara ಎಂದು ನಾವು ಕೇಳಿದ 50 ಪ್ರಶ್ನೆಗಳಲ್ಲಿ ಒಂದಕ್ಕೂ ಬಿಜೆಪಿ ಸರ್ಕಾರ ಉತ್ತರಿಸಿಲ್ಲ.
ಬಿಜೆಪಿ ಸರ್ಕಾರ ಮಂಡಿಸಿದ 3 ಬಜೆಟ್‌ಗಳಲ್ಲಿ ಸಾಲದ ಹೊರೆಯೇ ಹೆಚ್ಚಾಗಿದೆ. ಅವರು ಪ್ರಣಾಳಿಕೆಯಲ್ಲಿ ಕೊಟ್ಟಿದ್ದ 600 ಭರವಸೆಗಳಲ್ಲಿ ಕೇವಲ 10% ಈಡೇರಿಸಲೂ ಸಾಧ್ಯವಾಗಿಲ್ಲ.

ಸಂಕಲ್ಪ ಯಾತ್ರೆಯಲ್ಲಿನ ಬಿಜೆಪಿ ನಾಯಕರ ಎಲ್ಲಾ ಸ್ಕ್ರಿಪ್ಟ್ ಕೇಶವ ಕೃಪದಿಂದ ಬಂದಿದೆ.
ಆ ಮೂಲಕ ಅವರು ವ್ಯಕ್ತಿಗತ ಟೀಕೆ, ಪಲಾಯನವಾದ, ರಾಹುಲ್ ಗಾಂಧಿ ಅವರನ್ನು ಅವಹೇಳನ ಮಾಡುವಂಥ ಪರಿಪಾಠಕ್ಕೆ ಜೋತು ಬಿದ್ದಿದ್ದಾರೆ.
ನಮಗೆ ವೈಯಕ್ತಿಕ ಟೀಕೆಯಲ್ಲಿ ಆಸಕ್ತಿ ಇಲ್ಲ, ಜನರ ಪರವಾಗಿ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಿ ಎಂದು ಆಗ್ರಹಿಸಿದ್ದಾರೆ.