ವೆಡ್ಡಿಂಗ್ ಫೋಟೋ ಶೂಟ್ ಕರ್ಮಕಾಂಡ..! ಕೈಯಲ್ಲಿ ಬಾಟ್ಲಿ ಸಿಗರೇಟ್ ಹಿಡಿದ ವಧು ವಿರುದ್ಧ ಆಕ್ರೋಶ..! ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್..!
ಇತ್ತೀಚೆಗೆ ಮದುವೆ ಫೋಟೋ ಶೂಟ್ ಮೇಲೆ ನವ ಜೋಡಿಗಳಿಗೆ ಕ್ರೇಜ್ ಹೆಚ್ಚಾಗಿದೆ. ಭಿನ್ನ ವಿಭಿನ್ನವಾಗಿ ವಿಚಿತ್ರ ಥೇಮ್ ಗಳಲ್ಲಿ ಜೋಡಿ ಹಕ್ಕಿಗಳು ಕ್ಯಾಮೆರಾಗೆ ಫೋಸ್ ಕೊಡುತ್ತಿದ್ದು, ಕೆಲವೊಂದು ತುಂಬಾನೆ ಇಷ್ಟ ಆದ್ರೆ ಇನ್ನೂ ಕೆಲ ಫೋಟೋ ಶೂಟ್ ಗಳು ಟ್ರೋಲ್ ಗೆ ಗುರಿಯಾಗಿವೆ. ನೆಟ್ಟಿಗರಿಂದ ತೀವ್ರ ಟೀಕೆಗೂ ಒಳಗಾಗಿವೆ.
ಇತ್ತೀಚೆಗೆ ಕೇರಳ ದಂಪತಿ ಮಾಡಿಸಿದ್ದ ಬೋಲ್ಡ್ ಶೂಟ್, ಋಷಿ ಮುನಿಗಳ ಜೋಡಿಯ ಅವತಾರದಲ್ಲಿ, ಬೆತ್ತಲೆಯಾಗಿ, ಅರೆನಗ್ನವಾಗಿ, ಇನ್ನೂ ಕೆಲ ಇಂಟಿಮೇಟ್ ರೀತಿಗಳಲ್ಲಿ ಹಾಟ್ ಫೋಟೋ ಶೂಟ್ ಗಳು… ತುಂಬಾನೇ ಎಕ್ಸೋಸಿಂಗ್, ಇಂಟಿಮೇಟ್ ಲುಕ್ ಗಳಲ್ಲಿ ಫೋಟೋ ಶೂಟ್ ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದರು. ಈ ರೀತಿಯಾದ ಅಶ್ಲೀಲತೆ ಪ್ರದರ್ಶನ ಫೋಟೋ ಶೂಟ್ ಮಾಡಿಸಿದ್ದ ದಂಪತಿಗಳನ್ನ ತೀವ್ರವಾಗಿ ಟ್ರೋಲ್ ಮಾಡಿದ್ದರು. ಮಕ್ಕಳು , ಹಿರಿಯರು ಸಾಮಾಜಿಕ ಜಾಲತಾಣಗಳನ್ನ ಬಳಸುತ್ತಾರೆ. ಈ ರೀತಿಯಾದ ಫೋಟೋ ಶೂಟ್ ಮಾಡಿಸಿ ಪೋಸ್ಟ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಇದರ ಬೆನ್ನಲ್ಲೇ ,ಮತ್ತೆ ಅಂತಹದ್ದೇ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೌದು ಯುಚವತಿಯೊಬ್ಲೂ ಇಂಡೋ ವೆಸ್ಟ್ರನ್ ಸ್ಟೈಲ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದು, ಯುವತಿಯ ಫೋಟೋಗಳಿಗೆ ನೆಟ್ಟಿಗರು ಹೆಚ್ಚಾಗಿ ನೆಗೆಟಿವ್ ಆಗಿ ಕಮೆಂಟ್ ಗಳನ್ನ ಪಾಸ್ ಮಾಡ್ತಿದ್ದಾರೆ.
