ನವದೆಹಲಿ : ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ (Mangaluru Cooker Bomb Explosion Case) ಸಂಚು ರೂಪಿಸಿದ್ದ ಐಸಿಸ್ ಉಗ್ರ ಸಂಘಟನೆಯ ಸಂಚುಕೋರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.
ಶಿವಮೊಗ್ಗ (Shivamogga) ಮೂಲದ ಅರಾಫತ್ ಅಲಿಯನ್ನು (Arafath Ali ) ಅಧಿಕಾರಿಗಳು ಬಂಧಿಸಿದ್ದಾರೆ. ಕೀನ್ಯಾ ರಾಜಧಾನಿ ನೈರೋಬಿಯಿಂದ ಆತ ದೆಹಲಿಗೆ (Delhi) ಬಂದಿಳಿಯುತ್ತಿದ್ದಂತೆ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈತ ದೇಶದಲ್ಲಿ ನೆಲೆಸದಿದ್ದರೂ ಐಎಸ್ನ ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾ ಉತ್ತೇಜಿಸಲು ಕಾರ್ಯಾಚರಣೆ ನಡೆಸುತ್ತಿದ್ದ ಎನ್ನಲಾಗಿದೆ.
ಐಸಿಸ್ ಸಂಘಟನೆಗೆ ಮುಸ್ಲಿಂ (Muslim) ಯುವಕರನ್ನು ನೇಮಿಸುವ ಕೆಲಸವನ್ನು ಮಾಡುತ್ತಿದ್ದ. ವಿವಿಧ ವಿಚಾರಗಳನ್ನು ಅವರ ತಲೆಗೆ ತುಂಬಿ ತೀವ್ರವಾದಿಗಳನ್ನಾಗಿ ಮಾಡುತ್ತಿದ್ದ ವಿಚಾರ ತನಿಖೆಯತಿಂದ ಬೆಳಕಿಗೆ ಬಂದಿತ್ತು. ಶಿವಮೊಗ್ಗ ತುಂಗಾ ತೀರದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ಪ್ರಕರಣ (Shivamogga Trial Blast Case) ಮತ್ತು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಸಂಚನ್ನು ಈತನೇ ರೂಪಿಸಿದ್ದ ಎನ್ನಲಾಗಿದೆ. ಸದ್ಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.








