congress | ಬಿಜೆಪಿಯದ್ದು “ಲಂಚ-ಮಂಚದ ಸರ್ಕಾರ” ಎನ್ನವುದರಲ್ಲಿ ಅನುಮಾನವಿಲ್ಲ
ಬೆಂಗಳೂರು : ಶಾಸಕರ ಖರೀದಿ, ಸಿಡಿಗಳ ಮೂಲಕವೇ ಅಧಿಕಾರಕ್ಕೆ ಬಂದ ಬಿಜೆಪಿಯದ್ದು “ಲಂಚ-ಮಂಚದ ಸರ್ಕಾರ” ಎನ್ನವುದರಲ್ಲಿ ಅನುಮಾನವಿಲ್ಲ ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದು, ಬಿಜೆಪಿ ಸರ್ಕಾರದಲ್ಲಿ ಕಮಿಷನ್ ಕಾಟ ಬಡ ಪೌರಕಾರ್ಮಿಕರನ್ನೂ ಬಿಡದಿರುವುದು ಬಿಜೆಪಿ ಭ್ರಷ್ಟೋತ್ಸವ ಉತ್ತುಂಗದಲ್ಲಿರುವುದಕ್ಕೆ ನಿದರ್ಶನ. ಪೌರ ಕಾರ್ಮಿಕರ ವೇತನದಲ್ಲಿ 60% ಕಮಿಷನ್ ಲೂಟಿ ನಡೆಯುತ್ತಿದ್ದರೂ ಸರ್ಕಾರ ಕಣ್ಮುಚ್ಚಿರುವುದೇಕೆ? ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಮಿಷನ್ ಪರ್ಸೆಂಟೇಜ್ ಕೂಡ ಏರಿಕೆಯಾಗುತ್ತಿದೆಯೇ ಬಿಜೆಪಿ ಎಂದು ಪ್ರಶ್ನಿಸಿದೆ.
https://twitter.com/INCKarnataka/status/1562742581322076160?s=20&t=h46vuT-bI4Bs8bcf1VzzYQ
ಬಿಜೆಪಿ ಸರ್ಕಾರದ ಕಮಿಷನ್ ಭ್ರಷ್ಟಾಚಾರದ ವಿರಾಟ್ ರೂಪದಲ್ಲಿ ಹೆಣ್ಣು, ಹಣ, ಹೆಂಡಗಳೂ ಸ್ಥಾನ ಪಡೆದಿರುವ ಸಂಗತಿ ಬೆಳಕಿಗೆ ಬಂದಿದೆ. ಶಾಸಕರ ಖರೀದಿ, ಸಿಡಿಗಳ ಮೂಲಕವೇ ಅಧಿಕಾರಕ್ಕೆ ಬಂದ ಬಿಜೆಪಿಯದ್ದು “ಲಂಚ-ಮಂಚದ ಸರ್ಕಾರ” ಎನ್ನವುದರಲ್ಲಿ ಅನುಮಾನವಿಲ್ಲ. ಬಿಜೆಪಿ ಆಡಳಿತದಲ್ಲಿ ‘ಮಂಚ‘ವೂ ಲಂಚದ ರೂಪ ಪಡೆದಿದೆ!
ಗುತ್ತಿಗೆದಾರರಷ್ಟೇ ಅಲ್ಲ, ಬಡ ಪೌರ ಕಾರ್ಮಿಕರೂ ಸಹ ಬಿಜೆಪಿ ಸರ್ಕಾರದ ಕಮಿಷನ್ ದಾಹದ ಬಲಿಪಶುಗಳು.ಒಂದೆಡೆ ಸಾಲು ಸಾಲು ನೇಮಕಾತಿ ಅಕ್ರಮಗಳು, ಮತ್ತೊಂದೆಡೆ ವ್ಯವಸ್ಥೆಯ ಎಲ್ಲಾ ಸ್ಥರಗಳಲ್ಲೂ ಕಮಿಷನ್ ಲೂಟಿ.ಇನ್ನೊಮ್ಮೆ ಅಧಿಕಾರ ಸಿಗದು, ಈಗಲೇ ಸಾಧ್ಯವಾದಷ್ಟು ಬಾಚಿಕೊಳ್ಳೋಣ ಎಂಬ ಹಪಹಪಿತನವೇ ಬಿಜೆಪಿ ?
https://twitter.com/INCKarnataka/status/1562744594072162305?s=20&t=h46vuT-bI4Bs8bcf1VzzYQ
ಮೊದಲು ಬರೆದ ಪತ್ರಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಗುತ್ತಿಗೆದಾರರು 2ನೇ ಬಾರಿಗೆ ಪ್ರಧಾನಿಗೆ ಪತ್ರ ಬರೆಯಲು ತೀರ್ಮಾನಿಸಿದ್ದಾರೆ, ನರೇಂದ್ರ ಮೋದಿ ಅವರೇ,”ನಾ ಖವುಂಗಾ, ನಾ ಖಾನೆದುಂಗಾ” ಎಂಬ ತಮ್ಮ ಮಾತು ಟೆಲಿಫ್ರಾಂಪ್ಟರ್‌ನಲ್ಲಿ ಮೂಡಿದ ಅಕ್ಷರಗಳು ಮಾತ್ರವೇ? ತನಿಖೆಯ ಮೂಲಕ ಆ ಮಾತಿಗೆ ಬದ್ಧತೆ ತೋರುತ್ತಿಲ್ಲವೇಕೆ?
ಬಿಜೆಪಿ ಸರ್ಕಾರ ಪ್ರಮಾಣಿಕರೆಂದು ತೋರಿಸಬೇಕಿರುವುದು ಮಾತಿನಲ್ಲಲ್ಲ, ಕೃತಿಯಲ್ಲಿ. ಕಮಿಷನ್ ಭ್ರಷ್ಟಾಚಾರವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಭಯವೇಕೆ? “ಕಳ್ಳನ ಮನಸು ಹುಳ್ಳುಳ್ಳಗೆ” ಎಂಬಂತೆ ಗುತ್ತಿಗೆದಾರರ ಕಮಿಷನ್ ಆರೋಪಕ್ಕೆ ಬಿಜೆಪಿ ನಾಯಕರು ಯಾಕಿಷ್ಟು ಉದ್ವೇಗಕ್ಕೆ ಒಳಗಾಗಿದ್ದಾರೆ? ಯಾಕಿಷ್ಟು ಕೋಪಗೊಂಡಿದ್ದಾರೆ ಎಂದು ಕಾಂಗ್ರೆಸ್ ಕುಟುಕಿದ್ದಾರೆ. Congress tweet There is no doubt that BJP is a corrupt government







