ಮಕ್ಕಳಿಗೆ ಬಲು ಇಷ್ಟವಾಗುವ 5 ಸ್ನಾಕ್ಸ್/ ತಿಂಡಿಗಳ ರೆಸಿಪಿಗಳು ನಿಮಗಾಗಿ..!
1. ಅಕ್ಕಿ ಹಿಟ್ಟಿನ ವಡೆ
ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು – 1 ಕಪ್
ಮೊಸರು -1 ಕಪ್
ಶುಂಠಿ ತುರಿ -1 ಚಮಚ
ಹಸಿಮೆಣಸು -1
ಈರುಳ್ಳಿ -1
ಕೊತ್ತಂಬರಿ ಸೊಪ್ಪು -ಸ್ವಲ್ಪ
ಇಂಗು -ಚಿಟಿಕೆಯಷ್ಟು
ಕಾಳುಮೆಣಸು – 8
ಜೀರಿಗೆ – 1/4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ಒಂದು ದೊಡ್ಡ ಪಾತ್ರೆಗೆ ಅಕ್ಕಿ ಹಿಟ್ಟು ಹಾಕಿ ಅದಕ್ಕೆ ಮೊಸರು ಮತ್ತು 1 ಕಪ್ ನೀರು ಹಾಕಿ ಗಂಟಿಲ್ಲದಂತೆ ಚೆನ್ನಾಗಿ ಕಲಸಿ. ನಂತರ ಅದಕ್ಕೆ ಉಪ್ಪು, ಇಂಗು, ಜೀರಿಗೆ, ಗುದ್ದಿದ ಕಾಳುಮೆಣಸು , ಶುಂಠಿ ತುರಿ, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು ಸೇರಿಸಿ ಚೆನ್ನಾಗಿ ಬೆರೆಸಿ.
ಬಳಿಕ ಪ್ಯಾನ್ ಗೆ ಈ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಕೈಯಾಡಿಸಿ ನೀರಿನ ಅಂಶವನ್ನು ತೆಗೆದು ಮುದ್ದೆಯ ರೀತಿ ಮಾಡಿ. ನಂತರ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ ಮಿಶ್ರ ಮಾಡಿ. ಇದು ತಣ್ಣಗಾದ ನಂತರ ವಡೆ ರೀತಿಯಲ್ಲಿ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ರುಚಿಯಾದ ಅಕ್ಕಿ ವಡೆ ಸವಿಯಲು ಸಿದ್ಧವಾಗಿದೆ.
ರುಚಿ ಜೊತೆ ಆರೋಗ್ಯಕ್ಕಾಗಿ 5 ಜ್ಯೂಸ್ ಗಳ ರೆಸಿಪಿಗಳು ನಿಮಗಾಗಿ..!
2. ರುಚಿಯಾದ ಬ್ರೆಡ್ ಪಕೋಡ
ಬೇಕಾಗುವ ಸಾಮಗ್ರಿಗಳು
ಬ್ರೆಡ್ – 4 ತುಂಡು
ಬೇಯಿಸಿದ ಆಲೂಗಡ್ಡೆ – 3
ಹಸಿಮೆಣಸಿನಕಾಯಿ – 1
ಶುಂಠಿ – 1 ಇಂಚು
ಮೆಣಸಿನ ಪುಡಿ – 1/2 ಚಮಚ
ಕೊತ್ತಂಬರಿ ಪುಡಿ – 2 ಚಮಚ
ಚಾಟ್ ಮಸಾಲ – 1/2 ಚಮಚ
ಕಡಲೆ ಹಿಟ್ಟು – 1 ಕಪ್
ಅಕ್ಕಿ ಹಿಟ್ಟು – 2 ಚಮಚ
ಸೋಡಾ – ಚಿಟಿಕೆಯಷ್ಟು
ಗ್ರೀನ್ ಚಟ್ನಿ – 4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯವಿರುವಷ್ಟು ನೀರು
ಮಾಡುವ ವಿಧಾನ
ಮೊದಲಿಗೆ ಪಾತ್ರೆಯಲ್ಲಿ ಬೇಯಿಸಿದ ಆಲೂಗಡ್ಡೆ, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು, ಶುಂಠಿ, ಕೊತ್ತಂಬರಿಪುಡಿ, 1/4 ಚಮಚ ಮೆಣಸಿನ ಪುಡಿ, ಚಾಟ್ ಮಸಾಲ ಹಾಕಿ ಚೆನ್ನಾಗಿ ಬೆರೆಸಿ.
