ನೂತನ ಕಾಂಗ್ರೆಸ್ ಅಧ್ಯಕ್ಷರಿಗಾಗಿ ಮತ ಚಲಾಯಿಸಿದ ರಾಹುಲ್ ಗಾಂಧಿ…
24 ವರ್ಷಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಮತದಾನ ನಡೆಯುತ್ತಿದೆ. ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಮತದಾನ ಮಾಡಿದರು. ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಬಳಿಯ ‘ಭಾರತ್ ಜೋಡೋ ಯಾತ್ರಾ’ ಶಿಬಿರದಲ್ಲಿ ಕಂಟೈನರ್ ನಲ್ಲಿ ನಿರ್ಮಿಸಿದ ಮತಗಟ್ಟೆಯಲ್ಲಿ ರಾಹುಲ್ ಮತ ಚಲಾಯಿಸಿದರು.
ರಾಹುಲ್ ಗಾಂಧಿ ಮತ್ತು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವ ಚಿತ್ರಗಳನ್ನ ಕರ್ನಾಟಕ ಕಾಂಗ್ರೆಸ್ ಹಂಚಿಕೊಂಡಿದ್ದಾರೆ.
ಪ್ರದೇಶ ಕಾಂಗ್ರೆಸ್ ಸಮಿತಿಯ ಮತದಾರು (ಪ್ರತಿನಿಧಿಗಳು) ಮತ್ತು ಸುಮಾರು 40 ಇತರ ‘ಭಾರತ ಜೋಡೋ ಯಾತ್ರಿಗಳು’ ಸೋಮವಾರ ಸಂಗನಕಲ್ಲು ಕ್ಯಾಂಪ್ ಸೈಟ್‌ನಲ್ಲಿ ಮತ ಚಲಾಯಿಸಿದರು.
ಇಂದು ಭಾರತ ಜೋಡೋ ಯಾತ್ರೆಗೆ ‘ವಿಶ್ರಮ್ ದಿವಸ್’ ಎಂದು ಘೋಷಿಸಲಾಗಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮತ ಚಲಾಯಿಸಿದರು. ಅಕ್ಟೋಬರ್ 19 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
Congress President: Rahul Gandhi voted for the new Congress President…
ಇದನ್ನೂ ಓದಿ : https://saakshatv.com/arun-singh-there…yurappa-163159-