ಸೋತಾಗ ಮತ ಯಂತ್ರವನ್ನು ದೂರುವ ಕಾಂಗ್ರೆಸ್ ಗೆ ಗೆದ್ದಾಗ ಮತಯಂತ್ರ ಸರಿಯಾಗಿರುತ್ತದೆ – ಕೋಟ ಶ್ರೀನಿವಾಸ ಪೂಜಾರಿ Evm Congress complains
ಮಂಗಳೂರು, ನವೆಂಬರ್18: ಸೋತಾಗ ಮತ ಯಂತ್ರವನ್ನು ದೂರುವ ಕಾಂಗ್ರೆಸ್ ಪಕ್ಷಕ್ಕೆ, ಗೆದ್ದಾಗ ಮತಯಂತ್ರಕ್ಕೆ ಏನಾಗಿರುತ್ತದೆ ? ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ. Evm Congress complains

ಸುದ್ದಿಗಾರರೊಂದಿಗೆ ಮಾತಾಡಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಯಾವುದೇ ರಾಜಕೀಯ ಪಕ್ಷವಿರಲಿ ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಆದರೆ ಕಾಂಗ್ರೆಸ್ ಪಕ್ಷದ ಮುಖಂಡ ಸಿದ್ಧರಾಮಯ್ಯ ಅವರಿಗೆ ಗೆದ್ದ ಸಂದರ್ಭದಲ್ಲಿ ಮತಯಂತ್ರ ಸರಿ ಇರುತ್ತದೆ, ಸೋತಾಗ ಮಾತ್ರ ಮತಯಂತ್ರ ಹಾಳಾಗಿದೆ ಎಂದು ದೂರುತ್ತಾರೆ. ಇಂತಹ ಮಾತುಗಳು ಅವರಂತಹ ದೊಡ್ಡ ವ್ಯಕ್ತಿಗಳಿಗೆ ಭೂಷಣವಲ್ಲ. ಮತಯಂತ್ರ ಕೆಟ್ಟಿಲ್ಲ, ಅವರ ಮನಸ್ಸು ಕೆಟ್ಟಿದೆ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟರು.
ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ : ಸಿಎಂಗೆ ಥ್ಯಾಂಕ್ಸ್ ಹೇಳಿದ ನಿಖಿಲ್
ಎಲ್ಲಾ ಆರೋಗ್ಯ ಇಲಾಖೆಗಳಲ್ಲಿ ಕೋವಿಡ್-19 ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ ಎಂದ ಅವರು ಏನಾದರೂ ಲೋಪ ದೋಷಗಳಾಗಿದ್ದಲ್ಲಿ, ಸಾರ್ವಜನಿಕರಿಂದ ದೂರು ಬಂದಲ್ಲಿ, ಸಮೀಪದ ಆಸ್ಪತ್ರೆಗೆ ಅಗತ್ಯವಿದ್ದಲ್ಲಿ ಕ್ಯಾಂಪ್ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಆರಂಭದಲ್ಲಿ ಸಣ್ಣ ಪುಟ್ಟ ದೂರುಗಳು ಬರುವುದು ಸಹಜ. ಅದನ್ನು ಸರಿ ಪಡಿಸುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕೊರೋನಾ ಹಾವಳಿಯಿಂದಾಗಿ ಸಪ್ತಪದಿ ಕಾರ್ಯಕ್ರಮ ಸ್ಥಗಿತಗೊಂಡಿದ್ದು, ಕೊರೋನಾ ಮಾರ್ಗಸೂಚಿಗಳನ್ನು ಅಳವಡಿಸಿಕೊಂಡು ಮುಹೂರ್ತ ನಿಗದಿ ಪಡಿಸುತ್ತೇವೆ.
ಎಲ್ಲಾ ಸಾಂಪ್ರದಾಯಿಕವಾದ ಪೂಜೆ, ಜಾತ್ರೆಗಳನ್ನು
ಕೊರೊನಾ ನಿಯಮಾನುಸಾರ ನಡೆಸುವ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1320245985381994496?s=19
https://twitter.com/SaakshaTv/status/1328731317991735296?s=19








