3 ರುಚಿಕರ ಅಡುಗೆಗಳ ರೆಸಿಪಿಗಳು
1. ಬೀನ್ಸ್ ಮಜ್ಜಿಗೆ ಹುಳಿ
ಬೇಕಾಗುವ ಸಾಮಗ್ರಿಗಳು
ಅಕ್ಕಿ – 1 ಚಮಚ
ಕಡ್ಲೆಬೇಳೆ - 1 ಚಮಚ
ಜೀರಿಗೆ – 1 ಚಮಚ
ಬೀನ್ಸ್ – 1/4 ಕೆ.ಜಿ
ತೆಂಗಿನಕಾಯಿ ತುರಿ – 1/4 ಕಪ್
ಹಸಿಮೆಣಸಿನಕಾಯಿ – 2
ಗಟ್ಟಿ ಮೊಸರು – 1/2 ಕಪ್
ಒಗ್ಗರಣೆಗೆ
ತುಪ್ಪ – 1 ಚಮಚ
ಸಾಸಿವೆ – 1/4 ಚಮಚ
ಜೀರಿಗೆ – 1/4 ಚಮಚ
ಕರಿಬೇವು – ಸ್ವಲ್ಪ
ಇಂಗು – ಚಿಟಿಕೆಯಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲು ಅಕ್ಕಿ ಮತ್ತು ಕಡ್ಲೆಬೇಳೆ ಗಳನ್ನು ಚೆನ್ನಾಗಿ ತೊಳೆದು ಮುಳುಗುವಷ್ಟು ನೀರು ಹಾಕಿ 1- 2ಗಂಟೆಗಳ ಕಾಲ ನೆನೆಯಲು ಬಿಡಿ.
ನಂತರ ಬೀನ್ಸ್ ತೊಟ್ಟು ನಾರು ತೆಗೆದು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ಬೀನ್ಸ್ ಅನ್ನು ಬೇಯಿಸಿ ಇಟ್ಟುಕೊಳ್ಳಿ.
ತೆಂಗಿನಕಾಯಿ ತುರಿ, ಹಸಿಮೆಣಸಿನಕಾಯಿ, ನೆನೆಸಿಟ್ಟ ಅಕ್ಕಿ, ಕಡ್ಲೆಬೇಳೆ, ಜೀರಿಗೆ ಮತ್ತು ಅಗತ್ಯವಿರುವಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಈ ರುಬ್ಬಿದ ಮಿಶ್ರಣವನ್ನು ಬೇಯಿಸಿಟ್ಟುಕೊಂಡ ಬೀನ್ಸ್ ಪಾತ್ರೆಗೆ ಸೇರಿಸಿ ಚೆನ್ನಾಗಿ ಕುದಿಸಿ. ಈಗ ಗ್ಯಾಸ್ ನಿಂದ ಕೆಳಗಿಳಿಸಿ ಮೊಸರು ಬೆರೆಸಿ. ನಂತರ ಒಗ್ಗರಣೆಗೆ ತುಪ್ಪ ಬಿಸಿ ಮಾಡಿ. ಬಿಸಿಯಾದ ಬಳಿಕ ಸಾಸಿವೆ ಸೇರಿಸಿ. ಅದು ಸಿಡಿದ ಬಳಿಕ ಜೀರಿಗೆ, ಕರಿಬೇವು, ಇಂಗು ಸೇರಿಸಿ ಬೀನ್ಸ್ ಮಜ್ಜಿಗೆ ಹುಳಿ ಜೊತೆಗೆ ಮಿಶ್ರ ಮಾಡಿ. ಈಗ ಬೀನ್ಸ್ ಮಜ್ಜಿಗೆ ಹುಳಿ ಸವಿಯಲು ಸಿದ್ಧವಾಗಿದೆ.