ನಂತರ ಬ್ರೆಡ್ ಗೆ ಗ್ರೀನ್ ಚಟ್ನಿ ಸವರಿ. ಅದನ್ನು ಅರ್ಧ ತುಂಡಾಗಿ ಕತ್ತರಿಸಿ. ಒಂದು ಅರ್ಧ ಬ್ರೆಡ್ ತುಂಡಿನ ಮೇಲೆ ಆಲೂಗಡ್ಡೆ ಮಿಶ್ರಣವನ್ನು ಹಾಕಿ ಉಳಿದ ಅರ್ಧ ತುಂಡು ಬ್ರೆಡ್ ಅನ್ನು ಅದರ ಮೇಲಿರಿಸಿ.
ಬಳಿಕ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, 1/4 ಚಮಚ ಮೆಣಸಿನ ಪುಡಿ, ಉಪ್ಪು, ಸೋಡಾ, ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಬ್ರೆಡ್ ಅನ್ನು ಈ ಮಿಶ್ರಣದಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ. ರುಚಿಯಾದ ಬ್ರೆಡ್ ಪಕೋಡ ಸವಿಯಲು ಸಿದ್ಧವಾಗಿದೆ.
10 ಸಿಂಪಲ್ ಮತ್ತು ರುಚಿಕರ ವೆಜ್ ಬಿರಿಯಾನಿ / ಬಾತ್ ಗಳ ರೆಸಿಪಿಗಳು ನಿಮಗಾಗಿ..!
5 ರುಚಿಕರ ಅಡುಗೆಗಳ ರೆಸಿಪಿಗಳು ನಿಮಗಾಗಿ..!
3. ಮೊಟ್ಟೆಯ ಕಬಾಬ್
ಬೇಕಾಗುವ ಸಾಮಗ್ರಿಗಳು
ಮೊಟ್ಟೆಗಳು – 6
ಕೆಂಪು ಮೆಣಸು ಹುಡಿ 2 ಚಮಚ
ಕಡ್ಲೆಹಿಟ್ಟು 2 ಚಮಚ
ಕೊತ್ತಂಬರಿ ಹುಡಿ 1 ಚಮಚ
ಗರಂ ಮಸಾಲ 1/2 ಟೀಸ್ಪೂನ್
ಸಣ್ಣದಾಗಿ ಕತ್ತರಿಸಿದ ಈರುಳ್ಳಿ -1
ಪೆಪ್ಪರ್ ಪುಡಿ 1 ಚಮಚ
ಬ್ರೆಡ್ ಹುಡಿ – 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಹುರಿಯಲು ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಮೊಟ್ಟೆಗಳನ್ನು 15 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ, ಒಂದು ಬಟ್ಟಲಿನಲ್ಲಿ ಮೊಟ್ಟೆಯ ಸಿಪ್ಪೆ ತೆಗೆದು ಅವುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
ಇದರ ನಂತರ, ಪೆಪ್ಪರ್ ಪುಡಿ, ಕೊತ್ತಂಬರಿ ಹುಡಿ, ಈರುಳ್ಳಿ, ಗರಂ ಮಸಾಲ, ಕಡ್ಲೆಹಿಟ್ಟು, ಕೆಂಪು ಮೆಣಸು ಪುಡಿ ಮತ್ತು ಉಪ್ಪು ಸೇರಿಸಿ. ನಂತರ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕತ್ತರಿಸಿದ ಮೊಟ್ಟೆಗಳನ್ನು ಸೇರಿಸಿ ಮಿಶ್ರ ಮಾಡಿ.
ಈಗ ಈ ಮಿಶ್ರಣದಿಂದ ಸಣ್ಣ ಕಬಾಬ್‌ಗಳನ್ನು ತಯಾರಿಸಿ ಅದಕ್ಕೆ ಬ್ರೆಡ್ ಹುಡಿ ಲೇಪಿಸಿ.
ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಂತರ ಕಬಾಬ್‌ಗಳನ್ನು ಬಿಸಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣಕ್ಕೆ ಬರುವವರೆಗೆ ಡೀಪ್ ಫ್ರೈ ಮಾಡಿ. ಬಿಸಿಯಾದ ಮೊಟ್ಟೆಯ ಕಬಾಬ್ ಸವಿಯಲು ಸಿದ್ಧವಾಗಿದೆ.
4. ತರಕಾರಿ ಕಟ್ಲೇಟ್
ಬೇಕಾಗುವ ಸಾಮಗ್ರಿಗಳು
ಕತ್ತರಿಸಿದ ಕ್ಯಾರೆಟ್ – 1/2 ಕಪ್
ಕತ್ತರಿಸಿದ ಬೀನ್ಸ್ – 1/2 ಕಪ್
ಬಟಾಣಿ – 1/4 ಕಪ್
ಕತ್ತರಿಸಿದ ಆಲೂಗಡ್ಡೆ – 1 ಕಪ್
ಬ್ರೆಡ್ ಕ್ರಂಬ್ – 1 ಕಪ್
ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು- ಸ್ವಲ್ಪ
ಹಸಿಮೆಣಸು -2
ಈರುಳ್ಳಿ – 1/4 ಕಪ್
ಕೊತ್ತಂಬರಿ ಹುಡಿ – 1/2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಮೈದಾ – 3 ಚಮಚ
ಗರಂ ಮಸಾಲೆ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮೆಣಸಿನ ಪುಡಿ – 1/2 ಚಮಚ
ಸಾಸಿವೆ – 1 ಚಮಚ
ಎಣ್ಣೆ – 2 ಚಮಚ
ನೀರು – ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಕ್ಯಾರೆಟ್, ಬೀನ್ಸ್, ಬಟಾಣಿ, ಆಲೂಗಡ್ಡೆಗಳನ್ನು ಬೇಯಿಸಿಟ್ಟುಕೊಳ್ಳಿ. ನಂತರ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಸಾಸಿವೆ ಹಾಕಿ. ಅದು ಸಿಡಿದ ಬಳಿಕ ಅದಕ್ಕೆ ಕತ್ತರಿಸಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕತ್ತರಿಸಿದ ಹಸಿಮೆಣಸು ಸೇರಿಸಿ ಈರುಳ್ಳಿ ಕೆಂಪು ಬಣ್ಣಕ್ಕೆ ತಿರುಗುವವರೆಗೆ ತಿರುವಿಕೊಳ್ಳಿ. ನಂತರ ಇದಕ್ಕೆ ಬ್ರೆಡ್ ಕ್ರಂಬ್ಸ್ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರ ಮಾಡಿ.
ನಂತರ ಇದಕ್ಕೆ ಬೇಯಿಸಿಟ್ಟುಕೊಂಡ ತರಕಾರಿ, ಮೆಣಸಿನ ಪುಡಿ, ಕೊತ್ತಂಬರಿಪುಡಿ, ಗರಂ ಮಸಾಲಾ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಇದು ಹಿಟ್ಟಿನ ಹದಕ್ಕೆ ಬರುವವರೆಗೆ ಬೇಯಿಸಿಕೊಂಡು ಕಟ್ಲೆಟ್ ಮಾಡಿಕೊಳ್ಳಿ. ಬಳಿಕ ಮೈದಾ ಹಿಟ್ಟಿಗೆ ಸ್ವಲ್ಪ ನೀರನ್ನು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಹಿಟ್ಟನ್ನು ಮಾಡಿಕೊಳ್ಳಿ. ಈಗ ತವಾ ಬಿಸಿ ಮಾಡಿ. ನಂತರ ಕಟ್ಲೆಟ್ ಅನ್ನು ಮೈದಾ ಹಿಟ್ಟಿನಲ್ಲಿ ಮುಳುಗಿಸಿ ಬ್ರೆಡ್ ಕ್ರಂಬ್ಸ್ ಇರುವ ತಟ್ಟೆಯಲ್ಲಿ ಅದ್ದಿ ತವಾದಲ್ಲಿ ಕಾಯಿಸಿ. ಎರಡೂ ಬದಿಗೆ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿ ತೆಗೆಯಿರಿ.