ರಾಮನ ಶಾಪದಿಂದ ಕಾಂಗ್ರೆಸ್ ಅಡ್ರೆಸ್ ಇರಲ್ಲ : ಈಶ್ವರಪ್ಪ
1 min read
ರಾಮನ ಶಾಪದಿಂದ ಕಾಂಗ್ರೆಸ್ ಅಡ್ರೆಸ್ ಇರಲ್ಲ : ಈಶ್ವರಪ್ಪ
ವಿಜಯಪುರ : ಕಾಂಗ್ರೆಸ್ ಗೆ ರಾಮನ ಶಾಪ ಬಿಡಲ್ಲ. ಗೋವಿನ ಶಾಪದಿಂದ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಿದೆ. ಈ ರಾಮ ಮಂದಿರದ ಲೆಕ್ಕಾ ಕೇಳುತ್ತಿದ್ದಾರೆ.
ಇವರಿಗೆ ರಾಮನ ಶಾಪ ಬಿಡಲ್ಲ. ರಾಮನ ಶಾಪದಿಂದ ಕಾಂಗ್ರೆಸ್ ನವರ ಅಡ್ರೆಸ್ ಇರಲ್ಲ ಅಂತಾ ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ವಿಜಯಪುರದಲ್ಲಿ ವಾಗ್ದಾಳಿ ನಡೆಸಿದರು.
ರಾಮಮಂದಿರ ಬಗ್ಗೆ ಲೆಕ್ಕ ಕೇಳಿದ ಸಿದ್ದರಾಮಯ್ಯ ವಿರುದ್ಧ ವಿಜಯಪುರದಲ್ಲಿ ಮಾತನಾಡಿದ ಈಶ್ವರಪ್ಪ, ಮುಸ್ಲಿಂರನ್ನ ಸಂತೃಪ್ತಿ ಪಡೆಸಲು ಹಿಂದೂ ಯುವಕರ ಕಗ್ಗೊಲೆಗಳು ಆಗಿವೆ.
ಈಗ ರಾಮ ಮಂದಿರದ ಬಗ್ಗೆ ಅಕೌಂಟ್ ಕೇಳ್ತಿದ್ದಾರೆ. ಇವರಿಗೆ ರಾಮನ ಶಾಪ ಬಿಡಲ್ಲ. ಹೀಗಾಗಲೆ ಗೋವಿನ ಶಾಪದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಇನ್ನು ರಾಮನ ಶಾಪದಿಂದ ಕಾಂಗ್ರೆಸ್ ಅಡ್ರೆಸ್ ಇರಲ್ಲ ಅಂತಾ ಟೀಕಿಸಿದರು.
ಇನ್ನು ಕಾಂಗ್ರೆಸ್ ಎಂದರೆ ಸುಭಾಷ್ ಚಂದ್ರ ಬೋಸ್ ನಂತವರ ರಕ್ತದ ಒಂದ ಅಂಶವಾದರೂ ಇದೆಯಾ ಎಂದು ಪ್ರಶ್ನಿಸಿದ ಈಶ್ವರಪ್ಪ, ಕಾಂಗ್ರೆಸ್ ದೇಶವನ್ನು ದಿವಾಳಿ ಮಾಡಿದ ಮುಸ್ಲಿಂ ಲೀಗ್ ದೇಶದ್ರೋಹಿ ಪಕ್ಷ. ಹಾಗಾಗಿ ಈ ಎರಡು ಪಕ್ಷಗಳ ಜೊತೆ ಬಿಜೆಪಿ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ ಎಂದು ಹೇಳಿದ್ರು.
ಇದೇ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಾತನಾಡಿ, ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಹಿಂದುತ್ವದ ಪ್ರಮುಖ ಶಕ್ತಿ.
ಸಿಎಂ ಯಡ್ಡಿಯೂರಪ್ಪ ಹಾಗೂ ಮಗ ವಿಜಯೇಂದ್ರನ ಬಗ್ಗೆ ಆರೋಪಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಲಿ.ಅದು ಬಿಟ್ಟು ಮಾಧ್ಯಮಗಳ ಮುಂದೆ ಸಾರ್ವಜನಿಕವಾಗಿ ಮಾತನಾಡಬೇಡಿ ಎಂದು ಹೇಳಿದ್ದೀನಿ ಅಂತಾ ಯತ್ನಾಳ್ ಪರ ಬ್ಯಾಟ್ ಬೀಸಿದ್ರು.
