ಬೆಂಗಳೂರು ನಾಗರೀಕರ ಸಮಸ್ಯೆ ಕುರಿತು ಸಮೀಕ್ಷೆಗೆ ಮುಂದಾದ ಕಾಂಗ್ರೆಸ್……
ಚುನಾವಣೆ ಸಮೀಸುತ್ತಿರುವ ಸಮಯದಲ್ಲಿ ಕಾಂಗ್ರೆಸ್ ಉತ್ತಮ ಸಿದ್ದತೆ ನಡೆಸಲು ಗ್ರೌಂಡ್ ಲೆವೆಲ್ ನಿಂದ ಮಾಹಿತಿಗಳನ್ನ ಸಂಗ್ರಹಿಸುತ್ತಿದೆ.
ಅನೇಕ ಬೆಂಗಳೂರಿಗರು ಅಪರಿಚಿತ ಸಮೀಕ್ಷಾ ಏಜೆನ್ಸಿಯಿಂದ ಕರೆಗಳನ್ನ ಸ್ವೀಕರಿಸುತ್ತಿದ್ದು, ನೀವು ಯಾವುದಾದರೂ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ ಎಂದು ಕೇಳುತ್ತಿದ್ದಾರೆ.
ರಸ್ತೆ, ನೀರು, ಬೀದಿದೀಪ ಅಥವಾ ಇತರ ನಾಗರಿಕ ಸೌಕರ್ಯಗಳು ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಾಮಾನ್ಯವಾಗಿ ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ, ಕಳೆದ ಕೆಲವು ದಿನಗಳಿಂದ ಹತ್ತಾರು ಜನರು ಕರೆಗಳನ್ನು ಸ್ವೀಕರಿಸಿದ್ದಾರೆ.
ಕೆಲವು ಬೆಂಗಳೂರಿಗರು ಸಮೀಕ್ಷೆ ಕುರಿತಂತೆ ತಮ್ಮ ಪ್ರತಿಕ್ರಿಯೆಗಳನ್ನು ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಶಾಂತಿನಗರ ವಿಧಾನಸಭಾ ಕ್ಷೇತ್ರದ ಹಿರಿಯ ಮಹಿಳಾ ಪತ್ರಕರ್ತೆಯೊಬ್ಬರು, “ನನಗೆ 8050082448 ನಿಂದ ಕರೆ ಬಂದಿತ್ತು, ಅದು ದೆಹಲಿಯ ಎಐಸಿಸಿ ವಾರ್ ರೂಮ್ ಸಂಖ್ಯೆಯಾಗಿತ್ತು. ನಾನು ಯಾವುದೇ ನಾಗರಿಕ ಮತ್ತು ಇತರ ನಗರ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆಯೇ ? ಮತ್ತು ಕ್ಷೇತ್ರದ ಶಾಸಕ ಮತ್ತು ಹಿಂದಿನ ಕಾರ್ಪೊರೇಟರ್‌ಗಳ ಸೇವೆಗಳ ಬಗ್ಗೆ ನನಗೆ ಹೇಗೆ ಅನಿಸುತ್ತದೆ ಎಂದು ಕರೆ ಮಾಡಿದವರು ಕೇಳಿದರು ಎಂದು ತಿಳಿಸಿದ್ದಾರೆ.
ಪರಿಶೀಲಿಸಿದಾಗ, ಇದು ನವದೆಹಲಿಯಿಂದ ಕಾಂಗ್ರೆಸ್ ಕಾರ್ಯ ಎಂದು ಕಂಡುಬಂದಿದೆ. ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಸಮೀಕ್ಷೆ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಉಲ್ಲೇಖಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಎಂಎಲ್‌ಸಿ ಸಲೀಂ ಅಹಮದ್ ಮಾತನಾಡಿ, ‘ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಭಿಪ್ರಾಯ ಪಡೆಯಲು ಪಕ್ಷವು ಸಮೀಕ್ಷೆ ನಡೆಸುತ್ತಿದೆ. ಮುಂಬರುವ ಚುನಾವಣೆಗೆ ವಾರ್ಡ್‌ವಾರು ಸಿದ್ಧತೆ ನಡೆಸಲಾಗುತ್ತಿದೆ.