ರೈಲು ಮೈಮೇಲೆ ಹೋದರೂ ಮೊಬೈಲ್ ನೊಂದಿಗೆ ಸಂಭಾಷಣೆ – ವೀಡಿಯೋ ವೈರಲ್

1 min read

ರೈಲು ಮೈಮೇಲೆ ಹೋದರೂ ಮೊಬೈಲ್ ನೊಂದಿಗೆ ಸಂಭಾಷಣೆ – ವೀಡಿಯೋ ವೈರಲ್

ರಸ್ತೆ ದಾಟುವಾಗ ರೈಲು ಹಳಿ ದಾಟುವಾಗ  ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಸ್ವಲ್ಪ ಯಾಮಾರಿದರೂ ಜೀವಕ್ಕೆ ಕುತ್ತು ತರುತ್ತದೆ, ಅದರಲ್ಲೂ ಈ ಸ್ಮಾರ್ಟ್ ಪೋನ್ ಕಾಲಲ್ಲಿ ಯವ ಜನಾಂಗ ಮೊಬೈಲ್ ನಲ್ಲೇ ಮುಳುಗಿರುತ್ತದೆ. ಮೊಬೈಲ್ ಗೆ ಅಡಿಕ್ಟ್ ಆದರವರೂ  ಜೀವದ ಹಂಗನ್ನೂ ಬಿಟ್ಟು ಹೇಗೆ ವರ್ತಿಸುತ್ತಾರೆ ಎನ್ನುವೀ ವೀಡಿಯೋ ಸೋಶಿಯಲ್  ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಏಪ್ರಿಲ್ 12 ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ  ವೀಡಿಯೋ ವೈರಲ್ ಆಗಿದೆ. ಗೂಡ್ಸ್ ರೈಲೊಂದು ಹಳಿಮೇಲೆ ಸಾಗುತ್ತಿದ್ದಾಗ ಎರಡು ಹಳಿಗಳ ಟ್ರ್ಯಾಕ್ ಮಧ್ಯದಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತ ಮಹಿಳೆಯೊಬ್ಬಳು ಮಲಗಿರುತ್ತಾಳೆ ರೈಲು ಹೋದಮೇಲೆ ಆಕೆ ಮೊಬೈಲ್ ನಲ್ಲಿ ಮಾತನಾಡುತ್ತಲೇ ಎದ್ದು ನಿಂತ ಪ್ಲಾಟ್ ಪಾರ್ಮ್ ಹತ್ತುತ್ತಾಳೆ.

ರೈಲು ತಮ್ಮ ಮೇಲೆ ಹಾದುಹೋದರೂ ಧೃತಿಗೆಡದ ಮಹಿಳೆ ಕೆಲ ಕ್ಷಣಗಳ ಕಾಲ ಹಾಗೇ ಕೂತಿದ್ದು, ನಂತರ ಮೊಬೈಲ್ ನಂತೆ ಆರಾಮಾಗಿ ಮೊಬೈಲ್ ನಲ್ಲಿ ಮಾತಾಡುತ್ತಿರುತ್ತಾಳೆ.  ಈ ವಿಡಿಯೋ ಕ್ಲಿಪ್ ನೋಡಿದ ಕೆಲವರು ಮಹಿಳೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೆನ್ನೆಗೆ ಬಾರಿಸುವಂತೆ ಕಮೆಂಟ್ ಮಾಡಿದ್ದರು. ಕೆಲವರು ಮಹಿಳೆಯನ್ನು ಬಂಧಿಸುವಂತೆ ಒತ್ತಾಯಿಸಿ ಪ್ರಧಾನ ಮಂತ್ರಿ ಕಚೇರಿಗೆ ವಿಡಿಯೋ ಟ್ಯಾಗ್ ಮಾಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd