ಒಂದು ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ನೀರಿನಲ್ಲಿ ತೊಳೆಯಿರಿ. ನಂತರ ಅದಕ್ಕೆ ರವೆ ಮತ್ತು ನೀರು ಸೇರಿಸಿ. ಅದಕ್ಕೆ ಮೊಸರು ಬೆರೆಸಿ. ಹತ್ತು ನಿಮಿಷ ನೆನೆಯಲು ಬಿಡಿ
ಬಳಿಕ ಮಿಕ್ಸಿಯಲ್ಲಿ ನುಣ್ಣಗಾಗುವಂತೆ ಅರೆಯಿರಿ.
ಅದಕ್ಕೆ ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಚೆನ್ನಾಗಿ ಕಲಸಿ. ಅಗತ್ಯವಿದ್ದರೆ ನೀರು ಸೇರಿಸಿ. ಉದ್ದಿನ ದೋಸೆ ಹಿಟ್ಟಿನ ಹದದಂತೆ ಇರಲಿ.
ಈಗ ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಾವಲಿಗೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. ಸೆಟ್ ದೋಸೆಯಂತೆ ಸ್ವಲ್ಪ ಅಗಲ ಮಾಡಿ.
ಮುಚ್ಚಳ ಮುಚ್ಚಿ ಬೇಯಿಸಿ.
ಹತ್ತು ಸೆಕೆಂಡುಗಳ ನಂತರ ದೋಸೆಯ ಮೇಲೆ ಎಣ್ಣೆ ಅಥವಾ ತುಪ್ಪ ಹಾಕಿ. ನಂತರ ದೋಸೆಯನ್ನು ತಿರುಗಿಸಿ ಹಾಕಿ. ಎರಡೂ ಬದಿಯೂ ಕಾಯಿಸಿ.
ದೋಸೆಯನ್ನು ತವೆಯಿಂದ ತೆಗೆದು, ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗುವಿನೊಂದಿಗೆ ಸೇವಿಸಿ.







