ರುಚಿ ಜೊತೆ ಆರೋಗ್ಯಕ್ಕಾಗಿ 5 ಜ್ಯೂಸ್ ಗಳ ರೆಸಿಪಿಗಳು ನಿಮಗಾಗಿ..!
1. ನಿಂಬು ಮಸಾಲಾ ಸೋಡಾ
ಬೇಕಾಗುವ ಪದಾರ್ಥಗಳು
3-4 ಕಪ್ ಸೋಡಾ
¼ ಕಪ್ ಸಕ್ಕರೆ
¼ ಕಪ್ ತಾಜಾ ಪುದೀನ ಎಲೆಗಳು
2 ನಿಂಬೆ ರಸ
1 ಟೀಸ್ಪೂನ್ ಜೀರಿಗೆ ಪುಡಿ
¼ ಟೀಸ್ಪೂನ್ ಕರಿಮೆಣಸು ಪುಡಿ
¼ ಚಮಚ ಚಾಟ್ ಮಸಾಲ
½ ಟೀಸ್ಪೂನ್ ಬ್ಲಾಕ್ ಸಾಲ್ಟ್
1 ಟೀಸ್ಪೂನ್ ತುರಿದ ಶುಂಠಿ
2-3 ಪಿಂಚ್ ಉಪ್ಪು
ಐಸ್ ತುಂಡುಗಳು
ಅಲಂಕರಿಸಲು ಕೆಲವು ಪುದೀನ ಎಲೆಗಳು
ಅಲಂಕರಿಸಲು ನಿಂಬೆ ಚೂರುಗಳು
ಮಾಡುವ ವಿಧಾನ
ಮಿಕ್ಸಿ ಜಾರ್ ತೆಗೆದುಕೊಂಡು ಅದರಲ್ಲಿ ಸಕ್ಕರೆ, ತಾಜಾ ಪುದೀನ ಎಲೆಗಳು, ನಿಂಬೆ ರಸ, ಜೀರಿಗೆ ಪುಡಿ, ಕರಿಮೆಣಸು ಪುಡಿ, ಚಾಟ್ ಮಸಾಲ, ಕಪ್ಪು ಉಪ್ಪು, ಉಪ್ಪು, ಶುಂಠಿ ಮತ್ತು ¼ ಕಪ್ ನೀರು ಸೇರಿಸಿ.
ಎಲ್ಲವನ್ನೂ ಚೆನ್ನಾಗಿ ಗ್ರೈಂಡ್ ಮಾಡಿ ಮತ್ತು ನಯವಾದ ಮಿಶ್ರಣವನ್ನು ತಯಾರಿಸಿ.
ಈಗ ಈ ಮಿಶ್ರಣದಿಂದ ರಸವನ್ನು ಸೋಸಿ ತೆಗೆಯಿರಿ.
2-3 ಸರ್ವಿಂಗ್ ಗ್ಲಾಸ್‌ಗಳನ್ನು ತೆಗೆದುಕೊಂಡು, ತಯಾರಾದ ರಸವನ್ನು ಅದಕ್ಕೆ ಸುರಿಯಿರಿ.
ಅದರಲ್ಲಿ ಸ್ವಲ್ಪ ಪುದೀನ ಎಲೆಗಳು, ನಿಂಬೆ ತುಂಡು ಮತ್ತು ಪುಡಿಮಾಡಿದ ಐಸ್ ಅಥವಾ ಐಸ್ ಕ್ಯೂಬ್‌ಗಳನ್ನು ಸೇರಿಸಿ.
ನಂತರ, ಅದರ ಮೇಲೆ ಸೋಡಾವನ್ನು ಸುರಿದು ಕುಡಿಯಲು ಕೊಡಿ.
2. ಸೌತೆಕಾಯಿ ಜ್ಯೂಸ್
ಬೇಕಾಗುವ ಸಾಮಗ್ರಿಗಳು
ಸೌತೆಕಾಯಿ – 2
ಕಪ್ಪು ಉಪ್ಪು- ಚಿಟಿಕೆಯಷ್ಟು
ಪುದೀನಾ ಎಲೆ – ಸ್ವಲ್ಪ
ಸಕ್ಕರೆ – 5 ಚಮಚ
ನಿಂಬೆಹಣ್ಣು – 1
ನೀರು – ಒಂದು ಕಪ್
ಮಾಡುವ ವಿಧಾನ:
ಮೊದಲಿಗೆ ಸೌತೆಕಾಯಿ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ. ನಂತರ ಇದಕ್ಕೆ ಪುದೀನಾ ಎಲೆ, ಕಪ್ಪು ಉಪ್ಪು, ಸಕ್ಕರೆ, ನಿಂಬೆಹಣ್ಣಿನ ರಸ, ನೀರು ಹಾಕಿ ಗ್ರೈಂಡ್ ಮಾಡಿ. ನಂತರ ಇದನ್ನು ಸೋಸಿ ಗ್ಲಾಸ್ ಗೆ ಹಾಕಿದರೆ ಸೌತೆಕಾಯಿ ಜ್ಯೂಸ್ ಸಿದ್ಧ.
3. ಬೆಲ್ಲದ ಜ್ಯೂಸ್
ಬೇಕಾಗುವ ಸಾಮಾಗ್ರಿಗಳು
ಬೆಲ್ಲ – 1 – 2 ಸಣ್ಣ ತುಂಡು
ಶುಂಠಿ ಪೇಸ್ಟ್ – 1/2 ಚಮಚ
ನಿಂಬೆ – 1/2
ಏಲಕ್ಕಿ – 1
ಮಾಡುವ ವಿಧಾನ
ಬೆಲ್ಲವನ್ನು ನೀರಿನಲ್ಲಿ ಕರಗಿಸಿ. ನಂತರ ಇದಕ್ಕೆ ಶುಂಠಿ ಪೇಸ್ಟ್, ನಿಂಬೆ ರಸ, ಏಲಕ್ಕಿ ಪುಡಿಯನ್ನು ಸೇರಿಸಿ. ಚೆನ್ನಾಗಿ ಬೆರೆಸಿ. ಪರಿಮಳಕ್ಕಾಗಿ ಪುದೀನ ಎಲೆಗಳನ್ನು ಸಣ್ಣಗೆ ಹೆಚ್ಚಿ ಸೇರಿಸಿ. ರೆಫ್ರಿಜರೇಟರ್ ನಲ್ಲಿ ಇರಿಸಿ ತಣ್ಣಗಾದ ಮೇಲೆ ಕುಡಿಯಿರಿ.
4. ಬಿರುಬಿಸಿಲಿಗೆ ಚಾಕಲೇಟ್ ಮಿಲ್ಕ್ ಶೇಕ್
ಬೇಕಾಗುವ ಸಾಮಗ್ರಿಗಳು
ತಣ್ಣಗಿನ ಹಾಲು – 1/4 ಲೀಟರ್
ಕೋಕಾ ಪೌಡರ್ – 2 ಚಮಚ
ಸಕ್ಕರೆ – 2-3 ಚಮಚ
ವೆನಿಲ್ಲಾ ಐಸ್ ಕ್ರೀಂ – 1 ಸ್ಕೂಪ್
ಚಾಕಲೇಟ್ ಸಿರಪ್ – 2 ಚಮಚ
ವಿಪ್ಡ್ ಕ್ರೀಮ್/ಐಸ್ ಕ್ರೀಮ್/ಚಾಕಲೇಟ್ ತುರಿ – 1 ಚಮಚ(ಬೇಕಿದ್ದರೆ)
ಐಸ್ ಕ್ಯೂಬ್ – 8
ಮಾಡುವ ವಿಧಾನ
ಮೊದಲು ಹಾಲು, ಕೋಕಾ ಪೌಡರ್, ಸಕ್ಕರೆ, ವೆನಿಲ್ಲಾ ಐಸ್ ಕ್ರೀಂ, 6 ಐಸ್ ಕ್ಯೂಬ್ಸ್ ಗಳನ್ನು ಬ್ಲೆಂಡರ್ ಗೆ ಹಾಕಿ ಬ್ಲೆಂಡ್ ಮಾಡಿ.
ನಂತರ ಚಾಕಲೇಟ್ ಸಿರಪ್ ನಿಂದ ಗ್ಲಾಸನ್ನು ಅಲಂಕರಿಸಿ ಅದಕ್ಕೆ ಬ್ಲೆಂಡ್ ಮಾಡಿದ ಚಾಕಲೇಟ್ ಮಿಲ್ಕ್ ಶೇಕ್ ಅನ್ನು ಸೇರಿಸಿ. ನಂತರ ವಿಪ್ಡ್ ಕ್ರೀಮ್ ಮತ್ತು ಐಸ್ ಕ್ಯೂಬ್ ಅನ್ನು ಮೇಲಿಂದ ಹಾಕಿ ಸರ್ವ್ ಮಾಡಿ.
5 ರುಚಿಕರ , ಸುಲಭ, ಆರೋಗ್ಯಕರ ಸಿಹಿ ತಿಂಡಿಗಳು ರೆಸಿಪಿಗಳು ನಿಮಗಾಗಿ..!
5. ಆರೋಗ್ಯಕರ ಕ್ಯಾರೆಟ್ ಜ್ಯೂಸ್
ಬೇಕಾಗಿರುವ ಸಾಮಗ್ರಿಗಳು :
ಕ್ಯಾರೆಟ್ – 4-5
ಶುಂಠಿ – 1 ಇಂಚು
ನಿಂಬೆ ಹಣ್ಣು – 1
ಪೆಪ್ಪರ್ ಪೌಡರ್ ಸ್ವಲ್ಪ,
ಪುದೀನ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ :
ಮೊದಲು ಕ್ಯಾರೆಟ್ ಗಳನ್ನು ಚೆನ್ನಾಗಿ ತೊಳೆದುಕೊಂಡು, ಅದರ ಸಿಪ್ಪೆಯನ್ನು ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಅದನ್ನು ಜ್ಯೂಸರ್ ನಲ್ಲಿ ಹಾಕಿ, ನೀರು, ಶುಂಠಿ, ನಿಂಬೆ ಹಣ್ಣಿನ ರಸ ಮತ್ತು ಪುದೀನಾ ಸೇರಿಸಿ ಚೆನ್ನಾಗಿ ರುಬ್ಬಿ.
ನಂತರ ಒಂದು ಪಾತ್ರೆಗೆ ರುಬ್ಬಿದ ಮಿಶ್ರಣವನ್ನು ಸೋಸಿ. ಇದಕ್ಕೆ ಪೆಪ್ಪರ್ ಪೌಡರ್, ಉಪ್ಪು ಅನ್ನು ಹಾಕಿ ಚೆನ್ನಾಗಿ ಕಲಸಿ. ಈಗ ಕುಡಿಯಲು ಆರೋಗ್ಯಕರವಾದ ಕ್ಯಾರೆಟ್ ಜ್ಯೂಸ್ ರೆಡಿ.