ಬಹಳ ಟೇಸ್ಟಿ ಮತ್ತು ಡಯೇಟ್ ಗೂ ಉತ್ತಮವಾದ ಟೊಮೇಟೋ ಚಾಟ್ …!!!
Tomato chat
ಪದಾರ್ಥಗಳು
ಆಪಲ್ ಟೊಮೇಟೋ ( ನಿಮಗೆ ಬೇಕಾದ ಪಪ್ರಮಾಣದಲ್ಲಿ ತೆಗೆದುಕೊಳ್ಳಿ )
ಆಮ್ ಚುರಿ ಪೌಡರ್ ( ಆಪ್ಷನಲ್ )
ಪೆಪ್ಪರ್ ಪೌಡರ್
ಉಪ್ಪು ರುಚಿಗೆ ತಕ್ಕಷ್ಟು
ಮೆಣಸಿನ ಕಾಯಿ ಪುಡಿ ಅಥವ ಮನೆಯಲ್ಲಿ ತಯಾರಿಸಿದ ಸಾಂಬರ್ ಪುಡಿ
ಚಾಟ್ ಮಸಾಲಾ ( ಆಪ್ಷನಲ್ )
ಕ್ಯಾರೋಟ್ ತುರಿ
ಕೊತ್ತಂಬರಿ
ನಿಂಬೆ ಹಣ್ಣು
ಮಾಡುವ ವಿಧಾನ : ಆಪಲ್ ಟೊಮೇಟೋಗಳನ್ನ ಸ್ವಚ್ಛವಾಗಿ ತೊಳೆದು ಅದನ್ನ ಪೂರ್ತಿ ಹೆಚ್ಚದೇ ಕೇವಲ ಮುಕ್ಕಾಲು ಭಾಗದ ವರೆಗೂ ನಾಲ್ಕ ಕಟ್ ನಲ್ಲಿ ಪೀಸ್ ಮಾಡಿ ( ತೋತಾಪುರಿ ಮಾವಿನ ಕಾಯಿ ಕಟ್ ಮಾಡುವ ರೀತಿಯಲ್ಲಿ )… ಅದರ ಒಳಗೆ ಬೇಕಿದ್ದಲ್ಲಿ ಮೊದಲು ನಿಂಬೆರಸ ಹಿಂಡಿಕೊಳ್ಳಿ ನಂತರ ಅದರೊಳಗೆ ಸಾಂಬರ್ ಪುಡಿ ಅಥವ ಕಾರದ ಪುಡಿ ಹಾಕಿಕೊಳ್ಳಿ ರುಚಿಗೆ ತಕ್ಕಷ್ಟು , ಉಪ್ಪು ಹಾಕಿ, ಬೇಕಿದ್ದಲ್ಲಿ ಪೆಪ್ಪರ್ ಪೌಡರ್ ಹಾಕಿಕೊಳ್ಳಿ… ನಂತರ ಬೇಕಿದ್ದರಷ್ಟೇ ಒಂದೋ ಆಮ್ ಚುರಿ ಪೌಡರ್ ( ನಿಂಬೆ ಹಣ್ಣು ಹಾಕದೇ ಇದ್ದರೆ ಮಾತ್ರ ) ಅಥವ ಚಾಟ್ ಮಸಾಲಾ ಹಾಕಿಕೊಳ್ಳಿ ಬೇಕಿದ್ದಲ್ಲಿ ಎರೆಡನ್ನೂ ಸ್ಕಿಪ್ ಮಾಡಬಹುದು.. ಆನಂತರ ಅದರೊಳಗೆ ಕ್ಯಾರೋಟ್ ತುರಿ ತುಂಬಿರಿ.. ಕೊತ್ತಂಬರಿ ಸೊಪ್ಪು ಸೇರಿಸಿ.. ಸವಿಯಲು ಸಿದ್ಧವಾಗುತ್ತದೆ.. ತುಂಬಾ ಈಸಿ , ಸಿಂಪಲ್ , ಆರೋಗ್ಯಕ್ಕೂ ಉತ್ತಮ.. ತೂಕ ನಷ್ಟ ಮಾಡಬೇಕು ರುಚಿಯೂ ಬೇಕು ಅನ್ನೋರಿಗೆ ಒಳ್ಳೆಯ ಆಯ್ಕೆ..







