5 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!
1. ಸೀಗಡಿ ಸುಕ್ಕಾ
ಬೇಕಾಗುವ ಸಾಮಾಗ್ರಿಗಳು
ಸೀಗಡಿ – 2 ಕಪ್
ಈರುಳ್ಳಿ – 1
ಹುರಿದ ಕೊತ್ತಂಬರಿ ಬೀಜ – 1 ಚಮಚ
ಹುಣಸೆಹಣ್ಣು – ಸ್ವಲ್ಪ
ಹುರಿದ ಕೆಂಪು ಮೆಣಸು – 10 -12
ತಾಜಾ ತುರಿದ ತೆಂಗಿನಕಾಯಿ – 1 ಕಪ್
ಜೀರಿಗೆ – 1 ಚಮಚ
ಬೆಳ್ಳುಳ್ಳಿ ಎಸಳು – 4
ಅರಿಶಿನ ಪುಡಿ 1/4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – 3 ಚಮಚ

ಮಾಡುವ ವಿಧಾನ
ಸೀಗಡಿಗಳನ್ನು ಸ್ವಚ್ಛಗೊಳಿಸಿ ತೊಳೆಯಿರಿ. ನಂತರ ಉಪ್ಪು ಮತ್ತು ಅರಿಶಿನ ಪುಡಿಯೊಂದಿಗೆ ಮ್ಯಾರಿನೇಟ್ ಮಾಡಿ.
10 ನಿಮಿಷಗಳ ನಂತರ 1/4 ಕಪ್ ನೀರು ಸೇರಿಸಿ 3 -4 ನಿಮಿಷ ಬೇಯಿಸಿ ಇಟ್ಟುಕೊಳ್ಳಿ.
ನಂತರ ಕೆಂಪು ಮೆಣಸು, ಹುಣಸೆಹಣ್ಣು, ಹುರಿದ ಕೊತ್ತಂಬರಿ ಬೀಜಗಳು ಮತ್ತು ಕತ್ತರಿಸಿದ 1 ಈರುಳ್ಳಿಯನ್ನು ರುಬ್ಬಿ ನಯವಾದ ಪೇಸ್ಟ್ ಮಾಡಿ. ನಂತರ ತುರಿದ ತೆಂಗಿನಕಾಯಿ, ಜೀರಿಗೆ, ಬೆಳ್ಳುಳ್ಳಿ ಸೇರಿಸಿ ಸ್ವಲ್ಪ ನೀರು ಸೇರಿಸಿ ತರಿ ತರಿಯಾಗಿ ರುಬ್ಬಿ.
ನಂತರ ಕಡಾಯಿಯನ್ನು ಬಿಸಿ ಮಾಡಿ ಎಣ್ಣೆಯನ್ನು ಸೇರಿಸಿ. ಈಗ ಸಣ್ಣದಾಗಿ ಕತ್ತರಿಸಿದ 1 ಈರುಳ್ಳಿಯನ್ನು ಕೆಂಪಗಾಗುವವರೆಗೆ ಹುರಿಯಿರಿ. ರುಬ್ಬಿಟ್ಟ ಮಸಾಲಾ ಪೇಸ್ಟ್ ಸೇರಿಸಿ. ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿ. ನಂತರ ಬೇಯಿಸಿದ ಸೀಗಡಿ ಮತ್ತು ಉಪ್ಪು ಸೇರಿಸಿ (ಬೇಕಿದ್ದರೆ) 2 ನಿಮಿಷ ಬೇಯಿಸಿ. ಈಗ ಸೀಗಡಿ ಸುಕ್ಕಾ ಸವಿಯಲು ಸಿದ್ಧವಾಗಿದೆ.
5 ಸುಲಭ ಮತ್ತು ಬಹಳ ರುಚಿಕರ ಪಾಯಸಗಳ ರೆಸಿಪಿಗಳು..!
2. ಕೇರಳದ ಆಪಂ
ಬೇಕಾಗುವ ಸಾಮಗ್ರಿಗಳು
ಅಕ್ಕಿ – 2 ಕಪ್
ಉದ್ದಿನಬೇಳೆ – ಒಂದು ಮುಷ್ಟಿ
ದಪ್ಪ ತೆಂಗಿನಕಾಯಿ ಹಾಲು – 1 ಕಪ್
ಸಕ್ಕರೆ – 1 ಚಮಚ
ಯೀಸ್ಟ್ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಮೊದಲಿಗೆ ಅಕ್ಕಿ ಮತ್ತು ಉದ್ದಿನಬೇಳೆಯನ್ನು ನೀರಿನಲ್ಲಿ 4 ಗಂಟೆ ನೆನೆಸಿಡಿ. ನಂತರ ನುಣ್ಣಗೆ ಕಡೆದುಕೊಳ್ಳಿ. 5-6 ಗಂಟೆ ಹುದುಗು ಬರಿಸಲು ಬಿಡಿ. ನಂತರ ಸಕ್ಕರೆ, ಉಪ್ಪು, ತೆಂಗಿನ ಹಾಲು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದಕ್ಕೆ ಯೀಸ್ಟ್ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
ಈಗ ಚಿಕ್ಕ ಬಾಣಲೆಯನ್ನು ಬಿಸಿ ಮಾಡಿ ತುಪ್ಪ ಸವರಿ. ಒಂದು ಸೌಟು ಹಿಟ್ಟನ್ನು ಹಾಕಿ ಮೆಲ್ಲಗೆ ವೃತ್ತಾಕಾರವಾಗಿ ಒಮ್ಮೆ ತಿರುಗಿಸಿ. ನಂತರ ಬಾಣಲೆಯ ಬಾಯಿಮುಚ್ಚಿ ಬೇಯಿಸಿ, ನಂತರ ತೆಗೆಯಿರಿ. ರುಚಿಕರವಾದ ಆಪಂ ಸವಿಯಲು ಸಿದ್ಧವಾಗಿದೆ.
5 ಸುಲಭ ಬ್ರೇಕ್ ಫಾಸ್ಟ್ ರೆಸಿಪಿಗಳು – ರೈಸ್ ಬಾತ್ / ಪಲಾವ್ / ಪ್ರೈಡ್ ರೈಸ್..!
3. ರುಚಿಯಾದ ಬ್ರೆಡ್ ಪಕೋಡ
ಬೇಕಾಗುವ ಸಾಮಗ್ರಿಗಳು
ಬ್ರೆಡ್ – 4 ತುಂಡು
ಬೇಯಿಸಿದ ಆಲೂಗಡ್ಡೆ – 3
ಹಸಿಮೆಣಸಿನಕಾಯಿ – 1
ಶುಂಠಿ – 1 ಇಂಚು
ಮೆಣಸಿನ ಪುಡಿ – 1/2 ಚಮಚ
ಕೊತ್ತಂಬರಿ ಪುಡಿ – 2 ಚಮಚ
ಚಾಟ್ ಮಸಾಲ – 1/2 ಚಮಚ
ಕಡಲೆ ಹಿಟ್ಟು – 1 ಕಪ್
ಅಕ್ಕಿ ಹಿಟ್ಟು – 2 ಚಮಚ
ಸೋಡಾ – ಚಿಟಿಕೆಯಷ್ಟು
ಗ್ರೀನ್ ಚಟ್ನಿ – 4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯವಿರುವಷ್ಟು ನೀರು

ಮಾಡುವ ವಿಧಾನ
ಮೊದಲಿಗೆ ಪಾತ್ರೆಯಲ್ಲಿ ಬೇಯಿಸಿದ ಆಲೂಗಡ್ಡೆ, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು, ಶುಂಠಿ, ಕೊತ್ತಂಬರಿಪುಡಿ, 1/4 ಚಮಚ ಮೆಣಸಿನ ಪುಡಿ, ಚಾಟ್ ಮಸಾಲ ಹಾಕಿ ಚೆನ್ನಾಗಿ ಬೆರೆಸಿ.
ನಂತರ ಬ್ರೆಡ್ ಗೆ ಗ್ರೀನ್ ಚಟ್ನಿ ಸವರಿ. ಅದನ್ನು ಅರ್ಧ ತುಂಡಾಗಿ ಕತ್ತರಿಸಿ. ಒಂದು ಅರ್ಧ ಬ್ರೆಡ್ ತುಂಡಿನ ಮೇಲೆ ಆಲೂಗಡ್ಡೆ ಮಿಶ್ರಣವನ್ನು ಹಾಕಿ ಉಳಿದ ಅರ್ಧ ತುಂಡು ಬ್ರೆಡ್ ಅನ್ನು ಅದರ ಮೇಲಿರಿಸಿ.
ಬಳಿಕ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, 1/4 ಚಮಚ ಮೆಣಸಿನ ಪುಡಿ, ಉಪ್ಪು, ಸೋಡಾ, ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಬ್ರೆಡ್ ಅನ್ನು ಈ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ. ರುಚಿಯಾದ ಬ್ರೆಡ್ ಪಕೋಡ ಸವಿಯಲು ಸಿದ್ಧವಾಗಿದೆ.
3 ಸುಲಭ ಮತ್ತು ಬಹಳ ರುಚಿಕರ ಮೊಟ್ಟೆಯಿಂದ ತಯಾರಿಸಬಹುದಾದ ಅಡುಗೆಗಳು..!
4. ವೆಜಿಟೆಬಲ್ ದೋಸೆ
ಬೇಕಾಗುವ ಪದಾರ್ಥ:
ಅಕ್ಕಿ – 1 ಕಪ್
ಉದ್ದಿನ ಬೇಳೆ – 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಕರಿಬೇವಿನ ಸೊಪ್ಪು – ಸ್ವಲ್ಪ
ಇಂಗು – ಚಿಟಿಕೆಯಷ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಚಿಕ್ಕದಾಗಿ ಕತ್ತರಿಸಿದ ತರಕಾರಿ – 1ಕಪ್
ಟೊಮೆಟೊ – 1
ಈರುಳ್ಳಿ - 1

ಮಾಡುವ ವಿಧಾನ
ಮೊದಲಿಗೆ ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು 4 ಗಂಟೆಗಳ ಕಾಲ ನೆನೆ ಹಾಕಿ. ನಂತರ ಮಿಕ್ಸಿ ಜಾರಿಗೆ ಹಾಕಿ ರುಬ್ಬಿ. ಬಳಿಕ ಅದಕ್ಕೆ ಉಪ್ಪು, ಕರಿಬೇವು, ಇಂಗು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಟೊಮೋಟೋ, ತರಕಾರಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಕೆಲವು ಸಮಯದ ವರೆಗೆ ಇದನ್ನು ಹಾಗೆ ಬಿಡಿ. ನಂತರ ದೋಸೆ ತವೆಯನ್ನು ಬಿಸಿ ಮಾಡಿ ಅದರ ಮೇಲೆ ಎಣ್ಣೆಯನ್ನು ಸವರಿ. ಮಿಶ್ರಣವನ್ನು ಹಾಕಿ ವೃತ್ತಾಕಾರವಾಗಿ ಹರಡಿ. ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿಯನ್ನು ಹೊಂಬಣ್ಣಕ್ಕೆ ತಿರುಗುವವರೆಗೆ ಬೇಯಿಸಿ. ಈಗ ಚಟ್ನಿ ಜೊತೆ ಬಿಸಿ ಬಿಸಿ ವೆಜಿಟೆಬಲ್ ದೋಸೆಯನ್ನು ಸವಿಯಿರಿ.
5 ಸುಲಭ ಮತ್ತು ರುಚಿಕರ ಸಿಹಿ ತಿನಿಸುಗಳು ರೆಸಿಪಿಗಳು ನಿಮಗಾಗಿ..!
5. ಮೊಟ್ಟೆಯ ಕಬಾಬ್
ಬೇಕಾಗುವ ಸಾಮಗ್ರಿಗಳು
ಮೊಟ್ಟೆಗಳು – 6
ಕೆಂಪು ಮೆಣಸು ಹುಡಿ 2 ಚಮಚ
ಕಡ್ಲೆಹಿಟ್ಟು 2 ಚಮಚ
ಕೊತ್ತಂಬರಿ ಹುಡಿ 1 ಚಮಚ
ಗರಂ ಮಸಾಲ 1/2 ಟೀಸ್ಪೂನ್
ಸಣ್ಣದಾಗಿ ಕತ್ತರಿಸಿದ ಈರುಳ್ಳಿ -1
ಪೆಪ್ಪರ್ ಪುಡಿ 1 ಚಮಚ
ಬ್ರೆಡ್ ಹುಡಿ – 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಹುರಿಯಲು ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಮೊಟ್ಟೆಗಳನ್ನು 15 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ, ಒಂದು ಬಟ್ಟಲಿನಲ್ಲಿ ಮೊಟ್ಟೆಯ ಸಿಪ್ಪೆ ತೆಗೆದು ಅವುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
ಇದರ ನಂತರ, ಪೆಪ್ಪರ್ ಪುಡಿ, ಕೊತ್ತಂಬರಿ ಹುಡಿ, ಈರುಳ್ಳಿ, ಗರಂ ಮಸಾಲ, ಕಡ್ಲೆಹಿಟ್ಟು, ಕೆಂಪು ಮೆಣಸು ಪುಡಿ ಮತ್ತು ಉಪ್ಪು ಸೇರಿಸಿ. ನಂತರ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕತ್ತರಿಸಿದ ಮೊಟ್ಟೆಗಳನ್ನು ಸೇರಿಸಿ ಮಿಶ್ರ ಮಾಡಿ.
ಈಗ ಈ ಮಿಶ್ರಣದಿಂದ ಸಣ್ಣ ಕಬಾಬ್ಗಳನ್ನು ತಯಾರಿಸಿ ಅದಕ್ಕೆ ಬ್ರೆಡ್ ಹುಡಿ ಲೇಪಿಸಿ.
ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಂತರ ಕಬಾಬ್ಗಳನ್ನು ಬಿಸಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣಕ್ಕೆ ಬರುವವರೆಗೆ ಡೀಪ್ ಫ್ರೈ ಮಾಡಿ. ಬಿಸಿಯಾದ ಮೊಟ್ಟೆಯ ಕಬಾಬ್ ಸವಿಯಲು ಸಿದ್ಧವಾಗಿದೆ.








