ರಾಜಸ್ಥಾನದ ಉದಯಪುರದಲ್ಲಿ ಮೇ 13, 14 ಮತ್ತು 15 ರಂದು ಕಾಂಗ್ರೆಸ್ ಚಿಂತನಾ ಶಿಬಿರಾ

1 min read

ರಾಜಸ್ಥಾನದ ಉದಯಪುರದಲ್ಲಿ ಮೇ 13, 14 ಮತ್ತು 15 ರಂದು ಕಾಂಗ್ರೆಸ್ ಚಿಂತನಾ ಶಿಬಿರಾ

ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲು ಅನುಭಸಿದ ಹಿನ್ನಲೆಯಲ್ಲಿ ಕಾಂಗ್ರೆಸ್  ಆತ್ಮ ವಿಮರ್ಶೆ ಮಾಡಿಕೊಳ್ಳಲು ಮುಂದಾಗಿದೆ. ರಾಜಸ್ಥಾನದ ಉದಯಪುರದಲ್ಲಿ ಮೇ 13, 14 ಮತ್ತು 15 ರಂದು ಚಿಂತನಾ ಶಿಬಿರಾ ನಡೆಯಲಿದೆ ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಿ ಕಾಂಗ್ರೆಸ್‌ಗೆ ಆತ್ಮವಿಮರ್ಶೆಯ ಅಗತ್ಯವಿದೆಯೇ ಹೊರತು ನೈತಿಕತೆಯನ್ನು ಕುಗ್ಗಿಸಿಕೊಳ್ಳುವಂತಹದೇನು ಇಲ್ಲ  ಎಂದು ಹೇಳಿದ್ದಾರೆ.  ನಮ್ಮ ಪಕ್ಷದ ವೇದಿಕೆಗಳಲ್ಲಿ ಆತ್ಮವಿಮರ್ಶೆ ಸಹಜವಾಗಿಯೇ ಬೇಕು.ಆದರೆ ಆತ್ಮಸ್ಥೈರ್ಯ ಮತ್ತು ನೈತಿಕ ಸ್ಥೈರ್ಯ ಕುಗ್ಗುವ ರೀತಿಯಲ್ಲಿ ಇದನ್ನು ಮಾಡಬಾರದು ಎಂದರು.

ಇದಲ್ಲದೆ, ತಮ್ಮ ಆರಂಭಿಕ ಭಾಷಣದಲ್ಲಿ, ಮೇ 13, 14 ಮತ್ತು 15 ರಂದು ಪಕ್ಷದ ಚಿಂತನಾ ಶಿಬಿರ ಉದಯಪುರದಲ್ಲಿ ನಡೆಯಲಿದೆ ಎಂದು ಹೇಳಿದರು

ರಾಜಸ್ಥಾನದಲ್ಲಿ ಮೇ 16 ರಂದು 132 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ  ಬೆನೇಶ್ವರ್ ಧಾಮ್‌ ಶಂಕುಸ್ಥಾಪನೆಯನ್ನ ಸಿಎಂ ಗೆಹ್ಲೋಟ್ ಮತ್ತು ಸೋನಿಯಾ ಗಾಂಧಿ ನೆರವೇರಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಭೆ ನಡೆಯಲಿದೆ.  ಇದರಲ್ಲಿ ಐದು ಲಕ್ಷ ಜನ ಸೇರಲಿದ್ದಾರೆ  ಎಂದು ಹೇಳಲಾಗುತ್ತಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd