ಮಸಾಲಾ ಮೊಸರನ್ನ…!!!
ಅಕ್ಕಿ 1 ಕಪ್
ಮೊಸರು 2 ಕಪ್
ಉದ್ದಿನಬೇಳೆ 1ಚಮಚ
ಕಡ್ಲೆಬೇಳೆ 1ಚಮಚ
ಸಾಸಿವೆ 1/2 ಚಮಚ
ಸ್ವಲ್ಪ ಇಂಗು
ದಾಳಿಂಬೆ ಕಾಳು - 1 ಕಪ್
ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ 2
ಶುಂಠಿ 1/2 ಇಂಚು
ಚಿಕ್ಕದಾಗಿ ಕತ್ತರಿಸಿದ ಕರಿಬೇವು ಸ್ವಲ್ಪ
ಒಣಮೆಣಸು 2
ಎಣ್ಣೆ 2-3 ಚಮಚ
ಮೊದಲಿಗೆ ಒಂದು ಕಪ್ ಅಕ್ಕಿಯಿಂದ ಮೆತ್ತಗೆ ಅನ್ನ ಮಾಡಿಟ್ಟುಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ ಒಗ್ಗರಣೆ ಕೊಡಿ.
ಸಾಸಿವೆ ಸಿಡಿದ ಮೇಲೆ ಗೋಡಂಬಿ, ಒಣಮೆಣಸಿನಕಾಯಿ, ಕರಿಬೇವು, ಹಸಿ ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಇಂಗು ಸೇರಿಸಿ. ಬಳಿಕ ಗ್ಯಾಸ್ ಆಫ್ ಮಾಡಿ ಬೇಯಿಸಿಟ್ಟ ಅನ್ನ ಹಾಕಿ ಕಲಸಿ. ದಾಳಿಂಬೆ ಕಾಳುಗಳನ್ನು ಸೇರಿಸಿ. ತಣ್ಣಗಾದ ಮೇಲೆ ಮೊಸರು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ರುಚಿಯಾದ ಆರೋಗ್ಯಕರವಾದ ಮೊಸರನ್ನ ಸವಿಯಲು ಸಿದ್ಧ.
ಸೌತೇಕಾಯಿ ಜ್ಯೂಸ್…
ಸೌತೆಕಾಯಿ – 1
ಪುದಿನಾ ಎಲೆಗಳು – ಸ್ವಲ್ಪ
ನೀರು – 1 ಕಪ್
ನಿಂಬೆ – 1
ಉಪ್ಪು ಚಿಟಿಕೆ
ಸೌತೆಕಾಯಿಯ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ ಇದನ್ನು ಮಿಕ್ಸಿ ಜಾರಿನಲ್ಲಿ ಹಾಕಿ. ಇದಕ್ಕೆ ಸಣ್ಣದಾಗಿ ಕತ್ತರಿಸಿದ ಪುದೀನ ಎಲೆಗಳ ಚೂರು, ಉಪ್ಪು, ನಿಂಬೆ ರಸ ಮತ್ತು ನೀರು ಸೇರಿಸಿ 5ನಿಮಿಷ ಚೆನ್ನಾಗಿ ಗ್ರೈಂಡ್ ಮಾಡಿ.
ಬಳಿಕ ಈ ಮಿಶ್ರಣವನ್ನು ಸೋಸಿ, ಬೇಕಿದ್ದರೆ ಐಸ್ ಕ್ಯೂಬ್ ಸೇರಿಸಿ ಕುಡಿಯಿರಿ. ಸೌತೆಕಾಯಿ ಜ್ಯೂಸ್, ಬಿಸಿಲಿನ ದಾಹ ತಣಿಸುವ ಜೊತೆಗೆ ದೇಹಕ್ಕೆ ಕೂಡ ತುಂಬಾ ತಂಪು ಮತ್ತು ಆರೋಗ್ಯಕರ…
ಸಾಗು/ಸಬ್ಬಕ್ಕಿ 1ಕಪ್
ನೀರು 1ಕಪ್
ಸಕ್ಕರೆ 1ಕಪ್
ಹಾಲು 1/2 ಲೀಟರ್
ತುಪ್ಪ ಸ್ವಲ್ಪ
ಗೋಡಂಬಿ, ಒಣ ದ್ರಾಕ್ಷಿ ಸ್ವಲ್ಪ
ಏಲಕ್ಕಿ ಹುಡಿ 1/4 ಚಮಚ
ಮೊದಲಿಗೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ 1ಕಪ್ ಸಬ್ಬಕ್ಕಿಯನ್ನು ಹುರಿದು ಇಟ್ಟು ಕೊಳ್ಳಿ.
ಬಳಿಕ ಒಂದು ಪಾತ್ರೆಯಲ್ಲಿ ನೀರು ಕುದಿಸಿ. ನಂತರ ಸಬ್ಬಕ್ಕಿಯನ್ನು ಸೇರಿಸಿ ಕುದಿಯಲು ಬಿಡಿ. ಸಬ್ಬಕ್ಕಿ ಬೆಂದ ಬಳಿಕ ಅದಕ್ಕೆ ಒಂದು ಕಪ್ ಸಕ್ಕರೆ ಸೇರಿಸಿ. ಸಕ್ಕರೆ ಕರಗಿದ ಬಳಿಕ ಸ್ಟವ್ ಆಫ್ ಮಾಡಿ.
ಈಗ ಒಂದು ಚಿಕ್ಕ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಗೋಡಂಬಿ, ಒಣ ದ್ರಾಕ್ಷಿಗಳನ್ನು ಹುರಿಯಿರಿ. ನಂತರ ಇದನ್ನು ಸಬ್ಬಕ್ಕಿ ಖೀರಿಗೆ ಸೇರಿಸಿ, ಕಲಸಿ. ಸಬ್ಬಕ್ಕಿ ಖೀರು ತಣ್ಣಗಾದ ಮೇಲೆ ಬೇಕಾದಷ್ಟು ಹಾಲು ಸೇರಿಸಿ ಕಲಸಿ. ಇದನ್ನು ರೆಫ್ರಿಜರೇಟರ್ ನಲ್ಲಿಟ್ಟು ತಣ್ಣಗಾದ ಮೇಲೆ ಸರ್ವ್ ಮಾಡಿ.
ಪನ್ನೀರ್ ಟಿಕ್ಕಾ
ಪನೀರ್ ತುಂಡು – 1 ½ ಕಪ್
ತ್ರಿಕೋನಾಕಾರದಲ್ಲಿ ಕತ್ತರಿಸಿದ ಕ್ಯಾಪ್ಸಿಕಂ – 1 ಕಪ್
ವೃತ್ತಾಕಾರವಾಗಿ ಕತ್ತರಿಸಿದ ಈರುಳ್ಳಿ – 1ಕಪ್
ಮೊಸರು – ¾ ಕಪ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – ½ ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – ½ ಟೀಸ್ಪೂನ್
ಗರಂ ಮಸಾಲ – 1 ಟೀಸ್ಪೂನ್
ಬ್ಲಾಕ್ ಸಾಲ್ಟ್ – ½ ಟೀಸ್ಪೂನ್
ಕಸೂರಿ ಮೆಥಿ – 1 ಟೀಸ್ಪೂನ್
ಪಿಂಚ್ ಇಂಗ್
ತಂದೂರಿ ಮಸಾಲ – 1 ಟೀಸ್ಪೂನ್ (optional)
ತುರಿದ ಶುಂಠಿ – 1-2 ಟೀಸ್ಪೂನ್
ನಿಂಬೆ ರಸ – 1-2 ಟೀಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ
ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ. ಮೊಸರು ಸೇರಿಸಿ. ಅದಕ್ಕೆ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲ, ತಂದೂರಿ ಮಸಾಲ, ಜೀರಿಗೆ, ಕೊತ್ತಂಬರಿ ಪುಡಿ, ಬ್ಲಾಕ್ ಸಾಲ್ಟ್, ಉಪ್ಪು, ಕಸೂರಿ ಮೆಥಿ, ಪಿಂಚ್ ಹಿಂಗ್ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈ ಎಲ್ಲಾ ಪದಾರ್ಥಗಳನ್ನು ಸರಿಯಾಗಿ ಮಿಶ್ರಣ ಮಾಡಿ.
ನಂತರ ತುರಿದ ಶುಂಠಿ ಮತ್ತು ನಿಂಬೆ ರಸವನ್ನು ಸೇರಿಸಿ. ಪುನಃ ಕಲಸಿ ನಯವಾದ ಪೇಸ್ಟ್ ಮಾಡಿ.
ಮೊಸರು ಮಿಶ್ರಣಕ್ಕೆ ಪನೀರ್ ತುಂಡು, ಕ್ಯಾಪ್ಸಿಕಂ
ಮತ್ತು ಈರುಳ್ಳಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.10 ನಿಮಿಷಗಳ ಕಾಲ ಹಾಗೆಯೇ ಇರಿಸಿ.
ಮ್ಯಾರಿನೇಟ್ ಮಾಡಿದ ಪನೀರ್, ಕ್ಯಾಪ್ಸಿಕಂ ಮತ್ತು ಈರುಳ್ಳಿ ತುಂಡುಗಳನ್ನು ಒಂದು ತಟ್ಟೆಯಲ್ಲಿ ಇರಿಸಿ, ಅದನ್ನು 20-30 ನಿಮಿಷಗಳ ಕಾಲ ಫ್ರಿಜ್ನಲ್ಲಿಡಿ.
ನಂತರ ಪನೀರ್, ಕ್ಯಾಪ್ಸಿಕಂ ಮತ್ತು ಈರುಳ್ಳಿಯನ್ನು ಮರದ ಕಡ್ಡಿಯನ್ನು ಓರೆಯಾಗಿ ಚುಚ್ಚಿ.
ಈಗ ಹೆಚ್ಚಿನ ತಾಪಮಾನದಲ್ಲಿ ತಂದೂರಿನಲ್ಲಿ ಅಥವಾ ಒವನ್ ನಲ್ಲಿ ಕಾಯಿಸಿ. ಬೇಕಿಂಗ್ ಶೀಟ್ ತೆಗೆದುಕೊಂಡು ಅದನ್ನು ಅಲ್ಯೂಮಿನಿಯಂ ಫಾಯಿಲ್ ಪೇಪರ್ ಬಳಸಿ ಮುಚ್ಚಿ, ನಂತರ ಅದರ ಮೇಲೆ ತಯಾರಾದ ತುಂಡುಗಳನ್ನು ಜೋಡಿಸಿ, ಎಣ್ಣೆಯನ್ನು ಸಿಂಪಡಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ.
ನೀವು ಒಲೆಯನ್ನು ಬಳಸುವುದಾದರೆ ಸ್ವಲ್ಪ ಎಣ್ಣೆಯನ್ನು ಬಳಸಿ ಮ್ಯಾರಿನೇಟ್ ಮಾಡಿದ ತುಂಡುಗಳನ್ನು ಗ್ರಿಡ್ಲ್ ಅಥವಾ ತವಾ ಮೇಲೆ ಹುರಿಯಬಹುದು.
ಎಲ್ಲಾ ಬದಿಗಳನ್ನು ಸರಿಯಾಗಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಬೇಕು.
ಈಗ ಪನೀರ್ ಟಿಕ್ಕ ಸಿದ್ಧವಾಗಿದೆ. ನೀವು ಅದರ ಮೇಲೆ ಸ್ವಲ್ಪ ಚಾಟ್ ಮಸಾಲಾ, ನಿಂಬೆ ರಸವನ್ನು ಸಿಂಪಡಿಸಬಹುದು ಮತ್ತು ರುಚಿಯಾದ ಪನೀರ್ ಟಿಕ್ಕಾವನ್ನು ಪುದೀನ ಚಟ್ನಿಯೊಂದಿಗೆ ಸವಿಯಬಹುದು.
ದೊಡ್ಡ ಪತ್ರೆಯ ಬಜ್ಜಿ
ಬೇಕಾಗುವ ಸಾಮಗ್ರಿಗಳು
ದೊಡ್ಡಪತ್ರೆ ಎಲೆ – 15
ಕಡಲೆಹಿಟ್ಟು – 1 ಕಪ್
ಅಕ್ಕಿ ಹಿಟ್ಟು – 2 ಚಮಚ
ಮೆಣಸಿನ ಹುಡಿ 1 1/2 ಚಮಚ
ಓಮ 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಚಿಟಿಕೆ ಇಂಗು
ಜೀರಿಗೆ ಪುಡಿ 1/2 ಚಮಚ
ದೊಡ್ಡಪತ್ರೆ ಎಲೆಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಬಳಿಕ ಎಲೆಗಳಲ್ಲಿನ ನೀರನ್ನು ಒರೆಸಿ.
ನಂತರ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಹುಡಿ, ಓಮ, ಇಂಗು, ಜೀರಿಗೆ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಇದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ ಕಲಸಿ.
ನಂತರ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ದೊಡ್ಡಪತ್ರೆ ಎಲೆಗಳನ್ನು ಸಿದ್ಧಪಡಿಸಿಕೊಂಡ ಮಿಶ್ರಣದಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಹುರಿದರೆ ಬಿಸಿಯಾದ ದೊಡ್ಡಪತ್ರೆ ಬಜ್ಜಿ ಸವಿಯಲು ರೆಡಿ. ಇದನ್ನು ಚಟ್ನಿಯ ಜೊತೆ ಸವಿಯಿರಿ.













