ಅಬುಧಾಬಿಯಲ್ಲಿ ಐತಿಹಾಸಿಕ ಹಿಂದೂ ದೇವಾಲಯ ನಿರ್ಮಾಣ – ಅಡಿಪಾಯಕ್ಕೆ ಭಾರತದ ಕಲ್ಲು..!
ಅಬುಧಾಬಿ: ಅಬುಧಾಬಿಯಲ್ಲಿ ಇದೇ ಮೊದಲ ಬಾರಿಗೆ ಹಿಂದೂ ದೇವಾಲಯವನ್ನ ನಿರ್ಮಾಣ ಮಾಡಲಾಗ್ತಿದೆ. ಈ ದೇವಾಲಯಕ್ಕೆ ಬೃಹತ್ ಅಡಿಪಾಯ ಹಾಕಲಾಗಿದ್ದು, ಫೌಂಡೇಶನ್ ಗಾಗಿ ಭಾರತದಿಂದ ಕಲ್ಲುಗಳನ್ನು ರವಾನಿಸಲಾಗಿದೆ. ಹೌದು ಬೋಚಾಸನವಾಸಿ ಶ್ರೀ ಅಕ್ಷರ್ ಪುರುಷೋತ್ತಂ ಸ್ವಾಮಿನಾರಾಯಣ್ ಸಂಸ್ಥೆಯು ಈ ಐತಿಹಾಸಿಕ ದೇಗುಲವನ್ನ ಬರೋಬ್ಬರಿ 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದೆ.
ಅಬು ಮರೇಖಾ ಪ್ರದೇಶದಲ್ಲಿ 27 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಬೃಹತ್ ಹಿಂದೂ ದೇವರ ಮಂದಿರ ನಿರ್ಮಾಣವಾಗ್ತಿದ್ದು, ಇದಕ್ಕೆ ಅಡಿಪಾಯ ಹಾಕಲಾಗುತ್ತಿದೆ. ನೆಲ ಮಟ್ಟದಿಂದ 4.5 ಮೀಟರ್ ಅಡಿಪಾಯದ ಹಾಕಲಾಗಿದೆ. ಸುಮಾರು 4,500 ಕ್ಯೂಬಿಕ್ ಕಾಂಕ್ರೀಟ್ ಹಾಕಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ಮತ್ತೆ ಅರ್ಚಕರಿಗಾಗಿ ಕೆಳಗಡೆ ಎರಡು ಸುರಂಗ ನಿರ್ಮಾಣ ಮಾಡಲಾಗುತ್ತದೆ.
ದೇವಸ್ಥಾನ ನಿರ್ಮಾಣಕ್ಕೆ ಭಾರತದಿಂದ ಕಲ್ಲುಗಳನ್ನು ತರಿಸಿಕೊಳ್ಳಲಾಗಿದೆ. ಸ್ತಂಭಗಳನ್ನು ರಾಜಸ್ಥಾನ ಮತ್ತು ಗುಜರಾತ್ನ ಕುಶಲಕರ್ಮಿಗಳು ಕೆತ್ತನೆ ಮಾಡಲಿದ್ದಾರೆ.
ಮಾ. 31ರ ಒಳಗಾಗಿ ಪ್ಯಾನ್ ಕಾರ್ಡ್ ಆಧಾರ್ ಲಿಂಕ್ ಮಾಡಿಸದೇ ಇದ್ದರೇ 1000 ರೂ. ದಂಡ..!
ಕೊರೋನಾ 2ನೇ ಅಲೆ – 8 ರಾಜ್ಯಗಳ ಪೈಕಿ ಮಹಾರಾಷ್ಟ್ರದ್ದೇ ಸಿಂಹಪಾಲು – ಕರ್ನಾಟಕಕ್ಕೆ 2ನೇ ಸ್ಥಾನ..!
ನೇಪಾಳಕ್ಕೆ ಭಾರತದ ನೆರವು – 1 ಲಕ್ಷ ಲಸಿಕೆ ಪೂರೈಕೆ..!
ಭಾರತದಲ್ಲಿ 5 ದಿನಗಳಲ್ಲೇ ಕೋಟಿ ಕೋಟಿ ಬಾಚಿದೆ ವಿದೇಶಿ ಸಿನಿಮಾ..! ಆದ್ರೂ ನಿರೀಕ್ಷೆಯ ಹುಸಿಯಾಗಿದೆ…!