ADVERTISEMENT
Tuesday, April 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

ಮನೆಯಲ್ಲಿ ಟ್ರೈ ಮಾಡಿ ಈ 5 ಸಿಂಪಲ್ ಮತ್ತು ರುಚಿಕರ ರೆಸಿಪಿಗಳನ್ನ..!

Namratha Rao by Namratha Rao
November 16, 2021
in Cooking, Newsbeat, ಅಡುಗೆ
food
Share on FacebookShare on TwitterShare on WhatsappShare on Telegram

ಹಲಸಿನ ಹಣ್ಣಿನ ಪೂರಿ

ಬೇಕಾಗುವ ಸಾಮಗ್ರಿಗಳು

ಹಲಸಿನ ಹಣ್ಣಿನ ತೊಳೆ -1 ಕಪ್
ಗೋಧಿ ಹುಡಿ – 2 ಕಪ್
ಓಮದ ಕಾಳು – 1/2 ಟೀ ಚಮಚ
ರುಚಿಗೆ ತಕ್ಕಷ್ಟು ಉಪ್ಪು

Related posts

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

April 7, 2026
ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವದಂತಿಗಳಿಗೆ ಬ್ರೇಕ್ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದ ಗೃಹ ಸಚಿವ ಜಿ ಪರಮೇಶ್ವರ್

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವದಂತಿಗಳಿಗೆ ಬ್ರೇಕ್ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದ ಗೃಹ ಸಚಿವ ಜಿ ಪರಮೇಶ್ವರ್

April 7, 2026

ಮಾಡುವ ವಿಧಾನ

ಮೊದಲಿಗೆ ಹಲಸಿನ ತೊಳೆಗಳನ್ನು ಮಿಕ್ಸಿ ಜಾರಿಗೆ ‌ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ನುಣ್ಣಗೆ ರುಬ್ಬಿದ ಹಲಸಿನ ತೊಳೆ, ಓಮ, ಗೋಧಿ ಹುಡಿ, ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ. ಪೂರಿ ಹಿಟ್ಟಿನ ಹದಕ್ಕೆ ಮಿಶ್ರಣವನ್ನು ಕಲಸಿಕೊಳ್ಳಿ. ‌ ನಂತರ ನಿಂಬೆ ಗಾತ್ರದ ಉಂಡೆಗಳನ್ನು ಮಾಡಿ.
ಬಳಿಕ ಪ್ಲಾಸ್ಟಿಕ್ ಗೆ ಸ್ವಲ್ಪ ಎಣ್ಣೆ ಸವರಿ ಅದರ ಮೇಲೆ ಉಂಡೆಗಳನ್ನು ಇಟ್ಟು ಪೂರಿಗಳನ್ನು ಲಟ್ಟಿಸಿಕೊಳ್ಳಿ.
ಈಗ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಪೂರಿಗಳನ್ನು ಕಾಯಿಸಿ. ಎರಡೂ ಬದಿಯೂ ಕೆಂಪಗಾಗುವವರೆಗೆ ಹುರಿದು ತೆಗೆಯಿರಿ. ಬಿಸಿ ಬಿಸಿಯಾದ ಹಲಸಿನ ಹಣ್ಣಿನ ಪೂರಿಯನ್ನು ಚಟ್ನಿಯೊಂದಿಗೆ ಸವಿಯಿರಿ.

ಆರೋಗ್ಯಕರ ಕಾರ್ನ್ ಸೂಪ್

ಬೇಕಾಗುವ ಸಾಮಗ್ರಿಗಳು

ರೆಗ್ಯುಲರ್ ಕಾರ್ನ್ 1
ಮಿಕ್ಸಡ್ ತರಕಾರಿಗಳು 1 ಬೌಲ್
ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಪೇಸ್ಟ್ 1 ಟೀಸ್ಪೂನ್
ಬೆಣ್ಣೆ
ಉಪ್ಪು ರುಚಿಗೆ ತಕ್ಕಷ್ಟು
ಸಕ್ಕರೆ ಅಗತ್ಯವಿರುವಷ್ಟು
ಮೆಣಸಿನ ಹುಡಿ ಅಗತ್ಯವಿರುವಷ್ಟು
ನಿಂಬೆ ಅಗತ್ಯವಿರುವಷ್ಟು
Saakshatv cooking recipe how to prepare corn soup

ಮಾಡುವ ವಿಧಾನ
ಜೋಳವನ್ನು ಬೇಯಿಸಿ. ನಂತರ ಅರ್ಧದಷ್ಟು‌ ಜೋಳವನ್ನು ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ತರಕಾರಿಗಳನ್ನು ಬೇಯಿಸಿ. ನಂತರ ಒಂದು ಕಡಾಯಿಯನ್ನು ‌ಬಿಸಿ ಮಾಡಿ. ಅದಕ್ಕೆ ಬೆಣ್ಣೆಯನ್ನು ‌ಸೇರಿಸಿ. ಬಳಿಕ ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿ ಫ್ರೈ ಮಾಡಿ. ಅದಕ್ಕೆ ಬೇಯಿಸಿದ ತರಕಾರಿಗಳನ್ನು ಸೇರಿಸಿ. ಆ ಬಳಿಕ ಬೇಯಿಸಿದ ಜೋಳ ಮತ್ತು ರುಬ್ಬಿದ ಜೋಳವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸಕ್ಕರೆ ಮೆಣಸು ಸೇರಿಸಿ ಕುದಿಸಿ. ಕೊನೆಗೆ ‌ನಿಂಬೆರಸವನ್ನು ಹಿಂಡಿ.‌
ಆರೋಗ್ಯಕರವಾದ ಕಾರ್ನ್ ಸೂಪ್ ಸವಿಯಲು ಸಿದ್ಧ.

ಅವಲಕ್ಕಿ ಉಪ್ಪಿಟ್ಟು

ಬೇಕಾಗುವ ಸಾಮಗ್ರಿಗಳು

ಅವಲಕ್ಕಿ – 1 ಕಪ್
ಸಾಸಿವೆ – 1/4 ಚಮಚ
ಒಣಮೆಣಸು – 2
ಉದ್ದಿನಬೇಳೆ – 1/4 ಚಮಚ
ಕಡ್ಲೆ ಬೇಳೆ – 1/4 ಚಮಚ
ಕರಿಬೇವಿನ ಸೊಪ್ಪು – ಸ್ವಲ್ಪ
ಚಿಕ್ಕದಾಗಿ ಹೆಚ್ಚಿದ ಈರುಳ್ಳಿ – 1
ಕತ್ತರಿಸಿದ ಹಸಿ ಮೆಣಸಿನಕಾಯಿ – 2
ಸಣ್ಣಗೆ ಹೆಚ್ಚಿದ ಶುಂಠಿ – 1 ಇಂಚು
ಚಿಟಿಕೆ ಇಂಗು
ರುಚಿಗೆ ತಕ್ಕಷ್ಟು ಉಪ್ಪು
ಸ್ವಲ್ಪ ಅರಿಶಿನ
ತೆಂಗಿನಕಾಯಿ ತುರಿ – 1/2 ಕಪ್
ನಿಂಬೆಹಣ್ಣು – 1/2
ಎಣ್ಣೆ
Saakshatv cooking recipe avalakki oppittu

ಮಾಡುವ ವಿಧಾನ
ಮೊದಲಿಗೆ ಅವಲಕ್ಕಿಯನ್ನು ಚೆನ್ನಾಗಿ ತೊಳೆದು, 5 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ಬಳಿಕ ಸಾಸಿವೆಯನ್ನು‌ ಸೇರಿಸಿ. ಸಾಸಿವೆ ‌ಸಿಡಿದ ಬಳಿಕ ಒಣಮೆಣಸಿನಕಾಯಿ, ಉದ್ದಿನಬೇಳೆ, ಕಡ್ಲೆ ಬೇಳೆ, ಕರಿಬೇವಿನ ಸೊಪ್ಪು, ಈರುಳ್ಳಿ , ಹಸಿ ಮೆಣಸಿನಕಾಯಿ, ಶುಂಠಿ, ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಸೇರಿಸಿ. ಚೆನ್ನಾಗಿ ಬೆರೆಸಿ. ‌ಈರುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ನೆನೆಸಿಟ್ಟ ಅವಲಕ್ಕಿ ಮತ್ತು ತೆಂಗಿನ ಕಾಯಿತುರಿಯನ್ನು ಸೇರಿಸಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಬೆರೆಸಿ.
ನಂತರ ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ‌ಮತ್ತು ಲಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ರುಚಿಯಾದ ಅವಲಕ್ಕಿ ಉಪ್ಪಿಟ್ಟು‌ ಸವಿಯಲು ಸಿದ್ಧವಾಗಿದೆ.

