congress | ಕನ್ನಡ ನಾಡು, ನುಡಿಯನ್ನು ಬಿಜೆಪಿ ಎಂದಿಗೂ ಗೌರವಿಸದು
ಬೆಂಗಳೂರು : ಹಿಂದಿ ಭಾಷೆ ವಿಚಾರವಾಗಿ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದರಲ್ಲೂ ರಾಜ್ಯ ಬಿಜೆಪಿ – ಕಾಂಗ್ರೆಸ್ ನಡುವೆ ಟ್ವಿಟ್ಟರ್ ನಲ್ಲಿ ಸಮರ ನಡೆಯುತ್ತಿದೆ.
ಹಿಂದಿ ಸಂವಹನಕ್ಕಾಗಿ ಭಾರತದ ಭಾಷೆಯಾಗಿದೆ. ನಾವು ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ಬಳಸಬೇಕು.
ಹಿಂದಿ ಭಾಷೆಯ ಕುರಿತು ಕೇಂದ್ರ ಸರ್ಕಾರದ ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ.
ಹಿಂದಿಯನ್ನು ರಾಷ್ಟ್ರೀಯ ಭಾಷಯನ್ನಾಗಿ ಮಾಡುವುದರಲ್ಲಿ ತಪ್ಪೇನಿಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಟಾಂಗ್ ನೀಡಿದೆ.
ಯಾವುದೇ ಭಾಷೆಯನ್ನು ರಾಷ್ಟ್ರಭಾಷೆ ಎಂದು ಗುರುತಿಸಲಾಗಿಲ್ಲ, ಗುರುತಿಸಲು ಸಾಧ್ಯವೂ ಇಲ್ಲ.
ಆದರೆ ನಾಗಪುರದ ಯಜಮಾನರ ಹಾಗೂ ಹೈಕಮಾಂಡ್ ಆದೇಶದಂತೆ @BJP4Karnataka ನಾಯಕರು ಕನ್ನಡದ ಅಸ್ಮಿತೆಯನ್ನು, ಗೌರವವನ್ನು ಕುಗ್ಗಿಸಲು ಪ್ರಯತ್ನಿಸುತ್ತಿರುವುದಕ್ಕೆ ಅವರ ಹೇಳಿಕೆಗಳೇ ಸಾಕ್ಷಿ.
ಕನ್ನಡ ನಾಡು, ನುಡಿಯನ್ನು ಬಿಜೆಪಿ ಎಂದಿಗೂ ಗೌರವಿಸದು.
— Karnataka Congress (@INCKarnataka) April 29, 2022
ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ.. ಯಾವುದೇ ಭಾಷೆಯನ್ನು ರಾಷ್ಟ್ರಭಾಷೆ ಎಂದು ಗುರುತಿಸಲಾಗಿಲ್ಲ, ಗುರುತಿಸಲು ಸಾಧ್ಯವೂ ಇಲ್ಲ.
ಆದರೆ ನಾಗಪುರದ ಯಜಮಾನರ ಹಾಗೂ ಹೈಕಮಾಂಡ್ ಆದೇಶದಂತೆ ಬಿಜೆಪಿ ನಾಯಕರು ಕನ್ನಡದ ಅಸ್ಮಿತೆಯನ್ನು, ಗೌರವವನ್ನು ಕುಗ್ಗಿಸಲು ಪ್ರಯತ್ನಿಸುತ್ತಿರುವುದಕ್ಕೆ ಅವರ ಹೇಳಿಕೆಗಳೇ ಸಾಕ್ಷಿ.
ಕನ್ನಡ ನಾಡು, ನುಡಿಯನ್ನು ಬಿಜೆಪಿ ಎಂದಿಗೂ ಗೌರವಿಸದು ಎಂದು ಕಿಡಿಕಾರಿದೆ.
congress- slams bjp leaders Stop Hindi Imposition statement