ನವರಾತ್ರಿಗೆ ಪ್ರತಿದಿನ ಮಾಡಿ ವಿವಿಧ ರೀತಿಯ ಸಿಹಿ ತಿಂಡಿಗಳು..! ಇಲ್ಲಿವೆ 15 ರೆಸಿಪಿಗಳು
ಬೇಕಾಗುವ ಸಾಮಗ್ರಿಗಳು
ತೊಂಡೆಕಾಯಿ – 20
ಬಾಸುಮತಿ ಅಕ್ಕಿ -3 ಕಪ್
ಆಲೂಗಡ್ಡೆ-1
ಈರುಳ್ಳಿ -2
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ – 6 ಚಮಚ
ಲಿಂಬೆ ಹಣ್ಣಿನ ರಸ -1 ಚಮಚ
ಅರಿಶಿನ ಚಿಟಿಕೆಯಷ್ಟು
ಮಸಾಲಾ ಪುಡಿ ಸಾಮಗ್ರಿಗಳು
ಕಡಲೆಬೇಳೆ – 1 ಚಮಚ
ಉದ್ದಿನಬೇಳೆ -1 ಚಮಚ
ಕಾಳುಮೆಣಸು – 1/2 ಚಮಚ
ಒಣಗಿರುವ ಕೊಬ್ಬರಿ – 4ಚಮಚ
ಎಳ್ಳು -1 ಚಮಚ
ಕೆಂಪು ಒಣ ಮೆಣಸು
ಮಾಡುವ ವಿಧಾನ
ಮೊದಲು ತೊಂಡೆಕಾಯಿಗಳನ್ನು ಉದ್ದಗೆ ಕತ್ತರಿಸಿಕೊಂಡು ಎಣ್ಣೆ ಮತ್ತು ಅರಿಶಿನ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಕಡಲೆಬೇಳೆ, ಉದ್ದಿನಬೇಳೆ, ಕಾಳುಮೆಣಸು, ಒಣ ಕೊಬ್ಬರಿ, ಎಳ್ಳು, ಕೆಂಪು ಮೆಣಸು, ಕೊತ್ತಂಬರಿ ಬೀಜಗಳನ್ನು 1 ಚಮಚ ಎಣ್ಣೆಯಲ್ಲಿ ಉರಿದು ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿ ಹುಡಿ ಮಾಡಿಟ್ಟುಕೊಳ್ಳಿ.
ಮಧ್ಯಮ ಉರಿಯಲ್ಲಿ ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಮಸಾಲೆ ಎಲೆಯನ್ನು ಹಾಕಿ ಬಾಡಿಸಿಕೊಳ್ಳಿ. ನಂತರ ಹೆಚ್ಚಿರುವ ಈರುಳ್ಳಿಯನ್ನು ಹಾಕಿ ಬಾಡಿಸಿಕೊಂಡು ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಬೇಯಿಸಿ. ನಂತರ ಈ ಮೊದಲೇ ಹುರಿದಿಟ್ಟುಕೊಂಡಿರುವ ತೊಂಡೆಕಾಯಿಯನ್ನು ಸೇರಿಸಿ. ಹುಡಿ ಮಾಡಿರುವ ಮಸಾಲಾ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅಕ್ಕಿ ಮತ್ತು ನೀರನ್ನು ಹಾಕಿ ಲಿಂಬೆರಸವನ್ನು ಸೇರಿಸಿ. ಕುಕ್ಕರ್ ನಲ್ಲಿ 3 ವಿಸಲ್ ಬರುವವರೆಗೆ ಬೇಯಿಸಿ. ಈಗ ರುಚಿಯಾದ ತೊಂಡೆಕಾಯಿ ಪಲಾವ್ ಸವಿಯಲು ಸಿದ್ಧವಾಗಿದೆ.
