ADVERTISEMENT
Tuesday, March 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

5 ವಿಭಿನ್ನ , ಸುಲಭ ಹಾಗೂ ರುಚಿಕರ ಅಡುಗೆಗಳ ರೆಸಿಪಿಗಳು..!

Namratha Rao by Namratha Rao
October 25, 2021
in Cooking, Newsbeat, ಅಡುಗೆ
food
Share on FacebookShare on TwitterShare on WhatsappShare on Telegram

1. ಮನೆಯಲ್ಲೇ ಸುಲಭವಾಗಿ ತಯಾರಿಸಿ ಚಾಕೊಲೇಟ್‌

ಬೇಕಾಗುವ ಸಾಮಗ್ರಿಗಳು

ಅಮುಲ್ ಹಾಲಿನಪುಡಿ – 3 ಕಪ್
ಕೊಕೊ ಪುಡಿ – 1 ಕಪ್
ಸಕ್ಕರೆ – 2 ಕಪ್
ಬೆಣ್ಣೆ – 1/2 ಕಪ್
ಅಗತ್ಯವಿರುವಷ್ಟು ಗೋಡಂಬಿ, ಪಿಸ್ತಾ ಚೂರುಗಳು

Related posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

March 30, 2026
ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

March 30, 2026

Saakshatv cooking recipes chocolate

ಹಾಲಿನ ಪುಡಿ ಮತ್ತು ಕೊಕೊ ಪುಡಿಯನ್ನು ಚೆನ್ನಾಗಿ ಬೆರೆಸಿ ಅಥವಾ ಮಿಕ್ಸಿಯಲ್ಲಿ ಹಾಕಿ ಎರಡು ಪುಡಿಗಳನ್ನು ಚೆನ್ನಾಗಿ ಬೆರೆಸಿ.

ನಂತರ ದಪ್ಪವಾದ ಕೆಳಭಾಗದ ಪಾತ್ರೆಯಲ್ಲಿ ಅಥವಾ ಕಡಾಯಿಯಲ್ಲಿ ತೆಗೆದುಕೊಳ್ಳಿ.
ಅದನ್ನು ಬಿಸಿಮಾಡಿ. ನೀರು ಹಾಕಿ. ನೀರು ಬಿಸಿಯಾದಾಗ ಅದಕ್ಕೆ ಸಕ್ಕರೆ ಬೆರೆಸಿ ಚೆನ್ನಾಗಿ ಕಲಸಿ.

ಸಕ್ಕರೆ ನೀರಿನಲ್ಲಿ ಸಂಪೂರ್ಣವಾಗಿ ಕರಗಿ, ಮಿಶ್ರಣವು ಕುದಿಯಲು ಪ್ರಾರಂಭಿಸಿದಾಗ ಅದಕ್ಕೆ ಬೆಣ್ಣೆ ಸೇರಿಸಿ. ಜ್ವಾಲೆಯನ್ನು ಕಡಿಮೆ ಇರಿಸಿ.

ಬೆಣ್ಣೆ ಸಂಪೂರ್ಣವಾಗಿ ಕರಗಿಸಿದಾಗ ಅದಕ್ಕೆ ಕೊಕೊ ಹಾಲಿನ ಪುಡಿ ಮಿಶ್ರಣವನ್ನು ಸೇರಿಸಿ.

ಯಾವುದೇ ಉಂಡೆಗಳು ರೂಪುಗೊಳ್ಳದಂತೆ ಅದನ್ನು ಚೆನ್ನಾಗಿ ಕಲಕಿ ಮಿಶ್ರಣ ಮಾಡಿ.

ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ಅದನ್ನು ಕೆಳಗಿಳಿಸಿ.
ಬೇಕಿದ್ದರೆ ಹುರಿದ ಗೋಡಂಬಿ, ಪಿಸ್ತಾ ತುಂಡುಗಳನ್ನು ಮಿಶ್ರಣಕ್ಕೆ ಸೇರಿಸಿ.

Saakshatv cooking recipes chocolate

ಅದನ್ನು ತಣ್ಣಗಾಗಲು ಬಿಡಿ. ಸ್ವಲ್ಪ ಬೆಚ್ವಗಿರುವಾಗ ಮಿಶ್ರಣವನ್ನು ತೆಗೆದುಕೊಂಡು ಸಣ್ಣ ಚಾಕೊಲೇಟ್ ಚೆಂಡನ್ನು ತಯಾರಿಸಿ.
ಅಥವಾ ಒಂದು ಟ್ರೇ ಅನ್ನು ತೆಗೆದುಕೊಂಡು ಅದಕ್ಕೆ ಬೆಣ್ಣೆ ಸವರಿ ಅದರ ಮೇಲೆ ಚಾಕೊಲೇಟ್ ಮಿಶ್ರಣವನ್ನು ಹರಡಿ. ಈಗ ಬೇಕಾದ ಯಾವುದೇ ಆಕಾರದ ಚಾಕೊಲೇಟ್ ಅನ್ನು ಮಿಶ್ರಣದಿಂದ ತಯಾರಿಸಿ.

ಮನೆಯಲ್ಲೇ ತಯಾರಿಸಿದ ಚಾಕೊಲೇಟ್‌ಗಳನ್ನು ಸವಿಯಿರಿ.

2. ಗೋಧಿಹಿಟ್ಟಿನ ಎಗ್ ಲೆಸ್ ಚಾಕೊಲೇಟ್ ಕೇಕ್

ಬೇಕಾಗುವ ಸಾಮಗ್ರಿಗಳು

ಗೋಧಿಹಿಟ್ಟು – 1 ಕಪ್
ಕೋಕೋ ಪೌಡರ್ – 1/2 ಕಪ್
ಅಮುಲ್ ಹಾಲಿನಪುಡಿ – 4 ಚಮಚ
ಹಾಲು – 1 ಕಪ್
ವಿನೆಗರ್ – 1ಚಮಚ
ಎಣ್ಣೆ – 1/4 ಕಪ್
ಸಕ್ಕರೆ ಪುಡಿ – 1/2ಕಪ್
ವೆನಿಲ್ಲಾ ಎಸ್ಸೆನ್ಸ್ – 1ಚಮಚ
ಬೇಕಿಂಗ್ ಪೌಡರ್ – 1 1/2 ಚಮಚ
ಬೇಕಿಂಗ್ ಸೋಡಾ – 1/4 ಚಮಚ

ತುಪ್ಪ – 1 ಚಮಚ
ಮೈದಾ – 1ಚಮಚ
(cake pan ಗ್ರೀಸ್ ಮಾಡಲು ಮಾತ್ರ)
ಚಾಕೊಲೇಟ್ ತುರಿ – 2tbsp ( ಅಲಂಕರಿಸಲು ಮಾತ್ರ) (optional)

ಮಾಡುವ ವಿಧಾನ

ಮೊದಲು ಹಾಲಿಗೆ ವಿನೆಗರ್ ಸೇರಿಸಿ, ಚೆನ್ನಾಗಿ ಕಲಕಿ 10 ನಿಮಿಷ ಹಾಗೆ ಬಿಡಿ.‌ ನಂತರ ವಿನೆಗರ್ ಸೇರಿಸಿದ ಹಾಲನ್ನು ಒಂದು ಬೌಲ್ ಗೆ ಹಾಕಿ. ಎಣ್ಣೆ, ವೆನಿಲ್ಲಾ ಎಸೆನ್ಸ್, ಸಕ್ಕರೆ ಪುಡಿ ಸೇರಿಸಿ ಚೆನ್ನಾಗಿ ಬೀಟ್ ಮಾಡಿ.
ಈಗ ಇದಕ್ಕೆ ಸ್ವಲ್ಪ ಸ್ವಲ್ಪವೇ ಕೋಕೋ ಪೌಡರ್, ಹಾಲಿನ ಪುಡಿ , ಜರಡಿ ಹಿಡಿದ ಗೋಧಿ ಹುಡಿ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ ಹಾಕಿ ನಿಧಾನಕ್ಕೆ ಬೆರೆಸಿ. ನಂತರ ನಿಧಾನವಾಗಿ ಹಾಲನ್ನು ಸೇರಿಸುತ್ತಾ ಎಲ್ಲವನ್ನೂ ಒಂದೇ ದಿಕ್ಕಿನಲ್ಲಿ‌ ಗಂಟಿಲ್ಲದಂತೆ ಕಲಸಿ. ಮಿಶ್ರಣವು ಇಡ್ಲಿ ಹಿಟ್ಟಿನ ಹದಕ್ಕೆ ಬರುವಂತೆ ಕಲಸಿ. ಈಗ ಕೇಕ್ ಮಿಕ್ಸ್ ತಯಾರಾಗಿದೆ.

ಕಡಾಯಿಯ ಒಳಗೆ ರಿಂಗ್ ಇಟ್ಟು, ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿಟ್ಟು ಫ್ರೀ-ಹೀಟ್ ಮಾಡಿ.

ನಂತರ ಕೇಕ್ ಮಾಡುವ ಪಾತ್ರೆ (cake pan) ಗೆ ತುಪ್ಪ ಸವರಿ, ಮೈದಾದಿಂದ ಡಸ್ಟಿಂಗ್ ಮಾಡಿ. ತಯಾರಾದ ಕೇಕ್ ಮಿಕ್ಸ್ ಅನ್ನು ಕೇಕ್ ಪ್ಯಾನ್ ಗೆ ಹಾಕಿ.

ಈಗ ಬಿಸಿಯಾದ ಕಡಾಯಿಯಲ್ಲಿರುವ ರಿಂಗ್ ಮೇಲೆ ಗ್ರೀಸ್ ಮಾಡಿದ ಪಾತ್ರೆಯನ್ನು ಇಡಿ. ಮುಚ್ಚಳ ಮುಚ್ಚಿ ಕಡಿಮೆಯಿಂದ ಮಧ್ಯಮ ಉರಿಯಲ್ಲಿ ಕೇಕ್ ಅನ್ನು 30-35 ನಿಮಿಷ ಬೇಯಿಸಿ.
ಈಗ ಗೋಧಿಹಿಟ್ಟಿನ ಎಗ್ ಲೆಸ್ ಚಾಕೊಲೇಟ್ ಕೇಕ್ ರೆಡಿಯಾಗಿದೆ. ಇದು ತಣ್ಣಗಾದ ಬಳಿಕ ತುರಿದ ಚಾಕೊಲೇಟ್ ಪುಡಿಯಿಂದ ಅಲಂಕರಿಸಿ.

3. ಗರಿಗರಿಯಾದ ಬೆಳ್ಳುಳ್ಳಿ ಮಂಡಕ್ಕಿ / ಹುರಿಯಕ್ಕಿ

ಬೇಕಾಗುವ ಸಾಮಗ್ರಿಗಳು

ಮಂಡಕ್ಕಿ / ಹುರಿಯಕ್ಕಿ 1 ಲೀಟರ್
ಬೆಳ್ಳುಳ್ಳಿ 15-20 ಎಸಳು
ಜೀರಿಗೆ 1 ಚಮಚ
ಸಣ್ಣಗೆ ಕತ್ತರಿಸಿದ ಹಸಿಮೆಣಸಿನ ಕಾಯಿ 4
ಕರಿಬೇವಿನ ಸೊಪ್ಪು ಸ್ವಲ್ಪ
ಚಿಕ್ಕದಾಗಿ ಹೆಚ್ಚಿದ ಕೊಬ್ಬರಿ 1/2 ಕಪ್
ಶೇಂಗಾ/ಕಡಲೆಕಾಯಿ 1/4 ಕಪ್
ಹುರಿಗಡಲೆ 200 gms
ನಿಂಬೆ 1/2
ಮೆಣಸಿನ ಹುಡಿ 1 ಚಮಚ
ಅರಿಶಿಣ ಪುಡಿ 1/2 ಚಮಚ
ಚಾಟ್ ಮಸಾಲಾ 1/2 ಚಮಚ
ಸಕ್ಕರೆ ಪೌಡರ್ 1 ಚಮಚ (optional)
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ಸ್ವಲ್ಪ
Saakshatv cooking recipes Garlic mandakki

Saakshatv cooking recipes Garlic mandakki

ಮಾಡುವ ವಿಧಾನ

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಜೀರಿಗೆ ಸೇರಿಸಿ, ಬಳಿಕ ಜಜ್ಜಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಅದಕ್ಕೆ ಶೇಂಗಾ ಬೇರೆಸಿ 30 ಸೆಕೆಂಡ್ ಹುರಿಯಿರಿ. ನಂತರ ಹಸಿ ಮೆಣಸು, ಕೊಬ್ಬರಿ ಹಾಕಿ ಹುರಿಯಿರಿ. ಬಳಿಕ ಅದಕ್ಕೆ ‌ಹುರಿಗಡಲೆ ಕರಿಬೇವಿನ ಸೊಪ್ಪು ಸೇರಿಸಿ, ಹುರಿಯಿರಿ. ನಿಂಬೇರಸ ಹಿಂಡಿ. ಈಗ ಮೆಣಸಿನ ಪುಡಿ, ಅರಿಶಿಣ ಪುಡಿ, ಸಕ್ಕರೆ ಪುಡಿ, ಚಾಟ್ ಮಸಾಲಾ, ಉಪ್ಪು ಹಾಕಿ ತಿರುವಿ.

Saakshatv cooking recipes Garlic mandakki

ಈಗ ಅದಕ್ಕೆ ಮಂಡಕ್ಕಿ/ ಹುರಿಯಕ್ಕಿ ಸೇರಿಸಿ ತಿರುವಿ. 2 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ. ‌ಈಗ ಗರಿಗರಿಯಾದ ಬೆಳ್ಳುಳ್ಳಿ ಮಂಡಕ್ಕಿ ಸವಿಯಲು ಸಿದ್ಧ.

4. ದಿಢೀರ್(instant) ಅವರೆಕಾಯಿ ರವಾ ಪಡ್ಡು

ಬೇಕಾಗುವ ಸಾಮಗ್ರಿಗಳು

ಬೇಯಿಸಿದ ಅವರೆಕಾಯಿ 1 ಕಪ್
ರವಾ 1 ಕಪ್
ಮೊಸರು 1 ಕಪ್
ಈರುಳ್ಳಿ – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ಹಸಿ ಮೆಣಸಿನಕಾಯಿ – 2
ರುಚಿಗೆ ತಕ್ಕಷ್ಟು ‌ಉಪ್ಪು
ಸಾಸಿವೆ 1 ಚಮಚ
ಅರಿಶಿನ 1/4 ಚಮಚ
ತೆಂಗಿನ ತುರಿ 1/2 ಕಪ್
ಕೆಲವು ಕರಿಬೇವಿನ ಸೊಪ್ಪುಗಳು
ಅಡಿಗೆ ಸೋಡಾ/ಬೇಕಿಂಗ್ ಸೋಡಾ- 1/4 ಚಮಚ
Saakshatv cooking recipes paddu

Saakshatv cooking recipes paddu

ಮಾಡುವ ವಿಧಾನ

ಒಂದು ಪಾತ್ರೆಯಲ್ಲಿ ರವಾ ತೆಗೆದುಕೊಂಡು ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ‌ಮಿಕ್ಸ್ ಮಾಡಿ. ಅದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ, ಹಿಟ್ಟಿನ ಹದಕ್ಕೆ ಕಲಸಿ. 30 ನಿಮಿಷ ಹಾಗೆ ಬಿಡಿ.

ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಸಾಸಿವೆ ಸೇರಿಸಿ, ಸಾಸಿವೆ ಸಿಡಿದ ಬಳಿಕ ಅದಕ್ಕೆ ಅರಿಶಿನ, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವಿನ ಸೊಪ್ಪು ಸೇರಿಸಿ. ನಂತರ ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ಬಳಿಕ ಬೇಯಿಸಿದ ಅವರೆಕಾಯಿ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ‌ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ.
ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ.

ಈಗ ರವಾ ಹಿಟ್ಟಿಗೆ ಈ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಬೇಕಾದಷ್ಟು ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ. ಬೇಕಿದ್ದರೆ ಉಪ್ಪು ಸೇರಿಸಿ. ನಂತರ ಅಡಿಗೆ ಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

Saakshatv cooking recipes paddu

ಸ್ಟೌವ್ ಮೇಲೆ ಪಡ್ಡು ಮಾಡುವ ಪ್ಯಾನ್ ಇಟ್ಟು ಎಲ್ಲ ಅಚ್ಚುಗಳಿಗೆ ಎಣ್ಣೆ ಸವರಿ. ಎಣ್ಣೆ ಬಿಸಿಯಾಗುತ್ತಿದ್ದಂತೆ, ರೆಡಿ ಮಾಡಿಟ್ಟುಕೊಂಡ ಮಿಶ್ರಣವನ್ನು ಎಲ್ಲ ಅಚ್ಚುಗಳಿಗೆ ಹಾಕಿ ಎರಡು ಕಡೆ ಬೇಯಿಸಿ.
ಗೋಲ್ಡನ್ ಬಣ್ಣ ಬರುವವರೆಗೆ ಪ್ರತಿ ಬದಿಯಲ್ಲಿ ಒಂದು ನಿಮಿಷ ಪಡ್ಡುಗಳನ್ನು ಬೇಯಿಸಿ.
ಈಗ ಬಿಸಿ ಬಿಸಿ ಅವರೆಕಾಯಿ ರವಾ ಪಡ್ಡು ಸವಿಯಲು ಸಿದ್ಧ.

5. ನುಗ್ಗೆ ಸೊಪ್ಪಿನ ಅಕ್ಕಿ ರೊಟ್ಟಿ

ಅಕ್ಕಿ ಹಿಟ್ಟು 1 ಕಪ್
ಅನ್ನ 1 ಕಪ್
ಹೆಚ್ಚಿದ ನುಗ್ಗೆ ಸೊಪ್ಪು 1 ಕಪ್
ಚಿಕ್ಕದಾಗಿ ಹೆಚ್ಚಿದ ಈರುಳ್ಳಿ 1/2 ಕಪ್
ಚಿಕ್ಕದಾಗಿ ಹೆಚ್ಚಿದ ಹಸಿಮೆಣಸಿನಕಾಯಿ 2-3
ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ಸ್ವಲ್ಪ

Saakshatv cooking recipes Moringa rotti

ಮಾಡುವ ವಿಧಾನ:
ಮಿಕ್ಸಿಯಲ್ಲಿ ಅನ್ನವನ್ನು ರುಬ್ಬಿ. ನಂತರ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ.
ಅದಕ್ಕೆ ‌ ಅಕ್ಕಿ ಹಿಟ್ಟು, ಹೆಚ್ಚಿದ ನುಗ್ಗೆ ಸೊಪ್ಪು, ಹೆಚ್ಚಿದ ಈರುಳ್ಳಿ, ಹೆಚ್ಚಿದ ಹಸಿಮೆಣಸಿನಕಾಯಿ, ಹೆಚ್ಚಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನೂ ಸೇರಿಸಿ, ಚೆನ್ನಾಗಿ ನಾದಬೇಕು.
ಚೆನ್ನಾಗಿ ಮಿಕ್ಸ್ ಆದ ಬಳಿಕ ಅದರಿಂದ ಸಣ್ಣ ಉಂಡೆಗಳನ್ನು ‌ಮಾಡಿ.
ಬಳಿಕ ಬಾಳೆ ಎಲೆಗೆ ಎಣ್ಣೆ ಸವರಿ ರೊಟ್ಟಿ ತಟ್ಟಿ.
ಕಾವಲಿಯನ್ನು ಒಲೆಯ ಮೇಲಿಟ್ಟು ಬಿಸಿ ಮಾಡಿ. ನಂತರ ತಟ್ಟಿದ ರೊಟ್ಟಿಯನ್ನು ಕಾದ ಕಾವಲಿ ಮೇಲೆ ಹಾಕಿ ಎಣ್ಣೆ ಸವರುತ್ತಾ ಎರಡೂ ಬದಿಗಳನ್ನು ಚೆನ್ನಾಗಿ ಬೇಯಿಸಿ.
Saakshatv cooking recipes Moringa rotti
ಈಗ ರುಚಿಯಾದ ಬಿಸಿ ಬಿಸಿ ನುಗ್ಗೆ ಸೊಪ್ಪಿನ ಅಕ್ಕಿ ರೊಟ್ಟಿ ಸವಿಯಲು ರೆಡಿ.

ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.

 

Tags: #saakshatvcookingfood recipies
ShareTweetSendShare
Join us on:

Related Posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

by Shwetha
March 30, 2026
0

ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

by Shwetha
March 30, 2026
0

ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಸಂಪೂರ್ಣವಾಗಿ ಚುನಾವಣಾ ಮೂಡ್‌ಗೆ ಜಾರಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ...

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

by Shwetha
March 30, 2026
0

ಮುಂಬರುವ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು...

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

by Shwetha
March 30, 2026
0

ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಪಿಎಸ್ಐಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಯುವಜನತೆಗೆ ಹಾಗೂ ಪೊಲೀಸ್ ಇಲಾಖೆಗೆ ಭರ್ಜರಿ ಸಿಹಿಸುದ್ದಿ...

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

by Shwetha
March 30, 2026
0

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇರುವುದು ಸಾಮಾನ್ಯ. ಗ್ಯಾಸ್ ಖಾಲಿಯಾದರೆ ಊಟಕ್ಕೆ ಪರದಾಡಬೇಕು ಎಂಬ ಭಯದಿಂದ ಅನೇಕರು ಮೂರ್ನಾಲ್ಕು ಸಿಲಿಂಡರ್ ಗಳನ್ನು ಅಡ್ವಾನ್ಸ್ ಆಗಿ ಬುಕ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram