ಹಾಲಿವುಡ್ ಗೆ ಹಾರಿದ ಬಾಲಿವುಡ್ ನ ಮತ್ತಿಬ್ಬ ಹಾಟ್ ನಟಿ..!
ಬಾಲಿವುಡ್ ನ ನಟ ನಟಿಯರು ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಗುರುತಿಸಿಕೊಳ್ತಿದ್ದಾರೆ. ಆ ಸಾಲಿನಲ್ಲಿ ಪ್ರಿಯಾಂಕಾ ಚೋಪ್ರಾ ಮೊದಲಿಗೆ ನೆನಪಾಗ್ತಾರೆ. ಮಲ್ಲಿಕಾ ಶೆರಾವತ್, ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ ಸಹ ಹಾಲಿವುಡ್ ನಲ್ಲಿ ಮಿಂಚಿದ್ದು, ಇದೀಗ ಆ ಸಾಲಿಗೆ ಬಾಲಿವುಡ್ ನ ಹಾಟ್ ನಟಿ ಸೇರ್ಪಡೆಯಾಗಿದ್ದಾರೆ. ಹೌದು ಶ್ರೀಲಂಟಕಾ ಬ್ಯೂಟಿ ಬಾಲಿವುಡ್ ನ ಸ್ಟಾರ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಲಿವುಡ್ ನ ದೊಡ್ಡ ಬಜೆಟ್ನ ಆಕ್ಷನ್ ಸಿನಿಮಾ ಒಂದಕ್ಕೆ ಆಯ್ಕೆಯಾಗಿದ್ದಾರೆ.
ಮಹಿಳಾ ಪ್ರಧಾನ ಸಿನಿಮಾದಲ್ಲಿ ಜಾಕ್ವೆಲಿನ್ ಕಾಣಿಸಿಕೊಳ್ತಿದ್ದಾರೆ. ‘ಅಂತಾಲಜಿ’ ಟೈಟಲ್ ನ ಈ ಸಿನಿಮಾಗಾಗಿ ಜಾಕ್ವೆಲಿನ್ ಸಕಲ ತಯಾರಿಗಳನ್ನ ನಡೆಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು 6 ಕಥೆಗಳಿರಲಿವೆ. 6 ನಟಿಯರು ಆಕ್ಷನ್ ಸ್ಟಂಟ್ಸ್ ಗಳನ್ನ ತೆರೆ ಮೇಲೆ ಪ್ರದರ್ಶಿಸಲಿದ್ದಾರೆ. ಈ 6 ನಟಿಯರ ಪೈಕಿ ಬಾಲಿವುಡ್ ನಟಿ ಜಾಕ್ವೆಲಿನ್ ಕೂಡ ಒಬ್ಬರಾಗಲಿದ್ದಾರೆ.