5 ವಿವಿಧ ಬಗೆಯ ರುಚಿಕರ ವಡೆಗಳ ರೆಸಿಪಿಗಳು
1. ಚಟ್ಟಂಬಡೆ / ಮಸಾಲ ವಡಾ
ಬೇಕಾಗುವ ಪದಾರ್ಥಗಳು
200 ಗ್ರಾಂ ಕಡಲೆ ಬೇಳೆ
3 ಇಂಚು ಶುಂಠಿ
ಬೆಳ್ಳುಳ್ಳಿಯ – 8 ಎಸಳು
1 ಟೀಸ್ಪೂನ್ ಸೋಂಪು ( fennel seeds)
ಚಕ್ಕೆ – 2 ಚೂರು
ಹಸಿಮೆಣಸಿನಕಾಯಿ 5-6
ಕತ್ತರಿಸಿದ ಕರಿಬೇವಿನ ಸೊಪ್ಪು ಸ್ವಲ್ಪ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ
ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ – 1
ಅಗತ್ಯವಿರುವಷ್ಟು ನೀರು
ಡೀಪ್ ಫ್ರೈಗೆ ಎಣ್ಣೆ
ರುಚಿಗೆ ತಕ್ಕಂತೆ ಉಪ್ಪು

ಮಾಡುವ ವಿಧಾನ:
ಹಂತ 1-ಕಡಲೆ ಬೇಳೆಯನ್ನು ಸುಮಾರು 3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
ಹಂತ 2– ಶುಂಠಿ, ಬೆಳ್ಳುಳ್ಳಿ, ಫೆನ್ನೆಲ್ ಬೀಜಗಳು, ಚಕ್ಕೆ, ಹಸಿ ಮೆಣಸಿನಕಾಯಿ, ನೆನೆಸಿದ ಕಡಲೆ ಬೇಳೆಯನ್ನು ನೀರು ಸೇರಿಸದೆ ತರಿತರಿಯಾಗಿ ರುಬ್ಬಿ.
ಹಂತ 3– ನಂತರ ರುಬ್ಬಿದ ಮಿಶ್ರಣವನ್ನು ಒಂದು ಬಟ್ಟಲಿಗೆ ವರ್ಗಾಯಿಸಿ ಅದಕ್ಕೆ ಕತ್ತರಿಸಿದ ಈರುಳ್ಳಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಹಂತ 4– ಈಗ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ ಮತ್ತು ಅವುಗಳನ್ನು ಅಂಗೈಯನ್ನು ಇಟ್ಟುಕೊಂಡು ಒತ್ತಿ ಮತ್ತು ವೃತ್ತಾಕಾರವಾಗಿ ಮಾಡಿ.

ಹಂತ 5– ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ.
ಹಂತ 6– ಮಧ್ಯಮದಿಂದ ಕಡಿಮೆ ಉರಿಯಲ್ಲಿ ಈ ವಡಾಗಳ ಎರಡೂ ಬದಿಯನ್ನು ಡೀಪ್ ಫ್ರೈ ಮಾಡಿ ತೆಗೆಯಿರಿ.
ಚಹಾ ಅಥವಾ ಕಾಫಿಯೊಂದಿಗೆ ಚಟ್ಟಂಬಡೆ/ ಮಸಾಲ ವಡಾ ಸೇವಿಸಿ.
2. ಸಬಕ್ಕಿ/ಸಾಬುದಾನಾ ವಡಾ
ಬೇಕಾಗುವ ಸಾಮಗ್ರಿಗಳು
ಸಬಕ್ಕಿ/ಸಾಬುದಾನಾ – 2 ಕಪ್
ನೆಲಕಡಲೆ/ಶೇಂಗಾ – ಕಾಲು ಕಪ್
ಬೇಯಿಸಿದ ಆಲೂಗಡ್ಡೆ-2-3
ಹಸಿಮೆಣಸಿನಕಾಯಿ ಶುಂಠಿ ಪೇಸ್ಟ್
ರುಚಿಗೆ ತಕ್ಕಷ್ಟು ಉಪ್ಪು
ಕೊತಂಬರಿ ಸೊಪ್ಪು- ಸ್ವಲ್ಪ
ಕರಿಯಲು ಎಣ್ಣೆ

ಮಾಡುವ ವಿಧಾನ
ಸಬಕ್ಕಿ/ಸಾಬುದಾನಾ ಕಾಳುಗಳನ್ನು 1 ರಿಂದ 2 ಬಾರಿ ಗಂಜಿ ಹೋಗುವವರೆಗೆ ಚೆನ್ನಾಗಿ ನೀರಿನಿಂದ ತೊಳೆಯಿರಿ.
ನಂತರ ಸಾಬುದಾನಾ ಕಾಳುಗಳನ್ನು ಬೌಲ್‍ಗೆ ವರ್ಗಾಯಿಸಿ ಕಾಳುಗಳು ಮುಳುಗುವಷ್ಟು ನೀರು ಹಾಕಿ 5-6 ಗಂಟೆ ನೆನೆಯಲು ಬಿಡಿ.
ನೆಲಕಡಲೆ/ಶೇಂಗಾ ಹುರಿದು ತರಿ ತರಿಯಾಗಿ ಪುಡಿ ಮಾಡಿ..
ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು ಪುಡಿ ಮಾಡಿಟ್ಟುಕೊಳ್ಳಿ. ಅದಕ್ಕೆ ಕೊತಂಬರಿ ಸೊಪ್ಪು ತೊಳೆದು ಹೆಚ್ಚಿ ಹಾಕಿ.
ಈಗ ಒಂದು ಪಾತ್ರೆಯಲ್ಲಿ ನೆನೆಸಿಕೊಂಡ ಸಬ್ಬಕ್ಕಿ/ಸಾಬುದಾನ, ನೆಲಕಡಲೆ/ಶೇಂಗಾ ಪುಡಿ, ಪುಡಿ ಮಾಡಿದ ಆಲೂಗಡ್ಡೆ, ಕೊತಂಬರಿ ಸೊಪ್ಪು , ಹಸಿ ಮೆಣಸಿನಕಾಯಿ ಶುಂಠಿ ಪೇಸ್ಟ್, ಉಪ್ಪು ಎಲ್ಲವನ್ನೂ ಹಾಕಿ ಒಟ್ಟಿಗೆ ಚೆನ್ನಾಗಿ ಮಿಶ್ರಮಾಡಿ.
ಇವೆಲ್ಲವನ್ನು ಒಂದು ಹಿಟ್ಟಿನ ಮುದ್ದೆಯಂತೆ ಮಾಡಿ ಚೆನ್ನಾಗಿ ನಾದಿ. ಬಳಿಕ ಸಣ್ಣ ಸಣ್ಣ ಉಂಡೆಗಳನ್ನು ತಯಾರಿಸಿ, ಸ್ವಲ್ಪ ಚಪ್ಪಟೆಯ ಆಕಾರಕ್ಕೆ ತಿರುಗಿಸಿ ಟಿಕ್ಕಿಯನ್ನು ತಯಾರಿಸಿ.
ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಟಿಕ್ಕಿಯನ್ನು ಬಿಡಿ. ಎರಡೂ ಬದಿಯನ್ನು ಹೊಂಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಬೇಯಿಸಿ.
ಬಿಸಿ ಬಿಸಿ ಕ್ರಿಸ್ಪಿ , ಕ್ರಂಚಿ ಸಬಕ್ಕಿ/ಸಾಬುದಾನಾ ವಡಾವನ್ನು ಗ್ರೀನ್ ಚಟ್ನಿ ಮತ್ತು ಟೊಮ್ಯಾಟೋ ಸಾಸ್ ಜೊತೆ ಸವಿಯಿರಿ.
3. ಆಲೂ ಟಿಕ್ಕಿ
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಆಲೂಗಡ್ಡೆ – 6
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಕಪ್
ಹಸಿಮೆಣಸಿನಕಾಯಿ – 3-4
ಮೆಣಸಿನ ಪುಡಿ - 1 ಚಮಚ
ಗರಂಮಸಾಲೆ – 1 ಚಮಚ
ಚಾಟ್ ಮಸಾಲಾ 1 ಚಮಚ
ಕಾರ್ನ್ ಫ್ಲೋರ್ 2 ಚಮಚ
ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಬೇಯಿಸಿದ ಆಲೂಗಡ್ಡೆಗಳನ್ನು ಚೆನ್ನಾಗಿ ಮ್ಯಾಶ್(ಹುಡಿ) ಮಾಡಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು, ಹಸಿಮೆಣಸು, ಮೆಣಸಿನ ಪುಡಿ, ಗರಂಮಸಾಲೆ, ಚಾಟ್ ಮಸಾಲಾ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಕಲಸಿ. ಈಗ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಚಪ್ಪಟೆಯಾಗಿ ತಟ್ಟಿ. ಪ್ಯಾನ್ ಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಟಿಕ್ಕಿಯನ್ನು ಹಾಕಿ ಎರಡೂ ಕಡೆ ಹೊಂಬಣ್ಣ ಬರುವವರೆಗೆ ಹುರಿಯಿರಿ .
ಚಟ್ನಿ ಅಥವಾ ಸಾಸ್ ನೊಂದಿಗೆ ಬಿಸಿಯಾಗಿ ಸವಿಯಿರಿ.
ಸಬ್ಬಸಿಗೆ ಸೊಪ್ಪು – 1 ಕಟ್ಟು
ಕಡಲೆಬೇಳೆ – 1 ಕಪ್
ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು – 2-3
ಕೊತ್ತಂಬರಿ ಸೊಪ್ಪು – ಸ್ವಲ್ಪ
ಜೀರಿಗೆ – 1ಚಮಚ
ಓಮ – 1 ಚಮಚ
ಚಿಕ್ಕದಾಗಿ ಕತ್ತರಿಸಿದ ಶುಂಠಿ – 1 ತುಂಡು
ರುಚಿಗೆ ತಕ್ಕಷ್ಟು ಉಪ್ಪು
ಕರಿಯಲು ಎಣ್ಣೆ
ಅಕ್ಕಿ ಹುಡಿ 2 ಚಮಚ

ಮೊದಲಿಗೆ ಕಡಲೆ ಬೇಳೆಯನ್ನು ನೀರಲ್ಲಿ ತೊಳೆದು 1 ರಿಂದ 2 ಗಂಟೆ ನೆನೆಸಿಡಿ . ಬಳಿಕ ಸಬ್ಬಸಿಗೆ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ.
ನೆನೆಸಿದ ಕಡಲೆ ಬೇಳೆಯನ್ನು ನೀರು ಹಾಕದೆ ಗಟ್ಟಿಯಾಗಿ ರುಬ್ಬಿ.
ಬಳಿಕ ಆ ಹಿಟ್ಟಿಗೆ ಹೆಚ್ಚಿದ ಸೊಪ್ಪು, ಅಕ್ಕಿ ಹುಡಿ, ಶುಂಠಿ, ಉಪ್ಪು, ಜೀರಿಗೆ, ಓಮ ಹಾಕಿ ಚೆನ್ನಾಗಿ ಕಲಸಿ. ನಂತರ ಅದರಿಂದ ಸಣ್ಣ ಉಂಡೆಗಳನ್ನು ತಯಾರಿಸಿ.
ಬಾಣಲೆಯಲ್ಲಿ ಎಣ್ಣೆಯನ್ನು ತೆಗೆದುಕೊಂಡು ಬಿಸಿ ಮಾಡಿ, ಉಂಡೆಗಳನ್ನು ಚಪ್ಪಟೆಯಾಗಿ ತಟ್ಟಿ ಎಣ್ಣೆಯಲ್ಲಿ ಬಿಡಿ. ಕಾದ ಎಣ್ಣೆಯಲ್ಲಿ ಎರಡೂ ಬದಿಗಳನ್ನು ಚೆನ್ನಾಗಿ ಹುರಿದು ತೆಗೆಯಿರಿ.
ಸಬ್ಬಸಿಗೆ ಸೊಪ್ಪಿನ ಅಂಬಡೆ ಸವಿಯಲು ಸಿದ್ಧ.