ರುಚಿಯಾದ ಕ್ಯಾಪ್ಸಿಕಂ ಬಾತ್

ಬೇಕಾಗುವ ಸಾಮಾಗ್ರಿಗಳು

ಅಕ್ಕಿ – 1 ಕಪ್
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ – 1 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಜೀರಿಗೆ – 1/2 ಚಮಚ
ಟೊಮೆಟೊ – 1
ಅರಿಶಿನ – ಚಿಟಿಕೆ
ಬೆಳ್ಳುಳ್ಳಿ ಶುಂಠಿ ಪೇಸ್ಟ್ – 1 ಚಮಚ
ಮೆಣಸಿನ ಹುಡಿ – 1/2 ಚಮಚ
ಪಾವ್ ಬಾಜಿ ಮಸಾಲೆ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿ ಸೊಪ್ಪು ಸ್ವಲ್ಪ
Capsicum bath
ತಯಾರಿಸುವ ವಿಧಾನ

ಮೊದಲು ಉದುರುದುರಾಗಿ ಅನ್ನ ಮಾಡಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ‌ನಂತರ ಸಣ್ಣದಾಗಿ ಕತ್ತರಿಸಿದ ಟೊಮೆಟೊ ಸೇರಿಸಿ. ಮೃದುವಾಗುವವರೆಗೆ ಬೇಯಿಸಿ. ಬಳಿಕ ಉಪ್ಪು, ಅರಿಶಿನ, ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ ಸಣ್ಣ ಉರಿಯಲ್ಲಿ ಹುರಿಯಿರಿ. ಈಗ ಅದಕ್ಕೆ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ ಸೇರಿಸಿ ಬೇಯಿಸಿಕೊಳ್ಳಿ. ಬಳಿಕ ಮೆಣಸಿನ ಪುಡಿ ಮತ್ತು ಪಾವ್ ಬಾಜಿ ಮಸಾಲೆ ಸೇರಿಸಿ 5 ನಿಮಿಷ ಚೆನ್ನಾಗಿ ಕಲಸಿ. ನಂತರ ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಅನ್ನ ಸೇರಿಸಿ ಚೆನ್ನಾಗಿ ಬೆರೆಸಿ. ರುಚಿಯಾದ ಕ್ಯಾಪ್ಸಿಕಂ ಬಾತ್ ಸವಿಯಲು ಸಿದ್ಧವಾಗಿದೆ.

ಪಾವ್ ಭಾಜಿ

ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ – 3
ಹೂಕೋಸು – 11/2 ಕಪ್
ಕ್ಯಾರೆಟ್ – 1/2 ಕಪ್
ಬಟಾಣಿ – 1/2 ಕಪ್
ಈರುಳ್ಳಿ -2
ಟೊಮ್ಯಾಟೊ – 2
ಕ್ಯಾಪ್ಸಿಕಂ -1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಎವರೆಸ್ಟ್ ಪಾವ್ ಭಾಜಿ ಮಸಾಲ – 2 ಟೀಸ್ಪೂನ್
ಮೆಣಸಿನ ಪುಡಿ – 2 ಟೀಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು
Saakshatv cooking recipe paavu baji

ತಯಾರಿಸುವ ವಿಧಾನ

ಮೊದಲಿಗೆ ಆಲೂಗಡ್ಡೆ, ಹೂಕೋಸು, ಕ್ಯಾರೆಟ್ ಮತ್ತು ಬಟಾಣಿಗಳನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ.‌ ನಂತರ ಆಲೂಗಡ್ಡೆಯ ಸಿಪ್ಪೆ ತೆಗೆದು ಎಲ್ಲವನ್ನು ಹುಡಿ ಮಾಡಿ ಮತ್ತು ಪಕ್ಕದಲ್ಲಿ ಇರಿಸಿಕೊಳ್ಳಿ.

ನಂತರ ಈರುಳ್ಳಿ, ಟೊಮ್ಯಾಟೊ ಮತ್ತು ಕ್ಯಾಪ್ಸಿಕಂ ಅನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಬಳಿಕ ಬಾಣಲೆಯಲ್ಲಿ 1 ಟೀಸ್ಪೂನ್ ಬೆಣ್ಣೆಯನ್ನು ಬಿಸಿ ಮಾಡಿ. ‌ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸಿ ಮಧ್ಯಮ ಉರಿಯಲ್ಲಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಬಳಿಕ ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಟೊಮೆಟೊ ಸೇರಿಸಿ. ಟೊಮೆಟೊ ಮೃದುವಾಗುವವರೆಗೆ ಬೇಯಿಸಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಉತ್ತಮ ಸುವಾಸನೆ ಬರುವವರೆಗೆ ಹುರಿಯಿರಿ. ಈಗ ಅದಕ್ಕೆ ಬೇಯಿಸಿ ಪುಡಿ ಮಾಡಿದ ತರಕಾರಿಗಳನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಎವರೆಸ್ಟ್ ಪಾವ್ ಭಾಜಿ ಮಸಾಲ ಮತ್ತು ಮೆಣಸಿನ ಪುಡಿ ಸೇರಿಸಿ. ಚೆನ್ನಾಗಿ ಬೆರೆಸಿ. ಮಧ್ಯಮ ಉರಿಯಲ್ಲಿ ಸುಮಾರು 10 ನಿಮಿಷ ಬೇಯಿಸಿ. ಕೊನೆಯದಾಗಿ ಸ್ವಲ್ಪ ಬೆಣ್ಣೆ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

