1 ಕಪ್ ಕಡಲೆ ಹಿಟ್ಟು
2 ಟೀಸ್ಪೂನ್ ರವೆ
1 ಟೀಸ್ಪೂನ್ ಎಣ್ಣೆ
1 ಟೀಸ್ಪೂನ್ ನಿಂಬೆ ರಸ
1 ಚಮಚ ಮೊಸರು
1 ಚಮಚ ಸಕ್ಕರೆ
ಉಪ್ಪು ರುಚಿಗೆ ತಕ್ಕಂತೆ
ಒಂದು ಚಿಟಿಕೆ ಅರಿಶಿನ ಪುಡಿ
1 ಚಮಚ ಬೇಕಿಂಗ್ ಪೌಡರ್
1 ಹಸಿರು ಮೆಣಸಿನಕಾಯಿ
1 ಟೀಚಮಚ ತುರಿದ ಶುಂಠಿ
1 ಚಮಚ ತೆಂಗಿನ ಎಣ್ಣೆ
ಸಾಸಿವೆ
4 ರಿಂದ 5 ಉದ್ದವಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿಗಳು
8-10 ಕರಿಬೇವಿನ ಎಲೆಗಳು
ಮಾಡುವ ವಿಧಾನ : ರವೆ ಮತ್ತೆ ಕಡಲೆಹಿಟ್ಟನ್ನ ಒಂದು ಬಟ್ಟಲಿಗೆ ಹಾಕಿಕೊಳ್ಳಿ.. ನಂತರ ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಬೀಟ್ ಮಾಡಿ. ಅದರಲ್ಲಿ ಯಾವುದೇ ಗಂಟುಗಳಲಿಲ್ಲದಂತೆ ನೋಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸಿ ಮತ್ತು ದಪ್ಪ ಬ್ಯಾಟರ್ ಅನ್ನ ತಯಾರಿಸಿ ಬ್ಯಾಟರ್ ಚೆನ್ನಾಗಿ ಸಿದ್ಧವಾದಾಗ, ಅರಿಶಿನ, ಉಪ್ಪು, ಸಕ್ಕರೆ, ಮೆಣಸಿನಕಾಯಿ, ಶುಂಠಿ, ನಿಂಬೆ ರಸ ಮತ್ತು ಅಡುಗೆ ಎಣ್ಣೆಯನ್ನು ಸೇರಿಸಿ. • ಹಿಟ್ಟನ್ನು ತಯಾರಿಸಿದ ನಂತರ, ಅದನ್ನು 15 ನಿಮಿಷಗಳ ಕಾಲ ಮುಚ್ಚಿಡಿ
ಈಗ ಕುಕ್ಕರ್ ತೆಗೆದುಕೊಂಡು ಅದರಲ್ಲಿ ಎರಡರಿಂದ ಮೂರು ಗ್ಲಾಸ್ ನೀರನ್ನು ಸುರಿಯಿರಿ ನಂತರ ಅದರಲ್ಲಿ ಒಂದು ಸ್ಟ್ಯಾಂಡ್ ಅನ್ನು ಇಡಿ.. ಸ್ಟ್ಯಾಂಡ್ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಬಾರದು.. ನೀರನ್ನು ಕುದಿಸಲು ಗ್ಯಾಸ್ ಮೇಲೆ ಇಡಿ.. ನೀರು ಕುದಿಯಲು ಪ್ರಾರಂಭಿಸಿದಾಗ , ಮತ್ತೊಂದೆಡೆ ಹಿಟ್ಟು ತೆಗೆದುಕೊಂಡು ಅದರಲ್ಲಿ ಅಡಿಗೆ ಸೋಡಾವನ್ನು ಮಿಶ್ರಣ ಮಾಡಿ • ಅಡಿಗೆ ಸೋಡಾ ಇಲ್ಲದಿದ್ದರೆ ನೀವು ಅದರಲ್ಲಿ ಈನೋ ಪೌಡರ್ ಅನ್ನು ಕೂಡ ಸೇರಿಸಬಹುದು.
ಈಗ ಎಣ್ಣೆ ಸವರಿದ ಪ್ಲೇಟ್ನಲ್ಲಿ ಈ ಹಿಟ್ಟನ್ನು ಸುರಿಯಿರಿ ಮತ್ತು ಅದನ್ನು ಹರಡಿ.. ಪಾತ್ರೆಯಲ್ಲಿ ಹಿಟ್ಟನ್ನು ಸಂಪೂರ್ಣ ತುಂಬಬಾರದು.. ಬದಲಿಗೆ ಸ್ವಲ್ಪ ಖಾಲಿ ಜಾಗವನ್ನು ಬಿಡಿ, ಏಕೆಂದರೆ ಧೋಕ್ಲಾ ಮಾಡಿದ ನಂತರ, ಅದು ಉಬ್ಬುವುದು.. ಈಗ ಧೋಕ್ಲಾ ಪಾತ್ರೆಯನ್ನು ಕುಕ್ಕರ್ ನಲ್ಲಿಡಿ..
ಮಧ್ಯಮ ಉರಿಯಲ್ಲಿ ಸುಮಾರು ಅರ್ಧ ಗಂಟೆ ಬೇಯಿಸಲು ಬಿಡಿ • ಅರ್ಧ ಗಂಟೆಯ ನಂತರ ಕ್ಲೀನ್ ಚಾಕು ಅಥವಾ ಟೂತ್‌ಪಿಕ್‌ನಿಂದ ಧೋಕ್ಲಾ ಬೆಂದಿದೆಯೇ ಎಂದು ಪರಿಶೀಲಿಸಿ.. ಬ್ಯಾಟರ್ ಚಾಕುವಿಗೆ ಅಂಟಿಕೊಳ್ಳದಿದ್ದರೆ ಬೆಂದಿದೆ ಎಂದರ್ಥ..
ಈಗ ಧೋಕ್ಲಾ ತಣ್ಣಗಾಗುವರೆಗೂ ಕಾಯಿರಿ.. ಈ ಮಧ್ಯೆ ಒಗ್ಗರಣೆ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ.. ಕಾಯಿಸಿದ ಎಣ್ಣೆಗೆ ಸಾಸಿವೆ, ಕರಿಬೇವು, ಹಸಿರು ಮೆಣಸಿನಕಾಯಿ, ಸಕ್ಕರೆ, ಉಪ್ಪು, ನಿಂಬೆ ರಸ ಮತ್ತು ಸ್ವಲ್ಪ ನೀರು ಸೇರಿಸಿ ಕುದಿಸಿ.. ಡೋಕ್ಲಾ ತಣ್ಣಗಾದ ನಂತರ ನಿಮಗಿಷ್ಟದ ಶೇಪ್ದ ಗಳಲ್ಲಿ ಅವುಗಳನ್ನ ಕಟ್ ಮಾಡಿಕೊಳ್ಳಿ.. ಈಗ ತಣ್ಣನೆಯ ಧೋಕ್ಲಾ ಮೇಲೆ ತಯಾರಿಸಿದ ಒಗ್ಗರಣೆ ಮಿಶ್ರಣವನ್ನ ಹರಡಿ.. ರುಚಿಕರ ಗುಜರಾತಿ ಸ್ಟೈಲ್ ಡೋಕ್ಲಾ ಸವಿಯಲು ಸಿದ್ಧ…








