ನೇಪಾಳಕ್ಕೆ ಭಾರತದ ನೆರವು – 1 ಲಕ್ಷ ಲಸಿಕೆ ಪೂರೈಕೆ..!
ನವದೆಹಲಿ: ಇಡೀ ವಿಶ್ವವೇ ಕೊರೊನಾ ಹಾವಳಿಯಿಂದ ಕಂಗಾಲಾಗಿದೆ. ಇತ್ತ ಭಾರತ ಮೇಡ್ ಇನ್ ಇಂಡಿಯಾ ಕೋವಿಡ್ ಲಸಿಕೆಯನ್ನ ಇತರೇ ರಾಷ್ಟ್ರಗಳಿಗೆ ಪೂರೈಕೆ ಮಾಡುವಲ್ಲಿ ತೊಡಗಿದೆ. ಕೇಂದ್ರ ತನ್ನ ದೇಶದ ಜನರಿಗೆ ಮೊದಲು ಲಸಿಕೆ ಪೂರೈಕೆ ಮಾಡುವ ಬದಲು ಬೇರೆ ಬೇರೆ ದೇಶಗಳಲ್ಲಿ ಲಸಿಕೆ ಪೂರೈಕೆ ಮಾಡ್ತಿದೆ ಎನ್ನುವ ವಿಪಕ್ಷ ನಾಯಕರ ಆರೋಪದ ನಡುವೆಯೂ ಕೇಂದ್ರ ಸರ್ಕಾರ ಇದೀಗ ನೇಪಾಳಕ್ಕೆ ಲಸಿಕೆ ಪೂರೈಕೆ ಮಾಡಿ ನೆರವಾಗಿದೆ. ಭಾರತೀಯ ಸೇನೆ, ನೇಪಾಳದ ಸೇನೆಗೆ 1 ಲಕ್ಷ ಡೋಸ್ ಲಸಿಕೆಯನ್ನು ಉಡುಗೊರೆಯಾಗಿ ನೀಡಿದೆ.
ಭಾರತದ ನೆರೆ ರಾಷ್ಟ್ರವಾಗಿರುವ ನೇಪಾಳ ಕೊರೊನಾದಿಂದಾಗಿ ನಲುಗಿ ಹೋಗಿತ್ತು. ಹಾಗಾಗಿ ಭಾರತೀಯ ಸೇನೆ ತ್ರಿಭುವನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ನಲ್ಲಿ ಕೋವಿಡ್ ಲಸಿಕೆಯನ್ನು ನೇಪಾಳದ ಸೇನೆಗೆ ಗಿಫ್ಟ್ ಆಗಿ ನೀಡಿದೆ.