7 ವಿವಿಧ ಆರೋಗ್ಯಗರ ಜ್ಯೂಸ್ ಗಳ ರೆಸಿಪಿಗಳು
3. ರುಚಿಯಾದ ಚಿರೋಟಿ
ಬೇಕಾಗುವ ಸಾಮಾಗ್ರಿಗಳು
ಮೈದಾ -1 ಕಪ್
ಚಿರೋಟಿ ರವೆ – 2 ಚಮಚ
ಬಿಸಿ ಎಣ್ಣೆ 1ಚಮಚ
ಚಿಟಿಕೆಯಷ್ಟು ಉಪ್ಪು
ಅಕ್ಕಿ ಹಿಟ್ಟು – 2 ಚಮಚ
ತುಪ್ಪ – 4 ಚಮಚ
ಸಕ್ಕರೆ ಪುಡಿ ಕೊನೆಯಲ್ಲಿ ಉದುರಿಸಲು
ಏಲಕ್ಕಿ ಪುಡಿ
ಕರಿಯಲು ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಅಕ್ಕಿ ಹಿಟ್ಟು ಮತ್ತು ತುಪ್ಪವನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಬೆರೆಸಿ ಹಾಗೆ ಇಡಿ.
ಈಗ ಮತ್ತೊಂದು ಪಾತ್ರೆಯಲ್ಲಿ ಮೈದಾ, ಚಿರೋಟಿ ರವೆ, ಉಪ್ಪು ಸೇರಿಸಿ ಕಲಸಿ. ಅದಕ್ಕೆ ಬಿಸಿ ಮಾಡಿದ ಎಣ್ಣೆ ಸೇರಿಸಿ. ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಚಪಾತಿಯಂತೆ ಲಟ್ಟಿಸಿಕೊಳ್ಳಿ.
ನಂತರ ಲಟ್ಟಿಸಿಕೊಂಡಿರುವ ಚಪಾತಿಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಮೇಲೆ ಅಕ್ಕಿಹಿಟ್ಟಿನೊಂದಿಗೆ ಬೆರೆಸಿರುವ ತುಪ್ಪವನ್ನು ಸವರಿ ಅದರ ಮೇಲೆ ಮತ್ತೊಂದು ಚಪಾತಿ ಇಡಿ. ಅದರ ಮೇಲೆ ಅಕ್ಕಿಹಿಟ್ಟಿನೊಂದಿಗೆ ಬೆರೆಸಿರುವ ತುಪ್ಪವನ್ನು ಸವರಿ ಅದರ ಮೇಲೆ ಮತ್ತೊಂದು ಚಪಾತಿಯನ್ನಿಡಿ. ಹೀಗೆ 5 ಚಪಾತಿ ಗಳನ್ನು ಒಂದರ ಮೇಲೊಂದು ಇಟ್ಟು ನಂತರ ರೋಲ್ ಮಾಡಿ.
ನಂತರ ಚಿಕ್ಕ ಪೂರಿ ಅಳತೆಯಲ್ಲಿ ಲಟ್ಟಿಸಿ ಕಾದ ಎಣ್ಣೆಯಲ್ಲಿ ಬಿಡಿ. ಮಧ್ಯಮ ಉರಿಯಲ್ಲಿ ಕರಿದು ತೆಗೆದು ಬಿಸಿ ಇರುವಾಗಲೇ ಸಕ್ಕರೆ ಏಲಕ್ಕಿ ಪುಡಿ ಉದುರಿಸಿ. ಈಗ ರುಚಿಯಾದ ಚಿರೋಟಿ ಸವಿಯಲು ಸಿದ್ಧವಾಗಿದೆ. ಇದನ್ನು ಹಾಲಿನ ಜೊತೆಗೆ ಅಥವಾ ಬಾದಾಮಿ ಹಾಲಿನ ಜೊತೆ ಸವಿಯಬಹುದು.
ವಿವಿಧ ಬಗೆಯ ಜ್ಯೂಸ್ / ಮಿಲ್ಕ್ ಶೇಕ್ ಗಳ ರೆಸಿಪಿಗಳು
4 ವಿವಿಧ ಬಗೆಯ ರುಚಿಕರ ಅಡುಗೆ ರೆಸಿಪಿಗಳು
ಬಗೆ ಬಗೆಯ ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