ಹೌದು ಈ ಫೋಟೋ ವೆಡ್ಡಿಂಗ್ ಫೋಟೋ ಶೂಟ್ ಅಂತ ಹೇಳಲಾಗಿದೆ. ಫೋಟೋದಲ್ಲಿ ವಧು ಒಬ್ಬಳೇ ಇದ್ದು ವರ ಕಾಣಿಸಿಕೊಂಡಿಲ್ಲ. ಯುವತಿ ಅರ್ಧ ವೆಸ್ಟ್ರನ್ ಬಟ್ಟೆ ಧರಿಸಿದ್ದು, ಹೊಟ್ಟೆಯಿಂದ ಮೇಲ್ಭಾಗದಲ್ಲಿ ಹಿಂದೂ ಸಂಪ್ರದಾಯದಂತೆ ಬಟ್ಟೆ ಧರಿಸಿದ್ಧಾಳೆ. ತಲೆಗೆ ಹೂ ಮುಡಿದು ಮೈ ತುಂಬ ಒಡವೆ ಏರಿಸಿಕೊಂಡು, ಕುಂಕುಮ ಧರಿಸಿ, ಬಳೆ ಸರ, ಒಲೆ , ಬೈ ತಲೆ ಬಟ್ಟು ಹಾಕಿಕೊಂಡಿದ್ದಾಳೆ. ಆದ್ರೆ ಕೈಯಲ್ಲಿ ಮದ್ಯದ ಬಾಟಲಿ ಹಿಡಿದು, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿಡು ಬಾಯಲ್ಲಿ ಹೊಗೆ ಬಿಡುತ್ತಾ ಫೋಟೋಗೆ ಫೋಸ್ ನೀಡಿದ್ದಾಳೆ. ಈಕೆ ಸಮಾಜಕ್ಕೆ ಏನ್ ಮೆಸೇಜ್ ಕೊಡೋಕೆ ಹೊರಟಿದ್ದಾಳೆ ಅಂತ ಕೆಲವರು ಕಮೆಂಟ್ ಮಾಡಿದ್ರೆ, ಇನ್ನೂ ಹಲವರು ಈ ಫೋಟೋಶೂಟ್ ಮಾಡಿಸಿ ಹಿಂದೂ ಸಂಪ್ರದಾಯಕ್ಕೆ ಅವಮಾನ ಮಾಡಿದ್ದಾಳೆ ಎಂದಿದ್ದಾರೆ. ಧಾರ್ಮಿಕ ಸಂಪ್ರದಾಯ ಆಚಾರವಿಚಾರಗಳಿಗೆ ಇಂತಹ ಫೋಟೋ ಶೂಟ್ ಗಳ ಮೂಲಕ ಧಕ್ಕೆ ತರಲಾಗ್ತಿದೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಇನ್ನೂ ಕೆಲವೇ ಕೆಲವರು ಈಕೆಯ ಮಾದಕ ನೋಟಕ್ಕೆ ಮೆಚ್ಚುವೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ವಿವಾದಾತ್ಮಕ ಫೋಟೋ ಶೂಟ್ ಮಾಡಿಸಿರುವ ಯುವತಿ ಈಗ ಟ್ರೋಲ್ ಗೆ ಗುರಿಯಾಗಿದ್ದಾಳೆ.
ಈ ಶಿಕ್ಷಕರ ಕಾರ್ಯಕ್ಕೊಂದು ಸಲಾಂ… ಬಡ ವಿದ್ಯಾರ್ಥಿಗಳಿಗಾಗಿ ಸ್ಕೂಟರ್ ಮೇಲೆ ಮಿನಿ ಶಾಲೆ ಓಪನ್..!
ಅಬುಧಾಬಿಯಲ್ಲಿ ಐತಿಹಾಸಿಕ ಹಿಂದೂ ದೇವಾಲಯ ನಿರ್ಮಾಣ – ಅಡಿಪಾಯಕ್ಕೆ ಭಾರತದ ಕಲ್ಲು..!
ಮಾ. 31ರ ಒಳಗಾಗಿ ಪ್ಯಾನ್ ಕಾರ್ಡ್ ಆಧಾರ್ ಲಿಂಕ್ ಮಾಡಿಸದೇ ಇದ್ದರೇ 1000 ರೂ. ದಂಡ..!
ಕೊರೋನಾ 2ನೇ ಅಲೆ – 8 ರಾಜ್ಯಗಳ ಪೈಕಿ ಮಹಾರಾಷ್ಟ್ರದ್ದೇ ಸಿಂಹಪಾಲು – ಕರ್ನಾಟಕಕ್ಕೆ 2ನೇ ಸ್ಥಾನ..!