Cooking : ಕೋಲ್ಡ್ ಕಾಫಿ… ( Cold Coffee)
ಬೇಕಾಗಿರುವ ಪದಾರ್ಥಗಳು :
ಇಬ್ಬರಿಗೆ ಮಾಡಲು ಬೇಕಾದ ಪ್ರಮಾಣ..
ಹೆವಿ ಕ್ರೀಮ್ ಹಾಲು ( Cream Milk ) ½ ಲೀಟರ್
ಐಸ್ ಕ್ಯೂಬ್ ಗಳು ನಿಮಗೆ ಬೇಕಾದಷ್ಟು
ಸಕ್ಕರೆ ನಿಮ್ಮ ರುಚಿಗೆ ಅನುಸಾರ
ಬ್ರೂ / ನೆಸ್ಕೆಫೆ ಕಾಫಿಪುಡಿ 3 ಸ್ಪೂನ್ ( ಸ್ಟ್ರಾಂಗ್ ಅಥವ ಲೈಟ್ , ನಿಮ್ಮ ಚಾಯ್ಸ್ ಗೆ ತಕ್ಕಷ್ಟು)
ಮಾಡುವ ವಿಧಾನ :
ಕಾಯಿಸಿ ಫ್ರಿಡ್ಜ್ ನಲ್ಲಿ ಇಡಲಾಗಿದ್ದು ಹಾಲು ಅಥವ ಹಾಲನ್ನ ಕಾಯಿಸಿ ಅದನ್ನ ಪೂರ್ತಿ ಆರಿಸಿದ ನಂತರ ಬಳಸಬಹುದು..
ಜ್ಯೂಸ್ ಮಿಕ್ಸರ್ ( ಜಾರ್ ) ಗೆ ಮೊದಲಿಗೆ ಹಾಲು ಹಾಕಿ… ಒಂದು ಚಿಕ್ಕ ಲೋಟದಲ್ಲಿ ಮೂರು ಸ್ಪೂನ್ ಕಾಫಿಪುಡಿ ಹಾಕಿ ಒಂದೇ ಒಂದು ಸ್ಪೂನ್ ನೀರು ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಜಾರಿಗೆ ಹಾಕಿ , ಸಕ್ಕರೆ ಹಾಕಿ ನಂತರ ಅರ್ಧ ಐಸ್ ಕ್ಯೂಬ್ ಗಳನ್ನ ಹಾಕಿಕೊಳ್ಳಿ ,,,, ಚೆನ್ನಾಗಿ ಗ್ರೈಂಡ್ ಮಾಡಿ ,,,, ನಂತರ ಲೋಟಕ್ಕೆ ಹಾಕಿ. ಅದಕ್ಕೆ ನಿಮಗೆ ಬೇಕಾದರೆ ಒಂದು ಸ್ಕೂಪ್ ವೆನಿಲ್ಲಾ ಐಸ್ ಕ್ರೀಮ್ ಸೇರಿಸಿಕೊಳ್ಳಿ , ಬೇಡದೇ ಇದ್ದಲ್ಲಿ ಅದಕ್ಕೆ ಐಸ್ ಕ್ಯೂಬ್ಸ್ ಬೇಕಿದ್ರೂ ಸೇರಿಸಿಕೊಳ್ಳಬಹುದು. ಬೇಕಿದ್ದರೆ ಹರ್ಶೀಸ್ ಸಿರಪ್ ಅನ್ನ ಮೊದಲಿಗೆ ಲೋಟಕ್ಕೆ ಹಾಕಿಕೊಳ್ಳಬಹುದು…
ಬಿಸಿಲಿನ ಹೊತ್ತಲ್ಲಿ ಇದು ರಿಫ್ರೆಶಿಂಗ್ ಜೊತೆಗೆ ಕಾಫಿ ಕುಡಿಯಬೇಕೆನಿಸುವವರಿಗೂ ಇಷ್ಟವಾಗುತ್ತೆ…