Tags: #saakshatvcookingFood
ShareTweetSendShare
Join us on:

Related Posts

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟ ಮಾಡಿದರೆ ಕಠಿಣ ಕ್ರಮ ಗೃಹ ಸಚಿವ ಜಿ ಪರಮೇಶ್ವರ್ ಖಡಕ್ ಎಚ್ಚರಿಕೆ

by Shwetha
April 7, 2026
0

ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲ ಸಿಲಿಂಡರ್ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುವ ದಂಧೆಕೋರರ ವಿರುದ್ಧ ನಿರ್ದಾಕ್ಷಿಣ್ಯ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು...

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವದಂತಿಗಳಿಗೆ ಬ್ರೇಕ್ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದ ಗೃಹ ಸಚಿವ ಜಿ ಪರಮೇಶ್ವರ್

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ವದಂತಿಗಳಿಗೆ ಬ್ರೇಕ್ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದ ಗೃಹ ಸಚಿವ ಜಿ ಪರಮೇಶ್ವರ್

by Shwetha
April 7, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಕುರಿತು ಕೇಳಿಬರುತ್ತಿರುವ ಬಿಸಿಬಿಸಿ ಚರ್ಚೆಗಳು ಮತ್ತು ವದಂತಿಗಳಿಗೆ ಗೃಹ ಸಚಿವ ಜಿ ಪರಮೇಶ್ವರ್ ಇದೀಗ...

ಬಸ್ ಟಿಕೆಟ್ ದರ ಏರಿಕೆ ಇಲ್ಲ: ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ

ಬಸ್ ಟಿಕೆಟ್ ದರ ಏರಿಕೆ ಇಲ್ಲ: ಸಚಿವ ರಾಮಲಿಂಗರೆಡ್ಡಿ ಸ್ಪಷ್ಟನೆ

by Shwetha
April 7, 2026
0

ಸದ್ಯಕ್ಕೆ ಸಾರಿಗೆ ಬಸ್‌ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಸ್...

ಮಹಿಳಾ ಪಿಎಸ್ಐಗೆ ಬೆದರಿಕೆ : ಖಾಕಿಗೇ ಕಂಟಕವಾದ ಪುಂಡಾಟಿಕೆ ಇದು ಬಿಹಾರ ಅಲ್ಲ ಕರುನಾಡು ಮಹಿಳಾ ಪಿಎಸ್ಐಗೆ ದಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದರೂ ಮೌನವೇಕೆ

ಮಹಿಳಾ ಪಿಎಸ್ಐಗೆ ಬೆದರಿಕೆ : ಖಾಕಿಗೇ ಕಂಟಕವಾದ ಪುಂಡಾಟಿಕೆ ಇದು ಬಿಹಾರ ಅಲ್ಲ ಕರುನಾಡು ಮಹಿಳಾ ಪಿಎಸ್ಐಗೆ ದಮ್ಕಿ ಹಾಕಿ ಹಲ್ಲೆಗೆ ಯತ್ನಿಸಿದರೂ ಮೌನವೇಕೆ

by Shwetha
April 7, 2026
0

ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆಯೇ ಎಂಬ ಆತಂಕಕಾರಿ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ರಾಜ್ಯದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲದಂತಹ ವಾತಾವರಣ ನಿರ್ಮಾಣವಾಗುತ್ತಿರುವುದು...

ರಾಜ್ಯಕ್ಕೆ ನೀಡಬೇಕಾದ ಕನಿಷ್ಠ ಅನಿಲ ಪೂರೈಕೆ ಮಾಡಲಿ: ಪರಮೇಶ್ವರ್

ರಾಜ್ಯಕ್ಕೆ ನೀಡಬೇಕಾದ ಕನಿಷ್ಠ ಅನಿಲ ಪೂರೈಕೆ ಮಾಡಲಿ: ಪರಮೇಶ್ವರ್

by Shwetha
April 7, 2026
0

ರಾಜ್ಯಕ್ಕೆ ಕೇಂದ್ರ ಸರ್ಕಾರ ನೀಡಬೇಕಾದ ಕನಿಷ್ಠ ಅನಿಲ ಪೂರೈಕೆ ಆಗದಿರುವುದರಿಂದ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಸಚಿವ G. ಪರಮೇಶ್ವರ್ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ರಾಜ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram