Congress – ಸಿಎಂ ಕಚೇರಿಯ ‘ಸ್ವೀಟ್ ಬಾಕ್ಸ್ ಲಂಚ’ : ಲೋಕಾಯುಕ್ತಕ್ಕೆ ದೂರು
ಬೆಂಗಳೂರು : ಸಿಎಂ ಕಚೇರಿಯ ‘ಸ್ವೀಟ್ ಬಾಕ್ಸ್ ಲಂಚ’ದ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಬಸವರಾಜ ಬೊಮ್ಮಾಯಿ ಅವರೇ, ಲೋಕಾಯುಕ್ತ ತನಿಖೆಗೆ ಸಹಕರಿಸುವಿರಾ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭ ಎನ್ನುವ ಮಾತಿದೆ, ಶಾಸಕಾಂಗ, ಕಾರ್ಯಂಗವನ್ನು ಖರೀದಿಸಿ ಭ್ರಷ್ಟಗೊಳಿಸಿದಂತೆ ಮಾಧ್ಯಮಗಳನ್ನೂ ಖರೀದಿಸಲು ವಿಫಲ ಯತ್ನ ಮಾಡಿದೆ ಬಿಜೆಪಿ. #PayCM ಬಸವರಾಜ ಬೊಮ್ಮಾಯಿ ಅವರೇ,ನಿಮ್ಮ #40PercentSarkara ಭ್ರಷ್ಟಾಚಾರದ ತುತ್ತತುದಿಗೆ ತಲುಪಿರುವುದರಲ್ಲಿ ಇನ್ಯಾವ ಅನುಮಾನವೂ ಉಳಿದಿಲ್ಲ.
ಸಿಎಂ ಕಚೇರಿಯ ‘ಸ್ವೀಟ್ ಬಾಕ್ಸ್ ಲಂಚ’ದ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಬಸವರಾಜ ಬೊಮ್ಮಾಯಿ ಅವರೇ, ಲೋಕಾಯುಕ್ತ ತನಿಖೆಗೆ ಸಹಕರಿಸುವಿರಾ? ಹಣದ ಮೂಲ ಹೇಳುವಿರಾ? ಯಾವ್ಯಾವ ತ್ರಕರ್ತರಿಗೆ ಎಷ್ಟೆಷ್ಟು ಗಿಫ್ಟ್ ನೀಡಿದಿರಿ ಎಂಬ ಲೆಕ್ಕ ನೀಡುವಿರಾ? ಯಾರು ಪಡೆದರು, ಯಾರು ವಾಪಸ್ ನೀಡಿದರು ಎಂಬ ಮಾಹಿತಿ ನೀಡುವಿರಾ?
ಇನ್ನೊಬ್ಬ ಸಚಿವರೂ ಪತ್ರಕರ್ತರಿಗೆ ಉಡುಗೊರೆ ರೂಪದ ಲಂಚ ನೀಡಿರುವ ಸುದ್ದಿ ಹೊರಬಂದಿದೆ. ಸಿಎಂ ಕಛೇರಿಯದ್ದು ಹಣವಾದರೆ, ಇವರದ್ದು ಸ್ಕಾಚ್, ವಾಚ್, ಗೋಲ್ಡ್ ಕಾಯಿನ್! ಇವುಗಳನ್ನು ಕೋವಿಡ್ ಖರೀದಿ ಹಗರಣದಲ್ಲಿ ಲೂಟಿ ಮಾಡಿದ ಹಣದಲ್ಲಿ ನೀಡಿದ್ದೇ ಬಜೆಪಿ? #40PercentSarkara ದ ಅಕ್ರಮಗಳನ್ನು ಮುಚ್ಚಿ ಹಾಕಲು ಈ ಗಿಫ್ಟ್ ಲಂಚವೇ ಎಂದು ಕಾಂಗ್ರೆಸ್ ಕುಟುಕಿದೆ.