ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗೆಹ್ಲೋಟ್ ಗೆ ಚಾನ್ಸ್..? ಕಣ್ಣಿಟ್ಟ ಶಶಿ ತರೂರ್ …
ಅಂತೂ ಇಂತೂ ಕಾಂಗ್ರೆಸ್ ಗೆ ಗಾಂಧಿ ಕುಟುಂಬದ ಹೊರತಾಗಿ ಸಾರಥಿಯೊಬ್ಬರು ಆಯ್ಕೆಯಾಗುವುದು ಪಕ್ಕಾ ಆಗಿದೆ. ಗಾಂಧೀ ಕಟುಂಬದ ನಿಷ್ಠ ವ್ಯಕ್ತಿ ಅಧ್ಯಕ್ಷ ಗಾದಿಗೇರುವುದು ಬಹುತೇಕ ಪಕ್ಕಾ ಆಗಲಿದೆ. ಚುನಾವಣೆ ಮೂಲಕವೇ ಅಧ್ಯಕ್ಷರ ಆಯ್ಕೆ ನಡೆಯಲಿದೆಯಾದರೂ ಗಾಂಧೀ ಕಟುಂಬದ ಕಣ್ಸನ್ನೆ ಯಾರ ಮೇಲಿದೆವೋ ಅವರೇ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿರುತ್ತೆ.
ರಾಹುಲ್ ಗಾಂಧಿ ಸ್ಪರ್ಧಿಸದಿದ್ದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮನಸ್ಸು ಮಾಡಿರುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದು ರಾಜ್ಯದ ಕಾಂಗ್ರೆಸ್ ಶಾಸಕರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಅಶೋಕ್ ಗ್ಲೆಹ್ಲೋಟ್ ಅವರು ರಾಹುಲ್ ಗಾಂಧಿಯವರನ್ನ ಮನವೊಸಲಿಸಲು ಕೊನೆಯದಾಗಿ ಕೇರಳಕ್ಕೆ ತೆರಳುತ್ತಿದ್ದು, ರಾಹುಲ್ ಒಪ್ಪಿಕೊಳ್ಳದಿದ್ದರೆ ಅಶೋಕ್ ಗ್ಲೆಹೋಟ್ ಅವರ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾ್ಗಿದೆ.
ಆದರೆ ಇಷ್ಟು ವರ್ಷಗಳ ಕಾಲ ರಾಜ ಪಂರಂಪರೆಯಂತೆ ಒಂದೇ ಕುಟುಂಬದ ಆಳ್ವಿಕೆಗೆ ಒಗ್ಗಿಕೊಂಡಿರುವ ಕಾಂಗ್ರೆಸ್ ಗೆ ಈಗ ಅಶೋಕ್ ಗ್ಲೆಹೋಟ್ ಎಷ್ಟರ ಮಟ್ಟಿಗೆ ಬಲಿಷ್ಠ ಅಧ್ಯಕ್ಷರಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದು ಮುಂದಿರುವ ಪ್ರಶ್ನೆ.
ಒನ್ ಮ್ಯಾನ್ ಶೋನಂತೆ ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆಹಾಕುತ್ತಿರುವ ರಾಹುಲ್ ಗಾಂಧಿಯಯನ್ನೂ ಮೀರಿಸಿ ಕಾಂಗ್ರೆಸ್ ನ ಪ್ರಭಾವಿ ವ್ಯಕ್ತಿಯಾಗಿ ಜವಬ್ದಾರಿ ಹೊತ್ತುಕೊಳ್ಳುವುವುದು ರಾಜಸ್ಥಾನದ ಮುಖ್ಯಮಂತ್ರಿಗಿರುವ ಬಹುದೊಡ್ಡ ಅಡೆತಡೆ.
ರಾಹುಲ್ ಅಧ್ಯಕ್ಷರಾಗುತ್ತಾರೋ ಇಲ್ಲವೋ ಎಂಬುದಕ್ಕಿಂತ ಭಾರತ್ ಜೊಡೋ ಯಾತ್ರೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಬಲಾಬಲದ ಬಗ್ಗೆ ಹೆಚ್ಚು ಚಿಂತೆ ನಡೆಯುತ್ತಿದೆ. ಇಲ್ಲಿಯವರೆಗೆ ಕಾಂಗ್ರೆಸ್ ನ ತಳಮಟ್ಟದ ಕಾರ್ಯಕರ್ತರನ್ನ ತಲುಪಿರುವುದೇ ರಾಹುಲ್ ಗಾಂಧಿ ಹೆಸರಿನ ಮೇಲೆ. ಇಲ್ಲಿಯವರೆಗೆ ಕಾಂಗ್ರೆಸ್ ನಲ್ಲಿ ಯಾವುದಾದರೂ ಮುಖ ಮುನ್ನಲೆಗೆ ಬಂದಿದ್ದರೆ ಅದು ರಾಹಲ್ ಗಾಂಧಿಯದ್ದೂ
ಇಡೀ ಭಾರತ್ ಜೊಡೋ ಯಾತ್ರೆ ಕೂಡ ನಡೆಯುತ್ತಿರುವುದು ರಾಹುಲ್ ಗಾಂಧಿ ಮುಖದ ಮೇಲೆಯೆ ಇಂಥಹ ಸ್ಥಿತಿಯಲ್ಲಿ ರಾಜಸ್ಥಾನದಿಂದ ಹೊರಗಡೆ ಹೆಚ್ಚಾಗಿ ಗುರುತಿಸಿಕೊಳ್ಳದ ವ್ಯಕ್ತಿ ಕಾಂಗ್ರೇಸ್ ಅಧ್ಯಕ್ಷರಾದಾಗ ಅವರನ್ನ ಹೇಗೆ ಸ್ವೀಕರಿಸುತ್ತಾರೆ ಎನ್ನವುದು ಮುಂದಿನ ದಿನಗಳಲ್ಲಿ ಕಾಣಲಿದೆ.
ಆದರೆ ಈ ಬಾರಿ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಇಬ್ಬರ ನಡುವೆ ನಡೆಯಲಿದೆ ಎಂಬ ಊಹಾಪೋಹವೂ ಜಾಸ್ತಿ ಇದೆ. ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚಾಲ್ತಿಯಲ್ಲಿರುವ ಎರಡನೇ ಹೆಸರು. ಈ ನಿಟ್ಟಿನಲ್ಲಿ ಶಶಿ ತರೂರ್ ಸಹ ಸೋನಿಯಾ ಗಾಂಧಿಯನ್ನೂ ಭೇಟಿ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದಲ್ಲಿ ಎರಡು ಬಣಗಳು ಬಹಿರಂಗವಾಗಿ ಮುಖಾಮುಖಿಯಾಗಲಿವೆ ಎಂಬುದಂತೂ ಸ್ಪಷ್ಟವಾಗಿದೆ.
ಆದರೆ ಗಾಂಧಿ ಕುಟುಂಬದ ಹೊರತಾಗಿ ಚುನಾವಣೆಯಲ್ಲಿ ಗೆದ್ದು ಬರುವ ನಾಯಕ ಎಲ್ಲಾ ನಿರ್ಧಾರಗಳನ್ನ ತನ್ನ ಇಚ್ಚೇಯಂತೆ ತೆಗೆದುಕೊಳ್ಳುತ್ತಾನೋ ಅಥವಾ ಕೈಗೊಂಬೆ ಅಧ್ಯಕ್ಷರಂತೆ ವರ್ತಿಸುತ್ತಾರೆ ಎಂಬುದು ಕಾದು ನೊಡಬೇಕು…