ಬೆಂಗಳೂರು : ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ (Congress) ಕಾಂಗ್ರೆಸ್ ಅಭ್ಯರ್ಥಿಯಾಗಿ ರಮೇಶ್ ಬಾಬು (Ramesh Babu) ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೆ ಜೆಡಿಎಸ್ ತೊರೆದು ಕಾಂಗ್ರೆಸ್ (Congress) ಸೇರಿದ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು(Ramesh Babu) ಅವರಿಗೆ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಅಭ್ಯರ್ಥಿ ಎಂದು ಎಐಸಿಸಿ ಘೋಷಿಸಿತ್ತು.
ಇದನ್ನೂ ಓದಿ : ದಕ್ಷಿಣ ಭಾರತದ ಬಿಜೆಪಿ ಉಸ್ತುವಾರಿಯಾಗಿ ಸಿ.ಟಿ.ರವಿ ನೇಮಕ
ಅದರಂತೆ ಇಂದು ರಮೇಶ್ ಬಾಬು ಅವರು, ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರಿಂದ ‘ಬಿ’ ಫಾರಂ ಪಡೆದರು.
ನಂತರ ಶಿವಕುಮಾರ್ ಹಾಗೂ ಪರಮೇಶ್ವರ ಅವರ ಸಮ್ಮುಖದಲ್ಲಿ ರಮೇಶ್ ಬಾಬು ಅವರು ಶಾಂತಿನಗರದಲ್ಲಿ ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾಧಿಕಾರಿ ನವೀನ್ ಕುಮಾರ್ ಸಿಂಗ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿಯಿಂದ ನನಗೆ ಡಿಸಿಎಂ ಆಫರ್ ಬಂದಿತ್ತು : ಜಿ.ಟಿ.ಡಿ
ಅಕ್ಟೋಬರ್ 28 ರಂದು ವಿಧಾನಪರಿಷತ್ ನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel