ಪನ್ನೀರ್ ಬಿರಿಯಾನಿ
ಬೇಕಾಗುವ ಸಾಮಾಗ್ರಿಗಳು
ಪನ್ನೀರ್ – 1 ಕಪ್
ಭಾಸ್ಮತಿ ಅಕ್ಕಿ 1 ಕಪ್
ಪಲಾವ್ ಎಲೆ 2,
ಚಕ್ಕೆ 1,
ಲವಂಗ 4,
ಏಲಕ್ಕಿ 2,
ಗೋಡಂಬಿ 8-10,
ಪುದೀನಾ ಸೊಪ್ಪು 1 ಕಟ್ಟು
ಕೊತ್ತಂಬರಿಸೊಪ್ಪು – ಸ್ವಲ್ಪ
ಬೆಳ್ಳುಳ್ಳಿ ಎಸಳು – 5-6
ಶುಂಠಿ – ಸಣ್ಣ ತುಂಡು
ಸೋಂಪು – 1 ಚಮಚ
ಗಟ್ಟಿ ಮೊಸರು – 2 ಚಮಚ
ಉದ್ದಕ್ಕೆ ಹೆಚ್ಚಿದ ಈರುಳ್ಳಿ – 1,
ಸಣ್ಣಗೆ ಕತ್ತರಿಸಿದ ಹಸಿಮೆಣಸು – 2
ಹೆಚ್ಚಿದ ಟೊಮೆಟೊ – 1
ಮೆಣಸಿನ ಪುಡಿ 1 ಚಮಚ,
ಬಿರಿಯಾನಿ ಮಸಾಲಾ 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ನಂತರ ಕತ್ತರಿಸಿಕೊಂಡ ಪನ್ನೀರ್ ತುಂಡುಗಳನ್ನು ಸ್ವಲ್ಪ ಕೆಂಪಗೆ ಆಗುವವರೆಗೆ ಹುರಿಯಿರಿ.
ನಂತರ ಮಿಕ್ಸಿ ಜಾರಿಗೆ ಪುದೀನಾ ಸೊಪ್ಪು, ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ ಎಸಳು, ಚಿಕ್ಕ ಶುಂಠಿ, ಸೋಂಪ್ ಹಾಕಿ ನೀರು ಹಾಕದೆ ನುಣ್ಣಗೆ ರುಬ್ಬಿ. ನಂತರ ಅದಕ್ಕೆ 2 ಚಮಚ ಗಟ್ಟಿ ಮೊಸರು ಸೇರಿಸಿ ಮತ್ತೊಮ್ಮೆ ರುಬ್ಬಿ.
ಈಗ ಕುಕ್ಕರಿನಲ್ಲಿ ಎಣ್ಣೆ ಬಿಸಿ ಮಾಡಿ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಗೋಡಂಬಿ ಗಳನ್ನು ಹುರಿಯಿರಿ. ನಂತರ
ಈರುಳ್ಳಿ, ಹಸಿಮೆಣಸು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಹೆಚ್ಚಿಕೊಂಡ ಟೊಮೆಟೊ ಸೇರಿಸಿ ಹುರಿಯಿರಿ.
ಈಗ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ, ಉಪ್ಪು, ಮೆಣಸಿನ ಪುಡಿ, ಬಿರಿಯಾನಿ ಮಸಾಲಾ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಹುರಿದಿಟ್ಟುಕೊಂಡ ಪನ್ನೀರ್ ಸೇರಿಸಿ ಚೆನ್ನಾಗಿ ಬೆರೆಸಿ.
ಈಗ ಈ ಮಿಶ್ರಣಕ್ಕೆ ಅರ್ಧ ಗಂಟೆ ನೆನೆಸಿಟ್ಟುಕೊಂಡ ಅಕ್ಕಿಯನ್ನು ಸೇರಿಸಿ. (1 ಅಳತೆಗೆ ಒಂದುವರೆ ಅಳತೆ ನೀರು) ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 1 ವಿಷಲ್ ಬರುವವರೆಗೆ ಬೇಯಿಸಿ.
ರುಚಿಯಾದ ಪನ್ನೀರ್ ಬಿರಿಯಾನಿ ರೆಡಿಯಾಗಿದೆ. ಇದನ್ನು ರಾಯತ ಜೊತೆ ಸವಿಯಿರಿ.
ವೆಜ್ ಪನೀರ್ ಫ್ರೈಡ್ ರೈಸ್
ಬೇಕಾಗುವ ಸಾಮಾಗ್ರಿಗಳು
ಅಕ್ಕಿ – 1 ಕಪ್
ಪನೀರ್ – ಸ್ವಲ್ಪ
ಬೀನ್ಸ್ – 10
ಕ್ಯಾರೆಟ್ – 1
ಆಲೂಗಡ್ಡೆ -2
ಮ್ಯಾಗಿ ಮಸಾಲಾ – ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ – 2 ಚಮಚ
ಮಾಡುವ ವಿಧಾನ

ಮೊದಲಿಗೆ ಅಕ್ಕಿಯನ್ನು ತೊಳೆದು ಆನ್ನ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ/ತುಪ್ಪ ಹಾಕಿ ಬಿಸಿ ಮಾಡಿ.ನಂತರ ಚಿಕ್ಕದಾಗಿ ಕತ್ತರಿಸಿದ ಬೀನ್ಸ್, ಕ್ಯಾರೆಟ್, ಆಲೂಗಡ್ಡೆ ಸೇರಿಸಿ ಹುರಿಯಿರಿ. ಬಳಿಕ ಪನೀರ್ ಹಾಕಿ ಚೆನ್ನಾಗಿ ಬಾಡಿಸಿ. ನಂತರ ಮ್ಯಾಗಿ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಈಗ ಇದಕ್ಕೆ ಮಾಡಿಟ್ಟುಕೊಂಡ ಅನ್ನವನ್ನು ಹಾಕಿ ಕಲಸಿದರೆ ವೆಜ್ ಪನೀರ್ ಫ್ರೈಡ್ ರೈಸ್ ಸವಿಯಲು ಸಿದ್ಧ.
ವೆಜಿಟೇಬಲ್ ಫ್ರೈಡ್ ರೈಸ್
ಬೇಕಾಗುವ ಪದಾರ್ಥಗಳು:
ಅಕ್ಕಿ – 2 ಕಪ್
ತರಕಾರಿಗಳು (ಬೀನ್ಸ್ ಕ್ಯಾರೆಟ್ ಈರುಳ್ಳಿ ಕ್ಯಾಪ್ಸಿಕಂ ಎಲೆಕೋಸು)
ಚಿಕ್ಕದಾಗಿ ಹೆಚ್ಚಿದ ಹಸಿಮೆಣಸು 6
ಈರುಳ್ಳಿ 2
ಬೆಳ್ಳುಳ್ಳಿ 4 ಎಸಳು
ಶುಂಠಿ 1 ಇಂಚು
ಮೆಣಸಿನ ಪುಡಿ – 11/2 ಟೀಸ್ಪೂನ್
ಸೋಯಾ ಸಾಸ್ 2/3 ಟೀಸ್ಪೂನ್
ವಿನೆಗರ್ 2 ಟೀಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ
ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ನಂತರ ಎಲ್ಲಾ ತರಕಾರಿಗಳನ್ನು ಸಣ್ಣದಾಗಿ ಕತ್ತರಿಸಿ.
ಕಡಾಯಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಜಜ್ಜಿದ ಬೆಳ್ಳುಳ್ಳಿ ಶುಂಠಿ ಮತ್ತು ಹಸಿಮೆಣಸು ಸೇರಿಸಿ ಸುವಾಸನೆ ಬರುವವರೆಗೆ ಹುರಿಯಿರಿ. ನಂತರ ಕತ್ತರಿಸಿದ ತರಕಾರಿಗಳನ್ನು ಸೇರಿಸಿ ಅದನ್ನು ಫ್ರೈ ಮಾಡಿ.

ನಂತರ ಸೋಯಾ ಸಾಸ್, ವಿನೆಗರ್, ಉಪ್ಪು, ಮೆಣಸಿನ ಹುಡಿ ಸೇರಿಸಿ ಹುರಿಯಿರಿ. ತರಕಾರಿ ಬೆಂದ ಬಳಿಕ ಮಾಡಿಟ್ಟುಕೊಂಡ ಅನ್ನ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ಈಗ ವೆಜಿಟೇಬಲ್ ಫ್ರೈಡ್ ರೈಸ್ ಸಿದ್ಧವಾಗಿದೆ. ಇದನ್ನು ಸಾಸ್ನೊಂದಿಗೆ ಸವಿಯಿರಿ.







