Cooking : ವಿವಿಧ 3 ಬಗೆಯ ಅಡುಗೆಗಳ ರೆಸಿಪಿಗಳು ನಿಮಗಾಗಿ..!!
ಆಲೂಗಡ್ಡೆ ಸೂಪ್
ಆಲೂಗಡ್ಡೆಗಳನ್ನ ಚನ್ನಾಗಿ ತೊಳೆದು ಸ್ವಚ್ಛಗೊಳಿಸಿ.. ಸಿಪ್ಪೆ ಬಿಡಿಸಿ ಅವುಗಳನ್ನು ಮೀಡಿಯಮ್ ಗಾತ್ರದಲ್ಲಿ ತುಂಡುಗಳಾಗಿ ಹೆಚ್ಚಿಕೊಳ್ಳಿ.. ಹೆಚ್ಚಿಟ್ಟುಕೊಂಡ ಆಲೂಗಡ್ಡೆಯನ್ನ ಬಾಣಲೆಗೆ ಅಥವ ಪ್ಯಾನ್ ಗೆ ಹಾಕಿ.. ಆಲೂಗಡ್ಡೆಯನ್ನ ಸುಮಾರು 20 ನಿಮಿಷಗಳು ಮಧ್ಯಮ ಉರಿಯಲ್ಲಿ ಬೇಯಿಸಿ. ನಂತರ ಗ್ಯಾಸ್ ಆಫ್ ಮಾಡಿದೆ.. ಈಗ ಆಲೂಗಡ್ಡೆಗೆ ಹಾಲು ಮತ್ತು ಬೆಣ್ಣೆಯನ್ನು ಸೇರಿಸಿ ಜೊತೆಗೆ ರುಚಿಗೆ ತಕ್ಕಷ್ಟು ಚಿಲ್ಲಿ ಪೌಡರ್ ಸೇರಿಸಿ ಮಧ್ಯಮ ಉರಿಯಲ್ಲಿ ಕಾಯಿಸಿ…
ಹೆಸರು ಬೇಳೆ ಪಾಯಸ
ಮೊದಲು ಹೆಸರುಬೇಳೆಯನ್ನು ಸ್ವಲ್ಪ ಕೆಂಪು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ನಂತರ ಹೆಸರುಬೇಳೆಯನ್ನು ಒಂದೆರಡು ಬಾರಿ ತೊಳೆದು 4 ಕಪ್ ನೀರು ಸೇರಿಸಿ ಕುಕ್ಕರ್ ನಲ್ಲಿ ಮೂರು ನಾಲ್ಕು ವಿಸಿಲ್ ಕೂಗಿಸಿ ಬೇಯಿಸಿಕೊಳ್ಳಿ. ನಂತರ ಬೆಲ್ಲವನ್ನು ಅರ್ಧ ಕಪ್ ನೀರು ಹಾಕಿ ಕರಗಿಸಿ ಇಟ್ಟುಕೊಳ್ಳಿ.
ಈಗ ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ, ದ್ರಾಕ್ಷಿ ಗೋಡಂಬಿ ಸೇರಿಸಿ ಹುರಿದಿಟ್ಟುಕೊಳ್ಳಿ.