ಭಾರತದಲ್ಲಿ 5 ದಿನಗಳಲ್ಲೇ ಕೋಟಿ ಕೋಟಿ ಬಾಚಿದೆ ವಿದೇಶಿ ಸಿನಿಮಾ..! ಆದ್ರೂ ನಿರೀಕ್ಷೆಯ ಹುಸಿಯಾಗಿದೆ…!
ಭಾರತದಲ್ಲಿ ವಿದೇಶಿ ಸಿನಿಮಾಗಳು ಅದ್ರಲ್ಲೂ ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಓರಿಯಂಟೆಡ್ ಸಿನಿಮಾಗಳು ರಿಲೀಸ್ ಆದ್ರೆ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತದೆ. ಆದ್ರೆ ಇತ್ತೀಚೆಗೆ ಅಂದ್ರೆ 5 ದಿನಗಳ ಹಿಂದೆ ಬಾರತದಾದ್ಯಂತೆ ಅನೇಕ ಥಿಯೇಟರ್ ಗಳಲ್ಲಿ ತೆರೆಕಂಡಿರುವ ಗಾಡ್ಜಿಲ್ಲಾ vs ಕಾಂಗ್ ಸಿನಿಮಾ ಹೇಳಿಕೊಳ್ಳುವಂತಹ ಸಕ್ಸಸ್ ಕಂಡಿಲ್ಲ ಎನ್ನಲಾಗಿದೆ.
ಹೌದು ಬುಧವಾರ ಅಂದ್ರೆ ಮಾರ್ಚ್ 24ಕ್ಕೆ ವರ್ಲ್ಡ್ ವೈಡ್ ಗಾಡ್ಜಿಲ್ಲಾ vs ಕಾಂಗ್ ರಿಲೀಸ್ ಆಗಿತ್ತು. ಆದರೆ ಭಾರತದಲ್ಲಿ ನಿರೀಕ್ಷೆ ಮಟ್ಟದ ಕಲೆಕ್ಷನ್ ಮಾಡದೇ ಸಿನಿಮಾಗೆ ಹಿನ್ನಡೆಯಾಗಿದೆ. ಗಾಡ್ಜಿಲ್ಲಾ vs ಕಾಂಗ್ ಸಿನಿಮಾ 5 ದಿನಗಳಲ್ಲಿ ಭಾರತದಲ್ಲಿ ಒಟ್ಟು 28.96 ಕೋಟಿ ಗಳಿಕೆ ಕಂಡಿದೆ.