Congress – ಬಿಜೆಪಿಗರಿಗೆ ರಾಮನಷ್ಟೇ ಅಲ್ಲ, ರಾವಣನ ಹೆಸರನ್ನೂ ಹೇಳುವ ಯೋಗ್ಯತೆ ಇಲ್ಲ
ಬೆಂಗಳೂರು : ಸಮಸ್ಯೆ ಹೇಳಲು ಬಂದ ಮಹಿಳೆಯ ಮೇಲೆ ಸಚಿವ ವಿ.ಸೋಮಣ್ಣ ಹಲ್ಲೆ ನಡೆಸಿ ಬಿಜೆಪಿಯ ಸ್ತ್ರೀಪೀಡಕ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ. ಮಹಿಳೆಗೆ ವಿ ಸೋಮಣ್ಣ ಕಪಾಳಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ.
ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ..
ಸಮಸ್ಯೆ ಹೇಳಲು ಬಂದ ಮಹಿಳೆಯ ಮೇಲೆ ಸಚಿವ ವಿ.ಸೋಮಣ್ಣ ಹಲ್ಲೆ ನಡೆಸಿ ಬಿಜೆಪಿಯ ಸ್ತ್ರೀಪೀಡಕ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ, ಮೋದಿಯವರ ‘ಬೇಟಿ ಬಚಾವೋ’ ಎಂಬ ಘೋಷಣೆಯನ್ನು ನೀವು ಗೌರವಿಸುವುದಾದರೆ ಕೂಡಲೇ ಸಚಿವರನ್ನು ವಜಾಗೊಳಿಸಿ. ಇದು ಹಲ್ಲೆಯಷ್ಟೇ ಅಲ್ಲ, ಇಡೀ ಮಹಿಳಾ ಸಮುದಾಯಕ್ಕೆ ಬಿಜೆಪಿ ಮಾಡಿದ ಅವಮಾನ.

#ಮಹಿಳಾವಿರೋಧಿಬಿಜೆಪಿ ನಡೆಸಿದ ದೌರ್ಜನ್ಯ ಒಂದೆರಡಲ್ಲ. ಶಾಸಕ ಸಿದ್ದು ಸವದಿಯವರಿಂದ ಮಹಿಳೆಯ ಮೇಲೆ ಹಲ್ಲೆ, ರಮೇಶ್ ಜಾರಕಿಹೊಳಿ ಪ್ರಕರಣ ಎಲ್ಲರಿಗೂ ತಿಳಿದ ವಿಚಾರ, ಮಹಿಳೆಯರಿಗೆ ನಿಂದಿಸಿದ್ದರು ಮಾಧುಸ್ವಾಮಿ, ಅರವಿಂದ್ ಲಿಂಬಾವಳಿ, ಈಗ ವಿ.ಸೋಮಣ್ಣರಿಂದ ಹಲ್ಲೆ. ಬಿಜೆಪಿಗರಿಗೆ ರಾಮನಷ್ಟೇ ಅಲ್ಲ, ರಾವಣನ ಹೆಸರನ್ನೂ ಹೇಳುವ ಯೋಗ್ಯತೆ ಇಲ್ಲ.
ಮಹಿಳೆಯ ಮೇಲೆ ಸಚಿವ ವಿ.ಸೋಮಣ್ಣ ಮಾಡಿದ ಹಲ್ಲೆ ಬಿಜೆಪಿ ಪಕ್ಷದ ಸ್ತ್ರೀ ವಿರೋಧಿ ಮನಸ್ಥಿತಿಗೆ ಹಿಡಿದ ಕನ್ನಡಿ. ಸ್ವತಃ ಬಿಜೆಪಿ ಸರ್ಕಾರದ ಸಚಿವರೇ ನಡೆಸುವ ದೌರ್ಜನ್ಯಗಳಿಗೆ ಕ್ರಮ ಕೈಗೊಳ್ಳದ ಸಿಎಂ ಬೊಮ್ಮಾಯಿ ಅವರಿಂದ ರಾಜ್ಯದಲ್ಲಿ ನಡೆಯುವ ಮಹಿಳಾ ದೌರ್ಜನ್ಯಗಳನ್ನು ತಡೆಯಲು ಸಾಧ್ಯವೇ?
ಸಿಎಂ @BSBommai ಅವರೇ,
ನಿಮ್ಮ ಸರ್ಕಾರ ಮಹಿಳೆಯರನ್ನು ಗೌರವಿಸುವುದೇ ಆದರೆ,ನಿಮ್ಮ ಆಡಳಿತವು ಮಹಿಳೆಯರಿಗೆ ಸುರಕ್ಷತೆ ನೀಡಲು ಬದ್ಧವಾಗಿದ್ದರೆ,
ನಿಮ್ಮ ಪಕ್ಷವು ನಿಜಕ್ಕೂ ಮಹಿಳೆಯರ ಮೇಲೆ ಗೌರವ ಹೊಂದಿರುವುದೇ ಆದರೆ ಕೂಡಲೇ ಸಚಿವ ವಿ. ಸೋಮಣ್ಣರನ್ನು ವಜಾಗೊಳಿಸಿ ಅದನ್ನು ಸಾಬೀತುಪಡಿಸಿ.#SayCM #ಮಹಿಳಾವಿರೋಧಿಬಿಜೆಪಿ
— Karnataka Congress (@INCKarnataka) October 23, 2022
ಸಿಎಂ ಬಸವರಾಜ ಬೊಮ್ಮಾಯಿ ಅವರೇ,ನಿಮ್ಮ ಸರ್ಕಾರ ಮಹಿಳೆಯರನ್ನು ಗೌರವಿಸುವುದೇ ಆದರೆ, ನಿಮ್ಮ ಆಡಳಿತವು ಮಹಿಳೆಯರಿಗೆ ಸುರಕ್ಷತೆ ನೀಡಲು ಬದ್ಧವಾಗಿದ್ದರೆ, ನಿಮ್ಮ ಪಕ್ಷವು ನಿಜಕ್ಕೂ ಮಹಿಳೆಯರ ಮೇಲೆ ಗೌರವ ಹೊಂದಿರುವುದೇ ಆದರೆ ಕೂಡಲೇ ಸಚಿವ ವಿ. ಸೋಮಣ್ಣರನ್ನು ವಜಾಗೊಳಿಸಿ ಅದನ್ನು ಸಾಬೀತುಪಡಿಸಿ ಎಂದು ಒತ್ತಾಯಿಸಿದೆ.