5. ಪೋಟ್ಯಾಟೋ( ಆಲೂಗಡ್ಡೆ) ಲಾಲಿಪಾಪ್
ಬೇಕಾಗುವ ಸಾಮಾಗ್ರಿಗಳು
ಬೇಯಿಸಿದ ಆಲೂಗಡ್ಡೆ – 2-3
ಸಣ್ಣಗೆ ಹೆಚ್ಚಿದ ಈರುಳ್ಳಿ- 1
ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು – 1/4 ಕಪ್
ಮೆಣಸಿನ ಪುಡಿ – 1 ಚಮಚ
ಧನಿಯಾ ಪುಡಿ – 1/2 ಚಮಚ
ಶುಂಠಿ ಬೆಳ್ಳುಳಿ ಪೇಸ್ಟ್ – 1 ಟೀಸ್ಪೂನ್
ನಿಂಬೆ – 1/2
ಮೈದಾ – 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಕೆಂಪು ಮೆಣಸು – 10-12
ಬ್ರೆಡ್ – 3 ಸ್ಲೈಸ್
ಮಾಡುವ ವಿಧಾನ :
ಮೊದಲನೆಯದಾಗಿ ಬ್ರೆಡ್ ಗಳನ್ನು ಕತ್ತರಿಸಿ ಬ್ಲೆಂಡರ್ ಗೆ ಹಾಕಿ ನೀರನ್ನು ಸೇರಿಸದೆ ನಯವಾಗಿ ಪುಡಿ ಮಾಡಿ. ನಂತರ ಈ ಬ್ರೆಡ್ ಕ್ರಂಬ್ಸ್ ಅನ್ನು ಮಿಕ್ಸಿಂಗ್ ಬೌಲ್ ಗೆ ವರ್ಗಾಯಿಸಿ.

ನಂತರ ಕೆಂಪು ಮೆಣಸುಗಳನ್ನು ಕಡಿಮೆ ಉರಿಯಲ್ಲಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತರ ಅವುಗಳನ್ನು ತರಿತರಿಯಾಗಿ ಹುಡಿ ಮಾಡಿ ಚಿಲ್ಲಿ ಫ್ಲೇಕ್ಸ್ ತಯಾರಿಸಿ
ಈಗ ಬ್ರೆಡ್ ಕ್ರಮ್ಸ್ ಮತ್ತು ಚಿಲ್ಲಿ ಫ್ಲೇಕ್ಸ್ ಒಟ್ಟಿಗೆ ಸೇರಿಸಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ.
ಬಳಿಕ ಬೇಯಿಸಿದ ಆಲೂಗಡ್ಡೆಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ಬ್ರೆಡ್ ಕ್ರಮ್ಸ್, ಮೆಣಸಿನ ಪುಡಿ, ಧನಿಯಾ ಪುಡಿ, ಶುಂಠಿ ಬೆಳ್ಳುಳಿ ಪೇಸ್ಟ್, ನಿಂಬೆ ರಸ, ಉಪ್ಪು ಹಾಗೂ ಸ್ವಲ್ಪ ಮೈದಾ ಹಿಟ್ಟನ್ನು ಹಾಕಿ ಚೆನ್ನಾಗಿ ಕಲೆಸಿರಿ. ನಂತರ ಅದರಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿಕೊಳ್ಳಿ.
ಆನಂತರ ಉಳಿದ ಮೈದಾ ಹಿಟ್ಟಿಗೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ಹದಕ್ಕೆ ಕಲಸಿ.
ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ತಯಾರಿಸಿ ಇಟ್ಟುಕೊಂಡ ಉಂಡೆಗಳನ್ನು ಮೈದಾ ಹಿಟ್ಟಿನ ಪೇಸ್ಟ್ ನಲ್ಲಿ ಅದ್ದಿ ಬ್ರೆಡ್ ಕ್ರಮ್ಸ್ ನಲ್ಲಿ ಉರುಳಿಸಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಹುರಿದು ತೆಗೆಯಿರಿ. ಈಗ ಪೋಟ್ಯಾಟೋ ಲಾಲಿಪಾಪ್ ಅನ್ನು ಟೊಮೆಟೊ ಸಾಸ್ ಜೊತೆ ಸವಿಯಿರಿ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ..








