Cooking : ಇನ್ಸ್ ಟೆಂಟ್ ಅವಲಕ್ಕಿ ಲಡ್ಡು , ಮಾಡಲು ಸುಲಭ , ಬಹಳ ಟೇಸ್ಟಿ…!!
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು 1 ಕಪ್
ತುಪ್ಪ 1ಕಪ್
ಅವಲಕ್ಕಿ 1 ಕಪ್
ಗೋಡಂಬಿ, ಬಾದಾಮಿ ಸ್ವಲ್ಪ
ಏಲಕ್ಕಿ ಪುಡಿ 1 ಚಮಚ
ಸಕ್ಕರೆ ಪುಡಿ 1 1/2 ಕಪ್
ಅವಲಕ್ಕಿಯನ್ನು ಸಣ್ಣ ಉರಿಯಲ್ಲಿ 5 ನಿಮಿಷ ಹುರಿದು ಪುಡಿ ಮಾಡಿ.
ಒಂದು ಬಾಣಲೆಗೆ 1/2 ಕಪ್ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಬಾದಾಮಿ ಗೋಡಂಬಿ ಹಾಕಿ ಹುರಿದು ತೆಗೆದಿಟ್ಟುಕೊಳ್ಳಬೇಕು.
ನಂತರ ಅದೇ ಬಾಣಲೆಗೆ ಉಳಿದ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಗೋಧಿ ಹಿಟ್ಟು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಈಗ ಮೊದಲೇ ಹುರಿದು ಪುಡಿ ಮಾಡಿಕೊಂಡ ಅವಲಕ್ಕಿ ಸೇರಿಸಿ.
ಅದಕ್ಕೆ ಸಕ್ಕರೆ ಪುಡಿ , ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿ ನಂತರ ಸ್ಟವ್ ಆಫ್ ಮಾಡಿ. ಸ್ವಲ್ಪ ತಣ್ಣಗಾದ ನಂತರ ನಿಮಗೆ ಬೇಕಾದ ಅಳತೆಗೆ ಲಡ್ಡುಗಳನ್ನು ತಯಾರಿಸಿ
cooking – food recipies – saakshatv









